ಶಿಗ್ಗಾವ್

ತಹಶೀಲ್ದಾರ ಸಂತೋಷ ಹಿರೇಮಠ ವರ್ಗಾವಣೆ ರದ್ದುಗೊಳಿಸಲು ಮನವಿ

ತಹಶೀಲ್ದಾರ ಸಂತೋಷ ಹಿರೇಮಠ ವರ್ಗಾವಣೆ ರದ್ದುಗೊಳಿಸಲು ಮನವಿ

ಶಿಗ್ಗಾವಿ 13 : ಶಿಗ್ಗಾವಿ ತಹಶೀಲ್ದಾರ ಸಂತೋಷ ಹಿರೇಮಠ ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಮರಳಿ ಅವರನ್ನೆ ಮುಂದುವರೆಸುವಂತೆ ಜೀವಿಕ ಜೀತ ವಿಮುಕ್ತಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪದಾಧಿಕಾರಿಗಳು ಶಿಗ್ಗಾವಿ ಗ್ರೇಡ್‌-2 ತಹಶೀಲ್ದಾರರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಅರ​‍್ಿಸಿ ಒತ್ತಾಯಿಸಿದರು. 

ಸಂತೋಷ ಹಿರೇಮಠ ಅವರು ದಕ್ಷ ಅಧಿಕಾರಿಯಾಗಿದ್ದು ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡು ಕೆಲಸ ನಿರ್ವಹಿಸುತ್ತಿಲ್ಲ ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಹೀಗಾಗಿ ಅವರನ್ನೆ ಮುಂದುವರೆಸಿ ಜನತೆಗೆ ನ್ಯಾಯ ಕೊಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 

ಈ ಸಂದರ್ಭದಲ್ಲಿ ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಅಶೋಕ್ ಕಾಳೆ, ರವಿ ಕೋಣಪ್ಪನವರ, ಸುರೇಶ್ ಬಡಪ್ಪನವರ, ಮಕ್ಬುಲ್ ಎಲ್ಲಾಪುರ, ಗೌಸ್ ಆಗಸನಮಟ್ಟಿ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ