ಕಿತ್ತೂರು

‘ನಮ್ಮ ಗಂಡು ಮಕ್ಕಳಾದರೂ ನಮ್ಮ ಕುಟುಂಬಕ್ಕೆ ಆಸರೆಯಾಗಿರಲಿ’್ರ

‘ನಮ್ಮ ಗಂಡು ಮಕ್ಕಳಾದರೂ ನಮ್ಮ ಕುಟುಂಬಕ್ಕೆ ಆಸರೆಯಾಗಿರಲಿ’್ರ

ಲೋಕದರ್ಶನ ವರದಿ 

ಚನ್ನಮ್ಮನ ಕಿತ್ತೂರು 26: ನನ್ನ ಗಂಡ ದಿನಾಲು ದುಡಿಯುವದು ಅದೇ ಹಣದಿಂದ ಕುಡಿಯುವದು, ಕುಡಿದು ಗಟಾರಿಗೆ ಬೀಳುವದು ನಮಗೆ ಗಂಡು ಮಕ್ಕಳಾದರೂ ನಮ್ಮ ಕುಟುಂಬಕ್ಕೆ ಆಸರಾಗಿ ಇರಲ್ರಿ ಅದಕ್ಕಾಗಿ ಎಂ ಎಸ್ ಆಯ್ ಎಲ್ ಅಂಗಡಿ ಬೇಡವೆಂದು ಅಂಬಡಗಟ್ಟಿ ಗ್ರಾಮದ ಸವಿತಾ ತಳವಾರ  ಆಗ್ರಹಿಸಿದರು.  

ಸಮೀಪದ ಅಂಬಡಗಟ್ಟಿ ಗ್ರಾಮದಲ್ಲಿರುವ ಎಂ ಎಸ್ ಆಯ್ ಎಲ್ ಮದ್ಯದ ಮಳಿಗೆಯು ಇಲ್ಲಿಂದ ಸ್ಥಳಾಂತರಗೊಳಿಸಬೇಕೆಂದು ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಶನಿವಾರ ನಡೆದ ನಾಲ್ಕನೆಯ ದಿವಸದ ಪ್ರತಿಭಟನೆಯಲ್ಲಿ ಮಾತನಾಡಿ, ಕೂಲಿ ನಾಲಿಯಾದರೂ ಮಾಡಿ ನಮ್ಮ ಕುಟುಂಬವನ್ನು ಸಲಹುತ್ತಿದ್ದೇನೆ ಮುಂದೆ ನಮ್ಮ ಮಕ್ಕಳಿಂದಾದರೂ ನಮ್ಮ ಕುಟುಂಬವು ಸುಖದಿಂದ ಜೀವನ ನಡೆಸುವಂತಾಗಬೇಕೆಂದರು. ಈಗ ಸಣ್ಣ ಮಕ್ಕಳು ಸಹಿತ ಕುಡಿಯಲು ಪ್ರಾರಂಭಿಸಿದ್ದಾರೆ ತಂದೆ ತಾಯಿಗೆ ಆಸರೆಯಾಗಬೇಕಿದ್ದ ಮಕ್ಕಳು ಬೇಸರಾಗಿದ್ದಾರೆ ನಮ್ಮ ಮಕ್ಕಳು ವ್ಯಸನಿಗಳಾಗಬಾರದು ಎಂದು ಸವಿತಾ ಹೇಳಿದರು. ಅದಕ್ಕಾಗಿ ನಮ್ಮ ಗ್ರಾಮದಿಂದ ಈ ಮದ್ಯದ ಮಳೆಗೆಯನ್ನು ಸ್ಥಳಾಂತರಗೊಳಿಸಬೇಕು ಇಲ್ಲಿದಿದ್ದರೆ ಪ್ರತಿಭಟನೆ ನಿರಂತರವಾಗಿರುತ್ತದೆ ಎಂದು ಒಕ್ಕೋರಲಿನಿಂದ ಹೇಳಿದರು. 

ಮಡಿವಾಳೇಶ್ವ ಮಠದ ವೀರೇಶ್ವರ ಸ್ವಾಮೀಜಿ ಮಾತನಾಡಿ ಒಬ್ಬ ಮಹಿಳೆಯು ತನಗೆ ಎಷ್ಟೇ ಕಷ್ಟ ಬಂದರೂ ಅದನ್ನು ಲೆಕ್ಕಿಸದೇ ತನ್ನ ಗಂಡ ಮತ್ತು ಮಕ್ಕಳು ಸುಖದಿಂದ ಇರಬೇಕೆಂಬುದೇ ಅವರ ಆಶಯವಾಗಿದೆ ಅವರಿಗೆ ಕುಟುಂಬದ ದೊಡ್ಡ ಜವಾಬ್ದಾರಿ ಇರುತ್ತದೆ ಹೆಣ್ಣು ಮಕ್ಕಳಿಗೆ ಆದಷ್ಟು ತೊಂದರೆ ಗಂಡು ಮಕ್ಕಳಿಗೆ ಆಗುವದಿಲ್ಲ ಆದ್ದರಿಂದ ನಮ್ಮ ಗ್ರಾಮವು ವ್ಯಸನ ಮುಕ್ತರಾಗಿ ಉತ್ತಮ ಜೀವನ ನಡೆಸುವಂತಾಗಬೇಕು ಅದಕ್ಕಾಗಿ ಇಲ್ಲಿರುವ ಮದ್ಯದ ಮಳಿಗೆಯನ್ನು ಇಲ್ಲಿಂದ ಸ್ಥಳಾಂತರಗೊಳಿಸುವವರೆಗೂ ನಮ್ಮ ಹೋರಾಟವಿರುತ್ತದೆ ಎಂದರು. 

ಪ್ರತಿಭಟನೆಯಲ್ಲಿ ನೂರಾರು ಹೆಣ್ಣು ಮಕ್ಕಳು, ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ