ರಾಣೆಬೆನ್ನೂರ

ಮದುವೆ-ಗೃಹ ಪ್ರವೇಶಕ್ಕೆ ಅನುಮತಿ ಪಡೆಯಲು ನೂಕು-ನುಗ್ಗಲು

ಮದುವೆ-ಗೃಹ ಪ್ರವೇಶಕ್ಕೆ ಅನುಮತಿ ಪಡೆಯಲು ನೂಕು-ನುಗ್ಗಲು
ರಾಣೇಬೆನ್ನೂರು ತಹಶೀಲ್ದಾರ ಕಛೇರಿ ಚುನಾವಣಾ ವಿಭಾಗದಲ್ಲಿ ಅನುಮತಿ ಪಡೆಯಲು ಮುಗಿಬಿದ್ದ ನಾಗರಿಕರು.

ರಾಣೀಬೆನ್ನೂರ 25: ಕೋವಿಡ್ ಮಹಾಮಾರಿ ದೇಶಾದ್ಯಂತ ತನ್ನ ಆರ್ಭಟ ತೋರಿದ್ದರೆ ರಾಜ್ಯದಲ್ಲಿಯೂ ಕೂಡ ವ್ಯಾಪಿಸಿದ್ದು ಇಂದಿ ನಿಂದ ಲಾಕ್ ಡೌನ್ ಜಾರಿಗೆ ಬಂದಿದೆ. ಆದರೂ ಸಹ ತಾ.ನಲ್ಲಿ ಮದುವೆ-ಗೃಹ ಪ್ರವೇಶ ನಡೆಸಲು ತಾ. ಕಚೇರಿಯ ಚುನಾವಣಾ ವಿಭಾಗದಲ್ಲಿ ನೂಕು-ನುಗ್ಗಲು ಉಂಟಾಗಿದೆ.  

ಮದುವೆ ಹಾಗೂ ಗೃಹ ಪ್ರವೇಶ ನಡೆಸಲು ತಹಶೀಲ್ದಾರರ ಪರವಾನಿಗೆ ಪಡೆಯಲು ಜನ ಮುಗಿ ಬಿದ್ದಿದ್ದಾರೆ. ತಹಶೀಲ್ದಾರರಾದ ಶಂಕರ್‌ರವರು ಮುಗಿಬಿದ್ದ ಜನರಿಗೆ ತರಾಟೆ ತೆಗೆದುಕೊಂಡು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಲಾಗಿ ನಿಂತು ಪರವಾನಿಗೆ ಪಡೆದುಕೊಳ್ಳಬೇಕು, ನೀವು ಇಲ್ಲಿಯೇ ಸಾಮಾಜಿಕ ಅಂತರ ಕಾಯ್ದು ಕೊಳ್ಳದಿದ್ದರೆ ಮದುವೆಯಲ್ಲಿ ಹೇಗೆ ಅಂತರ ಕಾಯ್ದುಕೊಳ್ಳುತ್ತೀರೆಂದು ಪ್ರಶ್ನಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪರ್ಮಿಶನ್ ಪಡೆದುಕೊಳ್ಳದಿದ್ದವರಿಗೆ ಪರ್ಮಿಶನನ್ನೆ ನೀಡುವುದಿಲ್ಲ ಎಂದು ಎಚ್ಚರಿಸಿದರು. 



ಸುದ್ದಿ ಓದಿ