ಗಡಗಿ ಶಾಲೆ ಫಲಿತಾಂಶ ಕಿತ್ತೂರು ತಾಲೂಕಿಗೆ ಪ್ರಥಮ
ಲೋಕದರ್ಶನ ವರದಿ
ಚನ್ನಮ್ಮನ ಕಿತ್ತೂರು 27: ಎಸ್ ಎಸ್ ಎಲ್ ಸಿ ಪ್ರಸಕ್ತ ವರ್ಷದ ಫಲಿತಾಂಶದಲ್ಲಿ ಪಟ್ಟಣದ ಎಸ್ ಎನ್ ಸಿ ಶಿಕ್ಷಣ ಸಂಸ್ಥೆಯ ವಾಯ್ ಎಸ್ ಬಿ ಮೋಮೋರಿಯಲ್ ಸೆಂಟ್ರಲ್ ಹಿಂದೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪಲಿತಾಂಶವು ಶೇ 100 ರಷ್ಟಾಗಿದೆ.
ಕುಮಾರಿ ರೋಷಿಣಿ ಎಮ್ಮಿ 625ಕ್ಕೆ 623 (99.68) ಅಂಕ ಪಡೆದು ರಾಜ್ಯಕ್ಕೆ ಮೂರನೆಯ ರಾ್ಯಂಕ್, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕುಮಾರಿ ಅನು ಮೂಲಿಮನಿ 625ಕ್ಕೆ 620 (99.2) ಅಂಕಗಳಿಸಿ ದ್ವಿತೀಯ ಸ್ಥಾನ ಕುಮಾರಿ ಅಕ್ಷತಾ ಬಣಜಗಿ 625ಕ್ಕೆ 612 (97.92) ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಶಾಸಕ ಬಾಬಾಸಾಹೇಬ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ ವಾಯ್ ತುಬಾಕದ, ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದವು ಅಭಿನಂದಿಸಿದ್ದಾರೆ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರುವಲ್ಲಿ ಶಾಲೆಯ ಶ್ರಮ ಸಾರ್ಥಕವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕಿತ್ತೂರು ತಾಲೂಕಿನಲ್ಲಿ 600ಕ್ಕೂ 66 ವಿದ್ಯಾರ್ಥಿಗಳು ಪಡೆದಿದ್ದಾರೆ ಅದರಲ್ಲಿ ಇದೇ ಶಾಲೆಯ 19 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕ ಪಡೆದಿರುವದು ಈ ಶಾಲೆಯ ವಿಶೇಷವಾಗಿದೆ.