ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬೆಳಗಾವಿ : ಶಿವಾನಂದ ನೀಲಣ್ಣವರ ಒಡೆತನದ ಶಿವಂ ಅಸೋಸಿಯೇಟ್ ನಲ್ಲಿ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ವರೆಗೆ 2400 ಕೋಟಿ ಹಣ ಸಂಗ್ರಹ ಮಾಡಿದ್ದು, ಸಿಐಡಿ ಶಿವಂ ಅಸೋಸಿಯೇಟ್ ನ ಎಲ್ಲ ಖಾತೆಗಳನ್ನು ಮುಟ್ಟುಗೋಲು ಹಾಕಿದರು ನಾಗರಿಕರು ಇನ್ನು ಖಾತೆಗಳಿಗೆ ಹಣ ಹಾಕುವ ಕೆಲಸ ಮಾಡುತ್ತಿದ್ದಾರೆ. ಇಂತಹ ವಂಚನೆ ಜಾಲಗಳಿಂದ ಜನ ದೂರು ಇರುವಂತೆ ಹಾಗೂ ಸಾರ್ವಜನಿಕರು ಮೋಸ ಹೋಗುವದನ್ನು ತಡೆಯುವ ಅವಶಕತೆ ಇದೆ ಎಂದು ಸಿಐಡಿ ಡಿಐಜಿಪಿ ಡಾ. ಭೀಮಾಶಂಕರ್ ಗುಳೇದ್ ಅವರು ತಿಳಿಸಿದರು.
ರವಿವಾರ ನಗರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ದಿನಗಳ ಹಿಂದೆ ಬೆಳಗಾವಿ ನಗರದಲ್ಲಿ ಶಿವಂ ಅಸೋಸಿಯೇಟ್ ಹೆಸರಲ್ಲಿ ಅಕ್ರವಾಗಿ ಸಾರ್ವಜನಿಕರಿಂದ ಠೇವಣಿ ಸಂಗ್ರಹ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಾಗ ಬೆಳಗಾವಿ ಜಿಲ್ಲಾಧಿಕಾರಿ ಆದೇಶದಂತೆ ಕಂದಾಯ ಇಲಾಖೆ, ಪೋಲೀಸ್ ಇಲಾಖೆ, ಸಹಕಾರ ಇಲಾಖೆ ಗಳು ಜಂಟಿಯಾಗಿ ದಾಳಿ ಮಾಡಿ ಪ್ರಕರಣ ದಾಖಲಿಸಿ ಹಲಾವರು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ಈ ಪ್ರಕರಣ ವನ್ನು ಸಿಐಡಿಗೆ ವರ್ಗಾವಣೆ ಮಾಡಿದ್ದರು. ತನಿಖೆ ಇನ್ನು ನಡೆತಾ ಇದೆ.
ನಮ್ಮ ಇಲಾಖೆ ಶಿವಂ ಅಸೋಸಿಯೇಟ್ ನ ಹಾಗೂ ನೀಲಣ್ಣವರ ಅವರ ಖಾತೆಗಳನ್ನು ಮುಟ್ಟುಗೋಲು ಮಾಡಿದರು. ಸಿಐಡಿ ತನಿಖೆ ಸಂದರ್ಭದಲ್ಲೂ ನಾಗರಿಕರು ಅವರ ಶಿವಂ ಅಸೋಸಿಯೇಟ್ ನ ಖಾತೆಗೆ ಇವಾಗದರು ದುಡ್ಡು ಹಾಕತಾ ಇದ್ದಾರೆ. ಇದರಲ್ಲಿ ಈಗಾಗಲೇ ಹಣ ಹೂಡಿಕೆ ಮಾಡಿರುವ ಜನ ಬೇರೆಯವರಿಗೆ ಪ್ರೇರೇಪಿಸಿ ದುಡ್ಡು ಹಾಕಿಸುವ ಕೆಲಸ ಮಾಡತಾ ಇದ್ದಾರೆ. ಸಾರ್ವಜನಿಕಕರು ಈ ಸಂಸ್ಥೆ ಗೆ ದುಡ್ಡು ಹಾಕಬಾರದು.
ಎಲ್ಲಿವರೆಗೆ ಜನ ಬಡ್ಡಿ ಆಸೆಗಾಗಿ ಬಲಿಯಾಗುತ್ತಾರೋ ಅಲ್ಲಿ ವರೆಗೆ ಮೋಸಗಾರರು ಹುಟ್ಟಿಕೊಳ್ಳುತ್ತಾರೆ. ಜನರ ಇಂತವರಿಂದ ದೂರ ಇದ್ದು, ಪ್ರಕರಣ ಗೊತ್ತಾದಾಗ ಪೊಲೀಸರ ರಿಗೆ ವಿಷಯ ತಿಳಿಸುವಂತೆ ಹೇಳಿದರು.
ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ದುಡ್ಡು ನೀಡಿದ್ದಾನೆ ಎನ್ನುವ ಬಗ್ಗೆ ಈ ಪ್ರಕರಣ ದಲ್ಲಿ ಕಟ್ಟು ಕಥೆ ಗಳು ಊಹಾಪೋಹಗಳು ಕಂಡು ಬಂದಿವೆ. ವಿನಾಕಾರಣ ಸಂಸ್ಥೆ ಮೇಲೆ ದಾಳಿ ಮಾಡಲಾಗಿದೆ ಎನ್ನುವ ಮಾತುಗಳನ್ನು ಆಡಿದ್ದಾರೆ. ಕೆಲವರು ಮಧ್ಯಮ ಗಳ ಮೇಲೆ ಗೂಬೆ ಕುಡ್ರಿಸುವ ಕಾರ್ಯ ಮಾಡಿದ್ದಾರೆ.
ಆದರೆ ಆರ್ ಬಿಐ ನಿಂದ ಅನುಮತಿ ಇಲ್ಲದೆ ಹಣ ಠೇವಣಿ ತೆಗೆದುಕೊಳ್ಳುವದು ಕಾನೂನು ಬಾಹಿರ ಕೆಲಸ. ನಾಗರಿಕರಿಗೆ ಚೆಕ್ ಅಥವಾ ಬಾಂಡ್ ನೀಡಿರಬಹುದು ಆದರೆ ಠೇವಣಿ ತೆಗೆದುಕೊಳ್ಳುವದು ತಪ್ಪು. ಇದನ್ನು ಸಾರ್ವಜನಿಕರು ಚಿಂತನೆ ಮಾಡುವ ಅವಶಕತೆ ಇದೆ.
ಕಳೆದ ಎರಡು ದಿನಗಳ ಹಿಂದೆ ಕೂಡಾ ಇದೇ ರೀತಿಯ ಪ್ರಕರಣ ಒಂದು ಬೆಳಗಾವಿ ಯಲ್ಲಿ ಕಂಡು ಬಂದಿದೆ. ಅಲ್ಲು ಕೂಡ ದಾಳಿ ಮಾಡಿ ಪ್ರಕರಣ ದಾಖಲಾಗಿದೆ. ಅದು ಕೂಡಾ ಸಿಐಡಿಗೆ ಬರಲಿದೆ.
ಆರ್ ಬಿಐ ಹಾಗೂ ಐಆರ್ ಡಿಎ ಅನುಮತಿ ಇದ್ದರೆ ಮಾತ್ರ ಠೇವಣಿ ಸಂಗ್ರಹಕ್ಕೆ ಅವಕಾಶ ಇದೆ. ಬೆಳಗಾವಿಯ ಇವೆರಡು ಪ್ರಕರಣ ದಲ್ಲಿ ಠೇವಣಿ ಸಂಗ್ರಹ ಮಾಡಲು ಅವಕಾಶ ಇರುವುದಿಲ್ಲ. ಸಾರ್ವಜನಿಕ ಕರು ಇದನ್ನು ಅರಿತುಕೊಳ್ಳಬೇಕೆಂದು ಮನವಿ ಮಾಡಿದರು.
ಭಾರತದಲ್ಲಿ ಈ ರೀತಿಯ ಶೆ. 36 ಲಾಭ ನೀಡುವ ಬಗ್ಗೆ ಯಾವ ಕಂಪನಿಗಳು ಕಾರ್ಯ ಮಾಡಿಲ್ಲ ಎಂದರು.
ಇಲ್ಲಿಯ ವರೆಗೆ ಶಿವಂ ಅಸೋಸಿಯೇಟ್ ನಲ್ಲಿ 2400 ಕೋಟಿ ಠೇವಣಿ ಮಾಡಿರುವದು ನಮ್ಮ ಇಲಾಖೆ ತನಿಖೆಯಲ್ಲಿ ಕಂಡು ಬಂದಿದೆ ಎಂದರು.