ಕಿತ್ತೂರು

ಚೆನ್ನಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಚೆನ್ನಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನ 23 : ಕಿತ್ತೂರಾಣಿ ಚೆನ್ನಮ್ಮಳ ಜಯಂತೋತ್ಸವ ಮತ್ತು ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.  ಈ ಸಂದರ್ಭದಲ್ಲಿ ಚೆನ್ನಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು.  ಇದೇ ಸಂದರ್ಭದಲ್ಲಿ ಕಿತ್ತೂರ್ ರಾಣಿ ಚೆನ್ನಮ್ಮ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಳಾದ ಡಾ ಸುರೇಶ್ ಬಿರಾದಾರ್ ಮಾತನಾಡಿ, ಭಾರತದ ಇತಿಹಾಸದಲ್ಲಿ ಕಿತ್ತೂರ್ ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ಮಾಡಿದ ​‍್ರ​‍್ರಥಮ ಮಹಿಳೆಯಾಗಿದ್ದಾಳೆ.  ಬ್ರಿಟಿಷರು ಕಿತ್ತೂರಿನ ವಿರುದ್ಧ ಹೋರಾಡಿದ ಪ್ರಥಮ ಯುದ್ಧದಲ್ಲಿ ಚೆನ್ನಮ್ಮಳಿಗೆ ಸೋತು ಶರಣಾಗತರಾದರು. ಅಂದಿನಿಂದ ಇಲ್ಲಿಯವರೆಗೂ ಕರ್ನಾಟಕದಲ್ಲಿ ವಿಜಯೋತ್ಸವವನ್ನು ಆಚರಣೆ ಮಾಡುತ್ತಾ ಬರಲಾಗಿದೆ. ಚೆನ್ನಮ್ಮಳು ಇವತ್ತಿಗೂ ಕೂಡ ಎಲ್ಲರಿಗೂ ಸ್ಪೂರ್ತಿಯ ಸೆಲೆಯಾಗಿದ್ದಾಳೆ ಎಂದು ತಿಳಿಸಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶರಣು ಆಲೂರ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಬಿ ಎಸ್ ಬಿರಾದಾರ್, ಬಿ ಎಂ ಬಿರಾದರ್, ವೀರಣ್ಣ ಜುಗುತಿ,  ರವಿ ತೊರವಿ, ಬಿ ಕೆ ಪಾಟೀಲ್, ಉಮೇಶ್ ಕೊಳಕೂರ್, ವಂದಾಲ್, ಎಸ್ ವೈ ಪಾಟೀಲ್, ಪುಟ್ಟು ಸಾವಳಗಿ ಹಾಗೂ ಸಮಾಜದ ಹಿರಿಯರು ಮತ್ತು ಇತರರು ಹಾಜರಿದ್ದರು 


ಸುದ್ದಿ ಓದಿ