ಕಾಲ ಕೆಟ್ಟಿಲ್ಲ ಜನರ ಮನಸ್ಸು ಕೆಟ್ಟಿವೆ: ಸಿದ್ಧಲಿಂಗ ಶ್ರೀ
ತಾಳಿಕೋಟಿ 16: ನಾವು ಸದಾ ಕಾಲವನ್ನೇ ದೋಷಿಸುತ್ತೇವೆ ಕಾಲ ಕೆಟ್ಟಿದೆ ಎಂದು ಹೇಳುತ್ತೇವೆ ಅದು ಎಂದೂ ಕೆಡುವದಿಲ್ಲ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಕೆಟ್ಟಿರುವುದು ನಮ್ಮ ಮನಸ್ಸುಗಳು ಅದನ್ನು ಕಟ್ಟುವ ಕೆಲಸ ಆಗಬೇಕಾಗಿದೆ ಎಂದು ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ಧಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಇತ್ತೀಚಿಗೆ ರಮಝಾನ್ ಮಾಸದ ಪ್ರಯುಕ್ತ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಮಠದಿಂದ ಆಯೋಜಿಸಿದ ಸೌಹಾರ್ಧ ಇಫ್ತಾರ ಕೂಟದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ದ್ವೇಶದಿಂದ ದೇಶ ಕಟ್ಟಲು ಸಧ್ಯವಿಲ್ಲ ಪ್ರೀತಿಯಿಂದ ಜಗತ್ತನ್ನೆ ಗೆಲ್ಲಬಹುದು, ಪ್ರೀತಿ ಮತ್ತು ಶಾಂತಿ ಎಲ್ಲ ಧರ್ಮಗಳ ಮೂಲಮಂತ್ರವಾಗಿದೆ ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಧರ್ಮವೆಂದರೆ ಬಡವರಿಗೆ ಅನಾಥರಿಗೆ ಹಾಗೂ ನಿರ್ಗತಿಕರಿಗೆ ನೇರವು ನೀಡುವುದಾಗಿದೆ. ಪ್ರತಿಯೊಬ್ಬರಿಗೆ ತಮ್ಮ ದರ್ಮದ ಬಗ್ಗೆ ಅಭಿಮಾನ ವಿರಲಿ ಆದರೆ ಅನ್ಯ ಧರ್ಮಗಳ ಬಗ್ಗೆ ದ್ವೇಷ ಬೇಡ ಕೆಲವು ಸ್ವಾರ್ಥ ರಾಜಕಾರಣಿಗಳ ಮಾತುಗಳಿಂದ ದಾರಿ ತಪ್ಪಬೇಡಿ. ನಾವೇಲ್ಲರೂ ಒಂದೆ ಎಂಬ ಭಾವ ಬೆಳಸಿಕೋಳ್ಳಿ ರಮಜಾನ್ ಮಾಸದಲ್ಲಿ ಇಫ್ತಾರ ಕೊಡುವುದು ಶ್ರೀ ಮಠದ ಪರಂಪರೆಯಾಗಿದೆ. ಅದನ್ನೆ ನಾನು ಮುಂದುವರೆಸಿಕೊಂಡು ಹೊಗುತ್ತಿದ್ದೇನೆ. ನಿಮಗೆಲ್ಲರಿಗೂ ರಮಜಾನ್ ಮಾಸದ ಶುಭಾಶಯಗಳು.
ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಅಬ್ದುಲ್ಗನಿ ಮಕಾನದಾರ ಭಾರತ ಸರ್ವಧರ್ಮಗಳ ಕೇಂದ್ರವಾಗಿದೆ ನಮ್ಮ ಮದ್ಯದಲ್ಲಿ ಅದೆಷ್ಟೋ ವೈರುಧ್ಯಗಳಿದ್ದರು, ಶತ ಶತ ಮಾನಗಳಿಂದ ನಾವೇಲ್ಲರೂ ಒಂದಾಗಿ ಬದುಕುತ್ತಿದ್ದೇವೆ ಇದುವೆ ನಮ್ಮ ದೇಶದ ವೈಶಿಷ್ಟ್ಯತೆಯಾಗಿದೆ. ಜಾತ್ಯಾತಿತ ವ್ಯವಸ್ಥೆಯನ್ನು ಕೆಡದಂತೆ ನೊಡಿಕೊಳ್ಳುವುದು ನಮ್ಮೇಲ್ಲರ ಹೊಣೆಯಾಗಿದೆ ಎಂದರು.
ಧಾರ್ಮಿಕ ಮುಂಖಂಡ ಸೈಯದ ಶಕೀಲ್ ಅಹ್ಮದ ಕಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು.
ಜಾಮೀಯಾ ಮಸೀದಿ ಅಧ್ಯಕ್ಷ ಅಲ್ಲಾಭಕ್ಷ ನಮಾಜಕಟ್ಟಿ ಉಪಾಧ್ಯಕ್ಷ ಖಾಜಾಹುಸೇನ ಸಗರ, ಕಾರ್ಯದರ್ಶಿ ಎ. ಡಿ. ಯಕೀನ್, ಸದ್ಯರಾದ ಕೆ. ಎಂ. ಡೋಣಿ, ಎಂ ಎ ಮೇತ್ರಿ, ಹಸನಸಾಬ ಮನಗೂಳಿ, ಎ. ಕೆ. ಬಾಗವಾನ, ನಬಿ ಕುಂಬಾರವಾಡಿ, ಹಾಗೂ ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಉಪಸ್ಥಿತರಿದ್ಧರು.