ಸತ್ತಿಗೇರಿ ಏತ ನೀರಾವರಿ ಅಡಿಗಲ್ಲು ದಿನಾಂಕ ನಿಗದಿಗೆ ಮನವಿ
ಯರಗಟ್ಟಿ: ಸತ್ತಿಗೇರಿ ಏತ ನೀರಾವರಿ ಅಡಿಗಲ್ಲು ಸಮಾರಂಭ ದಿನಾಂಕ ನಿಗದಿ ಪಡಿಸುವ ಕುರಿತು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಸುತ್ತ ಮುತ್ತಲಿನ ರೈತ ಬಾಂದವರು ಮನವಿ ಸಲ್ಲಿಸಿದರು.
ಈ ವೇಳೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೇಬ್ಬಾಳಕರ, ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಬಂಗಾರೆಪ್ಪ ಹರಳಿ, ಕೆಎಂಎಫ್ ಸದಸ್ಯ ಶಂಕರ ಇಟ್ನಾಳ, ಪ್ರಕಾಶ ವಾಲಿ, ಮಲಿಕಸಾಬ ಬಾಗವಾನ, ಉಮೇಶ ಮಾಗುಂಡನವರ, ಮಹಾದೇವಪ್ಪ ಗೋಡಿ, ಮಲ್ಲಯ್ಯ ಹಿರೇಮಠ, ಬಸವರಾಜ ಬಿರಾದಾರಪಾಟೀಲ, ಬನಪ್ಪಗೌಡರ ಪಾಟೀಲ, ಶ್ರೀಕಾಂತ ಮಠಪತಿ, ಚನ್ನಪ್ಪ ಶೆಟ್ಟರ, ಮಲ್ಲಪ್ಪ ಹೆಗಡಿ, ಮಹಾಂತೇಶ ಪಟ್ಟಣಶೆಟ್ಟಿ ಸೇರಿದಂತೆ ಇತರರು ಇದ್ದರು.