ಜಮಖಂಡಿ

ಅಧಿಕಾರಿಗಳ ಅಮಾನತು ಆದೇಶ ರದ್ದು ಪಡಿಸಲು ಆಗ್ರಹಿಸಿ ಮನವಿ

ಅಧಿಕಾರಿಗಳ ಅಮಾನತು ಆದೇಶ ರದ್ದು ಪಡಿಸಲು ಆಗ್ರಹಿಸಿ ಮನವಿ

ಜಮಖಂಡಿ 26: ತಾಲೂಕಾ ಮಾದಿಗ ಸಂಘಟಣೆಗಳ ಒಕ್ಕೂಟ ತಾಲೂಕಾ ಶಾಖೆಯ ಸಹಯೋಗದಲ್ಲಿ ಧಾರವಾಡ ಹುಬ್ಬಳ್ಳಿ ಮಹಾನಗರ ಐ,ಪಿ,ಎಸ್ ಡಿಸಿಪಿ ರಾಜೀವ್ ಎಮ್, ಹಾಗೂ ವಿಜಯಕುಮಾರ ತಳವಾರ ಡಿ,ವಾಯ್,ಎಸ್,ಪಿ. ಅವರ ಅಮಾನತ್ತು ಆದೇಶವನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ. ಗ್ರೇಡ್ 2 ತಹಶೀಲ್ದಾರ  ಶಶಿಧರ ಚಲವಾದಿ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲಿಸಿದರು.  

ನಗರದ ತಾಲೂಕ ಸೌಧದ ಆವರಣದಲ್ಲಿ ನಡೆದ ಪ್ರತಿಭಟನೆ ನಡೆಸಿ. ನಂತರ ಮಾತನಾಡಿದ ಅವರು, ಧಾರವಾಡ ಹುಬ್ಬಳ್ಳಿಯ ಮಹಾನಗರದಲ್ಲಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ರಾಜೀವ್ ಎಮ್, ಐಪಿಎಸ್ ಹಾಗೂ ವಿಜಯಕುಮಾರ ತಳವಾರ ಡಿ.ವಾಯ್‌.ಎಸ್‌.ಪಿ ಸಹಾಯಕ ಪೊಲೀಸ್ ಆಯುಕ್ತರು ಕಾನೂನು ಸುವ್ಯವಸ್ಥೆ ಇವರನ್ನು ರಾಜ್ಯ ಸರಕಾರ ಅಮಾನತ್ತು ಮಾಡಿರುವುದು ಖಂಡನೀಯ ಒಬ್ಬ ದಲಿತ ದಕ್ಷ ಪೊಲೀಸ್ ಅಧಿಕಾರಿಯನ್ನು ವಿನಾಕಾರಣ ಯಾವುದೇ ತಪ್ಪು ಮಾಡದೇಯಿದ್ದರೂ ಕೂಡಾ ಉದ್ದೇಶಪೂರ್ವಕವಾಗಿ ಕುತಂತ್ರದಿಂದ ಜಾತಿವಾದಿ ಕಾಣದ ಕೈಗಳ ಒತ್ತಡಕ್ಕೆ ಮಣಿದು ದಲಿತ ಸಮುದಾಯದ ನಿಷ್ಠಾವಂತ ಅಧಿಕಾರಿಗಳನ್ನು ಬಲಿಪಶು ಮಾಡುವ ಉದ್ದೇಶದಿಂದ ಅಮಾನತ್ತುಗೊಳಿಸಿದ್ದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಆರೋಪಿಸಿದರು.  

ನಿಜವಾಗಿಯೂ ತಪ್ಪು ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದೇ ದಕ್ಷ ಅಧಿಕಾರಿಗಳ ತೇಜೋವಧೆ ಮಾಡುವ ಉದ್ದೇಶದಿಂದ ಮತ್ತು ಸದರಿಯವರನ್ನು ಸಹಿಸದ ಪುಟ್ಟಭದ್ರ ಹಿತಾಶಕ್ತಿಗಳು ಪ್ರಚೋದನೆ ನೀಡಿ ಕಾನೂನು ಬಾಹಿರವಾಗಿ ಕ್ರಮ ಕೈಗೊಂಡಿರುವುದನ್ನು ತಾಲೂಕಾ ಮಾದಿಗ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಸೂಕ್ಷ್ಮವಾಗಿ ಗಮನಿಸಿ ಯಾವುದೇ ತಪ್ಪು ಮಾಡದೆ ಇರುವ ದಲಿತ ದಕ್ಷ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿರುವುದನ್ನು ರದ್ದು ಪಡಿಸಿ ಮತ್ತೆ ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆ ಮುಂದುವರಿಸಬೇಕು. ಒಂದು ವೇಳೆ ಅಮಾನತ್ತು ಮಾಡಿರುವ ಆದೇಶವನ್ನು ರದ್ದುಪಡಿಸದಿದ್ದರೆ ರಾಜ್ಯ ಸರಕಾರದ ವಿರುದ್ಧ ರಾಜ್ಯದ ಮಾದಿಗ ಸಮುದಾಯವು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. 

ಇದೇ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷರು ಪ್ರಕಾಶ ಹುಗ್ಗಿನ್ನವರ, ಪ್ರ,ಕಾ,ಶಶಿಧರ ದೊಡಮನಿ,ಮುತ್ತಣ್ಣ ಮೇತ್ರಿ, ಸಂಜು ಪೂಜಾರಿ, ಯಮನಪ್ಪ ಮಾದರ, ಬಸವರಾಜ ಮಾದರ, ಅರ್ಜುನ ಮಾದರ, ಮಾರುತಿ ಮಾದರ, ಪಾಡಪ್ಪ ಗಣಿ, ವೀರಣ ರಾಮೋಶಿ,ರಮೇಶ ಪೂಜಾರಿ, ಸಂಗಮೇಶ ಮಾದರ, ಮಾಂತೇಶ ಮಾಂಗ, ಲಕ್ಷ್ಮಣ ಬಳೂತಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ