ರಾಣೆಬೆನ್ನೂರ

ಸಂಸ್ಕೃತಿಯ ಕಲೆಗಳ ಉಳಿವಿಗೆ ಜನರ ಸಹಕಾರ ಮುಖ್ಯ: ಶೇಖಪ್ಪ ಹೊಸಗೌಡ್ರ

ಸಂಸ್ಕೃತಿಯ ಕಲೆಗಳ ಉಳಿವಿಗೆ  ಜನರ ಸಹಕಾರ ಮುಖ್ಯ: ಶೇಖಪ್ಪ ಹೊಸಗೌಡ್ರ

ರಾಣೆಬೆನ್ನೂರು ಆ 20 ದೇಶದ ಜನಪದ ಹಾಗೂ ಸುಗಮ ಸಂಗೀತ, ಸೇರಿದಂತೆ ಮತ್ತಿತರ ಕಲೆಗಳು, ಜನಾ ಶ್ರಯದಲ್ಲಿ ಬೆಳೆದಾಗ ಮಾತ್ರ, ಕಲೆ ಮತ್ತು ಕಲಾವಿದರು  ಉಳಿದು ಬೆಳೆಯಲು ಸಾಧ್ಯವಾಗುವುದು ಎಂದು ನಗರಸಭಾ ಸದಸ್ಯ, ಶ್ರೀ ತುಂಗಾಜಲ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ಹೇಳಿದರು. ಅವರು ಮಾರುತಿ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನ್ಯೂ ಹನುಮಾನ್ ಕಲಾವಿದರ ಸಂಘವು ಆಯೋಜಿಸಿದ್ದ ಮಮತಾ ಸಾವಕ್ಕ ನವರ -ರಮಬಾಯಿ ಸುಗಮ ಸಂಗೀತ ಕಲಾವಿದರು ಸಾದರಪಡಿಸಿದ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾತ್ರೆ-ಉತ್ಸವಗಳು, ಹಬ್ಬ-ಹರಿದಿನಗಳು, ವಿಶೇಷ ಪೂಜಾ ಧಾರ್ಮಿಕ ಕಾರ್ಯಕ್ರಮಗಗಳಲ್ಲಿ ಇಂತಹ  ನಾಡಿನ ಖ್ಯಾತ ಕಲಾವಿದರ ಕಾರ್ಯಕ್ರಮಗಳು, ಮೇಲಿಂದ ಮೇಲೆ ನಡೆದಾಗ ಮಾತ್ರ ಗಂಧರ್ವ ವಿದ್ಯೆಯನ್ನು ಆಳವ ಡಿಸಿಕೊಂಡಿರುವ ಕಲಾವಿದರು, ಉಳಿದು ಬೆಳೆಯಲು ಸಾಧ್ಯವಾಗುವುದು ಎಂದರು ವೇದಿಕೆಯಲ್ಲಿ ಕರಬಸಪ್ಪ ಜಾಡರ್, ಪ್ರಮೋದ ಕೋಪರ್ಡೆ, ಲಕ್ಷ್ಮಣ ಸಾಲಿ, ಈರಣ್ಣ ಮುದಗ ಣ್ಣನವರ, ಕುಮಾರ ಮಡಿವಾಳರ, ಪಾಟೀಲ, ರವಿ ಸೇರಿದಂತೆ ಮತ್ತಿತರ ಗಣ್ಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು,ಉಪಸ್ಥಿತರಿದ್ದರು. 


ಸುದ್ದಿ ಓದಿ