ಅತಿಕ್ರಮಣಗೊಂಡ ಸರ್ಕಾರಿ ಜಾಗೆ ಸರ್ಕಾರದ ವಶಕ್ಕೆ ಪಡೆಯಲು ಮನವಿ : ಗುಡ್ಡೇಕಲ್ ಬಸಪ್ಪ ನಾಯಕ
ಗಂಗಾವತಿ 20: ಗಂಗಾವತಿ ನಗರದಲ್ಲಿ ನಡೆದ ಜನತಾದರ್ಶನ ವೇದಿಕೆಯಲ್ಲಿ ಗುರುವಾರ ಗುಡ್ಡೇಕಲ್ ಬಸಪ್ಪ ನಾಯಕ ಮಾಜಿ ನಗರಸಭೆ ಅಧ್ಯಕ್ಷರು ನಗರದಲ್ಲಿರುವ ಅಮೂಲ್ಯವಾದ ಜಮೀನುಗಳನ್ನು ಒಂದೇ ಕುಟುಂಬಕ್ಕೆ ಸೇರಿದವರು ಸರ್ಕಾರದ ಜಮೀನು ಹಾಗೂ ಜಾಗೆಯನ್ನು ಕಬ್ಬಾ ಮಾಡಿಕೊಂಡಿರುವುದನ್ನು ಖಂಡಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ನಗರದ ವಾರ್ಡ್ ನಂ: 35 ವಿರುಪಾಪುರ ತಾಂಡದಲ್ಲಿ ಸವೇ ನಂ: 56/*/* ವಿಸ್ತೀರ್ಣ 05-32 ಎ-ಗುಂ ನಗರಸಭೆ ಜಾಗೆಯಲ್ಲಿ 01-00 ಎಕರೆ ಜಾಗೆಯನ್ನು ಒತ್ತುವರಿ ಮಾಡಿ ಕೆ. ತಾಯಿಕುಮಾರ ತಂ. ಕೊಲ್ಲಿ ಕಾಳಿವರ್ರಸಾದ ಇವರು ಅತಿಕ್ರಮಿಸಿಕೊಂಡು ಕಂಪೌಂಡ್ ಗೋಡೆ ನಿರ್ಮಿಸಿಕೊಂಡಿರುತ್ತಾರೆ.
ಅಲ್ಲದೇ ಎಲ್. ಗಂಗಾಧರ ತಂ. ಎಲ್.ವಿ ಸತ್ಯನಾರಾಯಣ ಮತ್ತು ಕೊಲ್ಲಿ ಕಾಳಿವರ್ರಸಾದ ತಂ. ಗಂಗಯ್ಯ ಇವರುಗಳು ಗಂಗಾವತಿಯ ಸರ್ವೇ ನಂ: 32/1ಬಿ2 ವಿಸ್ತೀರ್ಣ 03-05 ಎ-ಗುಂ, ಸರ್ವೇ ನಂ: 32/3ಬಿ ವಿಸ್ತೀರ್ಣ 00-25 ಎ-ಗುಂ, ಸರ್ವೆ ನಂ: 32/3ಎ ವಿಸ್ತೀರ್ಣ 00-39 ಎ-ಗುಂ ಒಟ್ಟು ಕ್ಷೇತ್ರ 04-29 ಎ-ಗುಂ ಭೂಮಿಯನ್ನು 1998-99ನೇ ಸಾಲಿನಲ್ಲಿ ಖೊಟ್ಟಿ ಪಹಣಿ ಪತ್ರಿಕೆ ಸೃಷ್ಟಿಸಿಕೊಂಡು ಅತಿಕ್ರಮಿಸಿಕೊಂಡಿರುತ್ತಾರೆ.
ಕೊಲ್ಲಿ ಕಾಳಿವರಪ್ರಸಾದ ತಂ. ಗಂಗಯ್ಯ ಹಾಗೂ ಇವರ ಮಗನಾದ ಕೊಲ್ಲಿ ಸಂತೋಷ ಕಾಳಿವರಪ್ರಸಾದ ತಂ. ಕೊಲ್ಲಿ ಕಾಳಿವರ್ರಸಾದ ಇವರುಗಳು ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಸರ್ವೇ ನಂ: 201 ಕ್ಷೇತ್ರ 09-27 ಎ-ಗುಂ ಹಾಗೂ ಸರ್ವೇ ನಂ: 203 ವಿಸ್ತೀರ್ಣ 02-14 ಎ-ಗುಂ ಜಮೀನುಗಳನ್ನು ಖರೀದಿ ಮಾಡಿದ್ದು, ಆದರೆ ಅದರ ಜೊತೆಗೆ ಸರ್ವೇ ನಂ: 204/* ವಿಸ್ತೀರ್ಣ 615-24 ಎ-ಗುಂ ಪರಂಪೋಕು ಸರಕಾರಿ ಕಾಯ್ದಿಟ್ಟ ಅರಣ್ಯ ಜಮೀನಿನಲ್ಲಿ 12-01 ಎ-ಗುಂ ಜಮೀನನ್ನು ಅತಿಕ್ರಮಿಸಿ ವಶಪಡಿಸಿಕೊಂಡು ಕಬ್ಜಾ ಮಾಡಿಕೊಂಡಿರುತ್ತಾರೆ.
ಗಂಗಾವತಿ ತಾಲೂಕಿನ ಬಸವನದುರ್ಗ ಗ್ರಾಮದ ಸರ್ವೆ ನಂ: 32/* ವಿಸ್ತೀರ್ಣ 273-37 ಎ-ಗುಂ ಜಮೀನಿನಲ್ಲಿ 22-20 ಎ-ಗುಂ ಜಮೀನು 2008-09ನೇ ಸಾಲಿನಲ್ಲಿ ಜ. 25.,.2009 ರಲ್ಲಿ ಅಕ್ರಮ ಸಕ್ರಮದಡಿಯಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮಂಜೂರು ಆಗಿರುತ್ತವೆ. ಈ ಮಂಜೂರಾದ ಜಮೀನನ್ನು ಕೊಲ್ಲಿ ನಾಗೇಶ್ವರರಾವ್ ತಂ. ಗಂಗಯ್ಯ ಇವರ ಮಧ್ಯಸ್ಥಿಕೆಯಲ್ಲಿ ಕಮ್ಮ ಸುಮತಿ ಗಂ. ಕೋಟೇಶ್ವರರಾವ್, ಕಮ್ಮ ಕೋಟೇಶ್ವರರಾವ್ ತಂ. ವೆಂಕಟನಾರಾಯಣ, ವೆಂಪಾಟಿ ರಮಣಮ್ಮ ಗಂ. ದಿ. ಮುಸಲಯ್ಯ, ವೆಂಪಾಟಿ ಪ್ರಸಾದ ತಂ. ಮುಸಲಯ್ಯ, ಕಮ್ಮ ಕೋಟೇಶ್ವರರಾವ್ ತಂ. ವೆಂಕಟನಾರಾಯಣ, ಇವರುಗಳು ಜಿಲ್ಲಾಧಿಕಾರಿಗಳ ಪರವಾನಿಗೆ ಇಲ್ಲದೆ 2016-17 ರಲ್ಲಿ ಅನಧಿಕೃತವಾಗಿ ಖರೀದಿ ಕರಾರು ಪತ್ರ ಮಾಡಿಸಿಕೊಂಡಿರುತ್ತಾರೆ. ಈ ಎಲ್ಲಾ ಮೇಲಿನ ಅತಿಕ್ರಮಣಗೊಂಡ ಸರಕಾರಿ ಜಮೀನು ಹಾಗೂ ಜಾಗೆಗಳನ್ನು ಪುನಃ ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ಒತ್ತಾಯಿಸಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.