ಶಿಗ್ಗಾವ್

ಸಮಾಜ ಸೇವೆಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು

ಸಮಾಜ ಸೇವೆಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು

ಶಿಗ್ಗಾವಿ 21: ಸಮಾಜ ಸೇವೆಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಜನರು ನಮ್ಮನ್ನು ಅಭಿಮಾನದಿಂದ ಕಾಣಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಪಟ್ಟಣದ ಹೊರವಲಯದಲ್ಲಿರುವ ಶಾಸಕರ ಸಭಾಭವನದಲ್ಲಿ ನಡೆದ ಮಾತೋಶ್ರೀ ಗಂಗಮ್ಮ ಎಸ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರ 64 ನೇ ಜನ್ಮ ದಿನಾಚರಣೆ ಅಂಗವಾಗಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್‌, ಬೊಮ್ಮಾಯಿ ಅಭಿಮಾನಿಗಳ ಬಳಗ ಮತ್ತು ಜಿಲ್ಲಾ ರಕ್ತ ನಿಧಿ ಕೇಂದ್ರ, ತಾಲೂಕು ಅರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನರ ಮಧ್ಯ ಇದ್ದು ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಕಾಲಕಾಲಕ್ಕೆ ಅವರ ಸಮಸ್ಯೆಗಳನ್ನು ನಿವಾರಣೆ ಮಾಡುವುದೇ ನಿಜವಾದ ರಾಜಕಾರಣ. ಒಬ್ಬ ರಾಜಕಾರಣಿ ಸಾರ್ವಜನಿಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿದಾಗ ಮಾತ್ರ ಆ ರಾಜಕಾರಣಿ ಬದುಕು ಸಾರ್ಥಕವಾಗಲು ಸಾಧ್ಯ ಎಂದರು. 

ಇಂತಹ ಸಾಮಾಜ ಸೇವೆಗಳನ್ನು ನಮ್ಮ ಟ್ರಸ್ಟ್‌ ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳ ಜೊತೆಗೂಡಿ ನಿರಂತರವಾಗಿ ನಡೆಸುತ್ತಿದ್ದು. ಮುಂಬರುವ ದಿನಗಳಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಕಣ್ಣಿನ ತಪಾಸಣೆ ಸೇರಿದಂತೆ ಹಲವು ರೀತಿಯ ಅರೋಗ್ಯ ತಪಾಸಣೆಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಬಡವರಿಗೆ ಆಶ್ರಯವಾಗುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಭಾರತ್ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಣ್ಣ ಸಾತಣ್ಣನವರ, ಭಾಜಪ ತಾಲೂಕ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಲೀಡ್ಕರ್ ಮಾಜಿ ಉಪಾಧ್ಯಕ್ಷ ಡಿ ಎಸ್ ಮಾಳಗಿ, ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣನವರ, ಶಿವಪ್ರಸಾದ್ ಸುರಗಿಮಠ, ಹನುಮರಡ್ಡಿ ನಡುವಿನಮನಿ, ಬಸನಗೌಡ ಇನಾಮತಿ, ಶ್ರೀಕಾಂತ ಬುಳ್ಳಕ್ಕನವರ, ಸುಭಾಸ ಚೌಹಾಣ, ಜಾಪರಖಾನ ಪಠಾಣ, ದೇವಣ್ಣ ಚಾಕಲಬ್ಬಿ,ರವಿ ಕುಡಒಕ್ಕಲಿಗರ, ಶಿವಲೋಚನ ಸುರಗಿಮಠ, ಎಮ್ ಎನ್ ವೆಂಕೋಜಿ, ದಯಾನಂದ ಅಕ್ಕಿ, ರಮೇಶ ವನಹಳ್ಳಿ, ಪರಶುರಾಮ ಸೊನ್ನದ, ವಿರೇಶ ಆಜೂರ, ಕರೆಪ್ಪ ಕಟ್ಟಿಮನಿ, ಮಲ್ಲೇಶಪ್ಪ ಹರಿಜನ, ರೂಪಾ ಬನ್ನಿಕೊಪ್ಪ, ಸಂಗೀತಾ ವಾಲ್ಮೀಕಿ, ಸಾ.ಆಸ್ಪತ್ರೆ ಆಡಳಿತಾಧಿಕಾರಿ ಡಾ. ಹನುಮಂತಪ್ಪ ಪಿ ಎಚ್, ತಾಲೂಕ ಅರೋಗ್ಯಾಧಿಕಾರಿ ಡಾ. ಸತೀಶ್ ಎ ಆರ್, ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ. ಬಸವರಾಜ ಕಮತದ, ಸೌಭಾಗ್ಯ ದೊಡ್ಡಮನಿ ಸೇರಿದಂತೆ ತಾಲೂಕ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಬೊಮ್ಮಾಯಿ ಅಭಿಮಾನಿ ಬಳಗ, ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿದ್ದರು. 


ಸುದ್ದಿ ಓದಿ