ಶೋಟೋಕಾನ್ ಕರಾಟೆ ವಿದ್ಯಾರ್ಥಿಗಳ ಸಾಧನೆ
ಶಿಗ್ಗಾವಿ 12: ಕರಾಟೆ ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ದುಸ್ಚಟಗಳಿಂದ ದೂರ ಉಳಿದು ಸದೃಢ ಆರೋಗ್ಯದೊಂದಿಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಉತ್ತಮ ಸಾಧನೆಯೊಂದಿಗೆ ತಾಲೂಕಿಗೆ ಹಾಗೂ ತರಬೇತಿ ಕೇಂದ್ರಕ್ಕೆ ಕೀರ್ತಿ ತರಬೇಕು ಎಂದು ತರಬೇತುದಾರ ನಿಸಾರಹ್ಮದ ಗುಜರಾತಿ ಕರಾಟೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಟೋನಾಮೆಂಟನಲ್ಲಿ ಪಟ್ಟಣದ ಇಂಟರ್ ನ್ಯಾಶನಲ್ ಶೋಟೋಕಾನ್ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ಸಾಧನೆಗೆ ತರಬೇತುದಾರ ನಿಸಾರಹ್ಮದ ಗುಜರಾತಿ ಹಾಗೂ ಹನುಮಂತ ಗದಗ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಶಾಹಿಲ್ ನಿಸಾರ ಪರಾಜ ವೈಟ್ ಬೆಲ್ಟ್ ಕಾಟಾದಲ್ಲಿ ದ್ವಿತೀಯ, ಮಜೀಬಖಾನ ದೊಡ್ಡಮನಿ ಹಾಗೂ ವಾಣಿ ಹುಣಸಿಕಟ್ಟಿ ವೈಟ್ ಬೆಲ್ಟ್ ಕಾಟಾದಲ್ಲಿ ದ್ವಿತೀಯ, ,ಮೋಹನ ಗದಗ ಆರೆಂಜ್ ಬೆಲ್ಟ್ ಕಾಟಾದಲ್ಲಿ ದ್ವಿತಿಯ, ಪ್ರವೀಣ ಮೇದ ಯಲೋ ಬೆಲ್ಟ ಕಾಟಾದಲ್ಲಿ ತೃತೀಯ, ನೂತನಾ ಮತ್ತೂರ, ಯಲೋಬೆಲ್ಟ್ ಕಾಟಾದಲ್ಲಿ ದ್ವಿತೀಯ, ಇಮಾಮಖಾಸೀಂ ಕೂಡಲಗಿ ಯಲೋಬೆಲ್ಟ್ ಕಾಟಾದಲ್ಲಿ ಪ್ರಥಮ, ಅಜಾರುದ್ದೀನ ಧಾರವಾಡ ಆರೆಂಜಬೆಲ್ಟ್ ಖಾಟಾದಲ್ಲಿ ತೃತಿಯ, ನಿತ್ಯಾನಂದ ಮೂಡಲಗಿ ಯಲೋಬೆಲ್ಟ್ ಕಾಟಾದಲ್ಲಿ ತೃತಿಯ, ಮೊಹ್ಮದಯುನಸ ಹತ್ತಿಕಾಳ ಹಾಗೂ ಮಂಜುನಾಥ ಅಂಗಡಿ ಆರೆಂಜಬೆಲ್ಟ್ ಕಾಟಾದಲ್ಲಿ ದ್ವಿತೀಯ, ವಿನಾಯಕ ಬಸವರಾಜ ಹೊನ್ನನ್ಣವರ ಗ್ರೀನ್ ಬೆಲ್ಟ್ ಕಾಟಾದಲ್ಲಿ ಪ್ರಥಮ, ಅರುಣ ಪ್ರಭಾಕರ ಬ್ರೌನ್ ಬೆಲ್ಟ್ ಕಾಟಾದಲ್ಲಿ ತೃತಿಯ ಮತ್ತು ಕುಮಟೆಯಲ್ಲಿ ಫ್ರಥಮ, ಶ್ರೇಯಸ್ ಕಲಾಲ ಪರ್ಪಲ್ ಬೆಲ್ಟ್ ಕಾಟಾದಲ್ಲಿ ತೃತಿಯ ಮತ್ತು ಕುಮಟೆಯಲ್ಲಿ ದ್ವಿತೀಯ, ಗಣೇಶ ಕಂಕನವಾಡ ಪರ್ಪಲ್ ಬೆಲ್ಟ್ ಕಾಟಾದಲ್ಲಿ ದ್ವಿತೀಯ, ವಿವೇಕ ಗಂಜಿಗಟ್ಟಿ ಪರ್ಪಲ್ ಬೆಲ್ಟ್ ದ್ವಿತೀಯ, ಮಹ್ಮದಮದನಿ ಕ್ಯಾಲಕೊಂಡ ಬ್ರೌನ್ ಬೆಲ್ಟ್ ಕಾಟಾದಲ್ಲಿ ತೃತಿಯ ಹಾಗೂ ಕುಮಟೆಯಲ್ಲಿ ದ್ವಿತೀಯ, ಮಹ್ಮದಗೌಸ್ ನದಾಫ ಬ್ರೌನ್-3 ಕಾಟಾದಲ್ಲಿ ಪ್ರಥಮ, ದೀರಜ ಹರಿಗೊಂಡ ಪರ್ಪಲ್ ಬೆಲ್ಟ್ ಕಾಟಾದಲ್ಲಿ ದ್ವಿತೀಯ, ಬಸವರಾಜ ಕುಲಕರ್ಣಿ ಬ್ಲಾಕ್ ಬೆಲ್ಟ್ ಕಾಟಾದಲ್ಲಿ ಪ್ರಥಮ, ಅಕ್ತರಗುಲಾಮುದ್ದಿನ ಬ್ಲಾಕ್ ಬೆಲ್ಟ್ ಕಾಟಾದಲ್ಲಿ ದ್ವಿತಿಯ, ಮಂಜನಾಥ ಕಮ್ಮಾರ ಬ್ಲಾಕ್ ಬೆಲ್ಟ್ ಕಾಟಾದಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಸಾದನೆ ತೋರಿ ಪಟ್ಟಣದ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.