ಯರಗಟ್ಟಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಜನರ ಸಹಕಾರ ಅಗತ್ಯ : ಗೋಪಾಲ ದಳವಾಯಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಜನರ ಸಹಕಾರ ಅಗತ್ಯ : ಗೋಪಾಲ ದಳವಾಯಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಜನರ ಸಹಕಾರ ಅಗತ್ಯ : ಗೋಪಾಲ ದಳವಾಯಿ  

ಯರಗಟ್ಟಿ 14: ಗ್ಯಾರಂಟಿ ಯೋಜನೆಗಳನ್ನು ಸಮರ​‍್ಕವಾಗಿ ಅನುಷ್ಠಾನಕ್ಕೆ ಕೆ ತರುವಲ್ಲಿ ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ. ಮಾಸಿಕ ಸಭೆಗೆ ಕೈ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಗ್ಯಾರಂಟಿ  5 ಯೋಜನೆ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಗೋಪಾಲ ದಳವಾಯಿ ಸೂಚನೆ ನೀಡಿದರು. 

ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಿರಂತರ ಸಭೆ ನಡೆಸುವ ಮೂಲಕ ನ್ಯೂನತೆಗಳನ್ನು ಸರಿಪಡಿಸಿ ಎಲ್ಲ ಫಲಾನುಭವಿಗೆ ಸರ್ಕಾರದ ಯೋಜನೆ ತಲುಪಿಸುವಂತೆ ನೋಡಿಕೊಳ್ಳಬೇಕು ಎಂದರು. 

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 200 ಯೂನಿಟ್ ಉಚಿತ ವಿದ್ಯುತ್, ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ, ಕುಟುಂಬದ ಮಹಿಳೆಗೆ 2000 ರೂ. ಮತ್ತು ಯುವ ನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ತಾಂತ್ರಿಕ ದೋಷದಿಂದ ಕೆಲವರಿಗೆ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ವಂಚಿತ ಫಲಾನುಭವಿಗಳ ಮಾಹಿತಿ ಸಂಗ್ರಹಿಸಿ ಸರಿಪಡಿಸುವ ಕಾರ್ಯ ನಡೆದಿದೆ. ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದರು. ಯಾವುದೇ ದೋಷವಿಲ್ಲದೆ ಗ್ಯಾರಂಟಿ ಯೋಜನೆಗಳು ಜನರ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. 

ಪ ಪಂ ಮುಖ್ಯಾದಿಕಾರಿ ತಹಸಿಲ್ದಾರ್  ಸರ್ ಮಾತನಾಡಿ  ಸರ್ಕಾರ ಜನಸಾಮಾನ್ಯರ ಅನುಕೂಲಕ್ಕಾಗಿ ಗೃಹ ಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆ ಜಾರಿಗೊಳಿಸಿದೆ. ಗ್ಯಾರಂಟಿ ಯೋಜನೆಗಳು ಶೇ.100 ಪ್ರಗತಿ ಸಾಧಿಸಬೇಕು. ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಮೂಲಕ ಫಲಾನುಭವಿಗಳಿಗೆ ಯೋಜನೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು. 

ಸಿಡಿಪಿಒ ಸುನೀತಾ ಪಾಟೀಲ ಮಾತನಾಡಿ, ಆಗಸ್ಟ್‌ವರೆಗೂಎಲ್ಲ ಫಲಾನುಭವಿಗಳಿಗೆ ಹಣ ತಲುಪಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಕೆಲವು ಫಲಾನುಭವಿಗಳು ವಂಚಿತರಾಗಿದ್ದು ಸಮಸ್ಯೆ ಬಗೆಹರಿಸಲಾಗುವುದು. ತಾಲೂಕಿನ ಮಹಿಳೆಯರು ತಮ್ಮ ಒಂದು ತಿಂಗಳ ಗೃಹಲಕ್ಷ್ಮಿ ಹಣ ಮಠದ ದಾಸೋಹಕ್ಕಾಗಿ ನೀಡಿದ್ದಾರೆ. ಕೆಲವರು ಮೇಕೆ ಸಾಕಾಣಿಕೆ, ಇಸ್ತ್ರಿ ಅಂಗಡಿ ಸೇರಿ ಸ್ವಯಂ ಉದ್ಯೋಗಕ್ಕಾಗಿ ವಿನಿಯೋಗಿಸಿಕೊಂಡಿದ್ದಾರೆ ಎಂದು ತಿಳಿಸಿದರು. 

ಸಭೆಯಲ್ಲಿ ಪಂಚ ಯೋಜನೆಗಳ ಕುರಿತು ಅಧಿಕಾರಿಗಳು ವಿವರಣೆ ನೀಡಿದರು. ಸಭೆಯಲ್ಲಿ ವಿದ್ಯಾರ್ಥಿ ಮತ್ತು ನೌಕರರಿಗೆ ಬಸ್ ಅನಾನುಕೂಲದಿಂದ ಆಗುತ್ತಿರುವ ತೊಂದರೆ, ಜಿಎಸ್‌ಟಿ ಗೊಂದಲ ಕುರಿತು ಒತ್ತು ನೀಡುವುದು, ಗ್ಯಾರಂಟಿ ಯೋಜನೆಗಳ ಕುರಿತು ಗ್ರಾಪಂ ಮಟ್ಟದಲ್ಲಿ ಜಾಗೃತಿ, ಸರ್ವರ್ ಸಮಸ್ಯೆ ನೆಪ ಹೇಳದೆ ನ್ಯಾಯ ಬೆಲೆ ಅಂಗಡಿಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಸಮಿತಿ ಸದಸ್ಯರು ಸಲಹೆ ನೀಡಿದರು.ಸರ್ಕಾರದ ಪಂಚಗ್ಯಾರಂಟಿ ಯೋಜನೆಯನ್ನ ಸಮರ​‍್ಕವಾಗಿ ಜನರಿಗೆ ತಲುಪಿಸಲು ಸಹಕರಿಸಬೇಕು. ಗೃಹಜ್ಯೋತಿ ಯೋಜನೆ ಪ್ರತಿಶತ 96ಅ ರಷ್ಟು ಪಲಾನುಭವಿಗಳಿಗೆ ತಲುಪಿದ್ದು ಹರ್ಷ ತಂದಿದೆ. ಇನ್ನುಳಿದ 4ಅ ಜನರಿಗೆ ತಲುಪಲು ಪ್ರಯತ್ನಿಸಬೇಕೆಂದರು ಅದೇ ರೀತಿ ಗೃಹಲಕ್ಷ್ಮೀ ಯೋಜನೆ 94ಅ ಜನರಿಗೆ ತಲುಪುತಿದ್ದು ಇನ್ನುಳಿದ 6ಅ ಆಯ್‌.ಟಿ/ಜಿ.ಎಸ್‌.ಟಿ ಅದನ್ನ ಆದಷ್ಟು ಬಗೆಹರಿಸಿ ಎಲ್ಲ ಪಲಾನುಭವಿಗೆ ತಲುಪಿಸಲು ಸೂಚಿಸಲಾಯಿತು. 

ಹೆಸ್ಕಾಂ ಎಇಇ ಎಂ. ಎಸ್‌. ವಿಶಾಪೂರಕರ,  ಉಪ ತಹಶೀಲ್ದಾರ ಎಸ್‌. ಬಿ. ಕುಲಕರ್ಣಿ, ಸದಸ್ಯರಾದ ರಾಘು ಗಿಡ್ಡಮಲ್ಲಪ್ಪಗೋಳ, ಬಸವರಾಜ ಪೂಜೇರ, ವಿಕ್ರಮ್ ಇಂಗಳೆ, ಮಂಜುನಾಥ ಹಾದಿಮನಿ, ಅಶೋಕ ಗಡಮ್ಮನವರ, ಮುತ್ತಣಗೌಡರ ಆರಿಬೆಂಚಿ, ಹಣಮಂತ ಭಜಂತ್ರಿ, ನಜೀರ ನದಾಫ, ಮಹಾಂತೇಶ ಉಪ್ಪಿನ, ಫಕ್ಕೀರ​‍್ಪ ಬಸಿಡೋಣಿ, ಆಯ್‌. ಗೌಡರ, ಲಕ್ಷ್ಮಣ ಕರಿಗೋಳಿ ಬಾಗವಹಿಸಿದ್ದರು. 


ಸುದ್ದಿ ಓದಿ