ಶಿಗ್ಗಾವ್

ಸತತ ನಾಲ್ಕನೇ ವರ್ಷ 100 ಪ್ರತಿಶತ ಮಾಡಿದ ಶಾಲೆ ಫಿನಿಕ್ಸ್ ಕಾನ್ವೆಂಟ್ ಶಾಲೆ

ಸತತ ನಾಲ್ಕನೇ ವರ್ಷ 100 ಪ್ರತಿಶತ ಮಾಡಿದ ಶಾಲೆ ಫಿನಿಕ್ಸ್ ಕಾನ್ವೆಂಟ್ ಶಾಲೆ

ಶಿಗ್ಗಾವಿ 10: ತಾಲೂಕಿನಲ್ಲಿಯೇ ಸತತ ನಾಲ್ಕನೇಯ ವರ್ಷ 100 ಪ್ರತಿಶತ ಮಾಡಿದ ತಾಲೂಕಿನ ಏಕೈಕ ಪ್ರತಿಷ್ಟಿತ ಫಿನಿಕ್ಸ ಕಾನ್ವೇಂಟ ಶಾಲೆ ಎಂದು ಸಂಸ್ಥೆ ಅಧ್ಯಕ್ಷ ಡಾ. ಎಂ.ಎಂ.ತಿರ್ಲಾಪೂರ ಹೇಳಿದರು. 

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2017ಶೈಕ್ಷಣಿಕ ವರ್ಷದಿಂದ 2021ಶೈಕ್ಷಣಿಕ ವರ್ಷದವರೆಗೆ ಸತತವಾಗಿ ನಾಲ್ಕು ವರ್ಷ 100 ಪ್ರತಿಶತ ಮಾಡಿದ್ದು ನಮ್ಮ ಸಂಸ್ಥೆಯ ಹೆಮ್ಮೆ ಏಕೆಂದರೆ ಆಡಳಿತ ಮಂಡಳಿ ಪರಿಣಾಮಕಾರಿ ಯೋಜನೆಗಳು ಹಾಗೂ ನಮ್ಮ ಶಾಲೆ ಶಿಕ್ಷಕ ಹಾಗೂ ಶಿಕ್ಷಕಿಯರ ಸತತ ಪರಿಶ್ರಮ, ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಆಯೋಜನೆ, ಬೇರೆ ಬೇರೆ ಪ್ರತಿಷ್ಠಿತ ಸಂಸ್ಥೆಯ ಉಪನ್ಯಾಸಕರ ಮೂಲಕ  ಸಂವಾದ,  ಜ್ಞಾನಾರ್ಜನೆ ಹೆಚ್ಚಲು ಸಂಸ್ಥೆಯಲ್ಲಿ ವಿಶೇಷ ಗ್ರಂಥ ಬಂಡಾರದ ವ್ಯವಸ್ಥೆ, ವಿಧ್ಯಾರ್ಥಿಗಳ ಪಾಲಕ ಪೋಷಕರ ಜೊತೆಗೆ ಮಕ್ಕಳ ವಿಧ್ಯಾರ್ಥಿಗಳ ಪ್ರಗತಿ ಪರೀಶೀಲನೆಯ ಚರ್ಚೆ ಅಲ್ಲದೇ ಕಳೆದ ನಾಲ್ಕೈದು ವರ್ಷದ ಪ್ರಶ್ನೆ ಪತ್ರಿಕೆಗಳ ಮಾದರಿಯ ಮುಖಾಂತರ ವಿದ್ಯಾರ್ಥಿಗಳಿಗೆ ನಮನ ಮಾಡಿ ಕೊಡುವುದು, ಕಡಿಮೆ ಅಂಕ ಪಡೆಯುವ ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ನಮ್ಮ ಸಂಸ್ಥೆ ವಿಶೇಷ ಈ ತರಹದ ವಿನೂತನ ಪ್ರಯತ್ನಗಳ ಮೂಲಕ ಪೀನಿಕ್ಸ ಸಂಸ್ಥೆ ಹೆಚ್ಚು ಪ್ರತಿಶತ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು. 

2020-21 ನೇ ಸಾಲಿನಲ್ಲಿ ಒಟ್ಟು 45 ವಿದ್ಯಾರ್ಥಿಗಳು ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಹಾಜರಾಗಿದ್ದು 45 ವಿದ್ಯಾರ್ಥಿಗಳು ಡಿಶ್ಟಿಕ್ಷನ್ನ 6, ಪ್ರಥಮ ದರ್ಜೆ ಶ್ರೇಣಿ 26, ದ್ವಿತೀಯ ದರ್ಜೆ ಶ್ರೇಣಿ 10, 03 ಪಾಸಾಗಿದ್ದು ಅದರಲ್ಲಿ ಕುಮಾರಿ ಗಾಯತ್ರಿ.ಚ.ಅಂಗಡಿ 95 ಅ ಪ್ರತಿಶತ ಮಾಡಿ ಶಾಲೆಗೆ ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಹೆಚ್‌. ದ್ರಾಕ್ಷಾಯಣಿ 94 ಅ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು. 

ಸಂಸ್ಥೆಯ ಕಾರ್ಯದರ್ಶಿ ಡಾಽಽ ರಾಣಿ.ಎಮ್‌.ತಿರ್ಲಾಪೂರ, ಪ್ರಾಂಶಪಾಲೆ ಅಪ್ರೋಜಾ, ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ