ಕೊಪ್ಪಳ

ಈಶಾನ್ಯ ಶಿಕ್ಷಕರ ಚುನಾವಣೆ ಶಾಂತಿಯುತ ಮತದಾನ

ಈಶಾನ್ಯ ಶಿಕ್ಷಕರ ಚುನಾವಣೆ ಶಾಂತಿಯುತ ಮತದಾನ

ಹೂವಿನ ಹಡಗಲಿ 23:  ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಚುನಾವಣೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಮತದಾನ ಶಾಂತಿಯುತವಾಗಿ ನಡೆಯಿತು.ಬೆಳಿಗ್ಗೆ 8 ರಿಂದಲೇ ಅರ್ಹ ಶಿಕ್ಷಕ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.ಪಟ್ಟಣದ ತಾಲೂಕು ಕಚೇರಿ ಸೇರಿದಂತೆ ಹಿರೇ ಹಡಗಲಿ ವಿ ಕೆ ಕೆ ಪದವಿ ಪೂರ್ವ ಕಾಲೇಜು ಹಾಗೂ ಇಟಿಗಿಯಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ.ಇಟಿಗಿ 112, ಹಿರೇ ಹಡಗಲಿ 86 ಮತ್ತು ಹೂವಿನ ಹಡಗಲಿ 280 ಒಟ್ಟು 478 ಅರ್ಹ ಶಿಕ್ಷಕರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.ಪೋಲೀಸ್ ಇಲಾಖೆಯ ಅಧಿಕಾರಿಗಳು ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಿದ್ದಾರೆ. 


ಸುದ್ದಿ ಓದಿ