ಮೂರು ತಿಂಗಳಿಗೊಮ್ಮೆ ಪಿಂಚಣಿ ಅದಾಲತ್ ಕಾರ್ಯಕ್ರಮ
ಶಿಗ್ಗಾವಿ 17: ಪ್ರತಿ ಮೂರು ತಿಂಗಳಿಗೊಮ್ಮೆ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವದು ಆದ್ದರಿಂದ ಸಾರ್ವಜನಿಕರು ಸರಕಾರದ ಯೋಜನೆಯನ್ನು ಪಡೆಯಲು ಅಲೆದಾಡಬಾರದು ಎಂದು ಸವಣೂರ ಉಪ ವಿಭಾಗಾಧಿಕಾರಿ ಅನ್ನಪೂರ್ಣಾ ಮುದಕಮ್ಮನವರ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಕಂದಾಯ ಇಲೆಖೆಯ ವತಿಯಿಂದ ಹಮ್ಮಿಕೊಂಡ ಶಿಗ್ಗಾವಿ ವಲಯದ ಹೋಬಳ್ಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳದ ನಿರ್ಗತಿಕರನ್ನು ಸ್ವತಃ ಗ್ರಾಮ ಲೆಕ್ಕಾಧಿಕಾರಿ ಅಂಥವರನ್ನು ಗುರ್ತಿಸಿ ಅವರಿದ್ದಲಿಗೆ ಹೋಗಿ ಅವರ ಅರ್ಜಿಗಳನ್ನು ತೆಗೆದುಕೊಂಡು ಅವರಿಗೆ ಸರಕಾರದ ಯೋಜನೆಯನ್ನು ತಲುಪಿಸಲು ಮುಂದಾಗಬೇಕು, ಸಾರ್ವಜನಿಕರೂ ಸಹ ಮದ್ಯವರ್ತಿಗಳಲ್ಲಿ ಹಾಗೂ ಎಜೆಂಟರಿಗಾಗಿ ಓಡಾಡಬಾರದು ಅರ್ಜಿಗಳನ್ನು ಸಲ್ಲಿಸಿ ತಕ್ಷಣವಾಗಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಸುಮಾರು 442 ಅರ್ಜಿಗಳನ್ನು ಪಡೆಯಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶ್ರೀಕಾಂತ ಬಳ್ಳಕ್ಕನವರ, ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಧುಂಡಸಿ ನಾಡ ಕಛೇರಿಯ ಉಪ ತಹಶೀಲ್ದಾರ ಬಸವರಾಜ ಹೋಂಕಣದವರ, ಕಂದಾಯ ನೀರೀಕ್ಷರ ಐ ಎಮ್ ಪಾಟೀಲ್, ಗ್ರಾಮ ಲೆಕ್ಕಾಧಿಕಾರಿ ಬಿ ಯು ಸೊಂಟಕ್ಕಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.