ಚಿಕ್ಕೋಡಿ

ಗ್ರಾಮೀಣ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ

ಗ್ರಾಮೀಣ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ

ಮಾಂಜರಿ: ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅನೇಕರು ಅದಮ್ಯ ಪ್ರತಿಭೆ ಹೊಂದಿದ್ದಾರೆ. ಆದರೆ ಆತ್ಮವಿಶ್ವಾಸದ ಕೊರತೆ, ಸಂವಹನ ಕಲೆ, ವಿಷಯ ಮಂಡನೆಯ ವಿಷಯದಲ್ಲಿ ಹಿಂಜರಿಕೆ ಕಾಡುತ್ತಿದೆ. ಇಂತಹ ಗ್ರಾಮೀಣ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ಮುಖಾಂತರ  ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಆಯೋಜಿಸುತ್ತಿರುವದು ಶ್ಲಾಘನೀಯವಾಗಿದೆ ಎಂದು  ವಿಧಾನಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ  ಅಭಿಪ್ರಾಯ ಪಟ್ಟರು.

ಚಿಕ್ಕೋಡಿ ತಾಲೂಕಿನ ಇಂಗಳಿ  ಗ್ರಾಮದಲ್ಲಿ ಶುರುಗುಪ್ಪಿ ಗ್ರಾಮದ ಕೆ ಎಲ್ ಈ ಶಿಕ್ಷಣ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯದ ಸಯುಕ್ತಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಮುಖಾಂತರ  ಆಯೋಜಿಸಿದ್ದ ಏಳು ದಿನಗಳ ವಿಶೇಷ  ತರಬೇತಿಯ ಅವರು ಉದ್ದೇಶಿಸಿ ಮಾತನಾಡಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಂಗ್ಲಭಾಷೆಯ ಸಂವಹನ ಅತೀ ಅವಶ್ಯಕವಾಗಿದೆ. ನಾಯಕತ್ವದ ಬೆಳವಣಿಗೆ, ಏಕಾಗ್ರತೆ, ಸಂವಹನ ಮತ್ತು ಜೀವನ ಕೌಶಲ್ಯಗಳ ಬಗ್ಗೆ ನೀಡುತ್ತಿರುವ ಈ ತರಬೇತಿಯು ಗ್ರಾಮೀಣ ವಿದ್ಯಾರ್ಥಿಗಳ ಭವೀಷ್ಯಕ್ಕೆ ಸಹಕಾರಿಯಾಗಲಿದೆ ಎಂದರು.

ಈ ವೇಳೆ ಶಿಕ್ಷಕ ಶಂಕರ್ ಪವಾರ್ ಮಾತನಾಡಿ ಕಷ್ಟಪಟ್ಟು ವಿದ್ಯೆ ಸಂಪಾದಿಸಿದರೆ ಮುಂದೊಂದು ದಿನ ಉತ್ತಮ ಸಂಪಾದನೆಯ ಮೂಲಕ ಸುಖವಾಗಿರಬಹುದು. ಕಲಿಯುವ ವಯಸ್ಸಿನಲ್ಲಿ ಮೋಜು ಮಸ್ತಿ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಕಷ್ಟವನ್ನು ಎದುರಿಸಬೇಕಾಗಲಿದೆ ಎಂದರು. ಈ ವೇಳೆ ಹಲವಾರು  ಶಿಬಿರಾರ್ಥಿಗಳು ಊರಿನ ಗ್ರಾಮಸ್ಥರು ಹಾಜರಿದ್ದರು


ಸುದ್ದಿ ಓದಿ