ಅಧ್ಯಾತ್ಮದ ಕಡೆ ಹೆಚ್ಚಿನ ಆಸಕ್ತಿಯಿಂದ ಮನಸ್ಸಿಗೆ ನೆಮ್ಮದಿ: ಮಲ್ಲಿಕಾರ್ಜುನ ಶ್ರೀ
ಯರಗಟ್ಟಿ 17: ಅಧ್ಯಾತ್ಮದ ಕಡೆ ಹೆಚ್ಚಿನ ಆಸಕ್ತಿ ತೋರಿಸುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ ಎಂದು ಸವದತ್ತಿ ಮೂಲಿಮಠ ಪೂಜ್ಯ ಮ. ಘ. ಚ. ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಸತ್ತಿಗೇರಿನ ಗ್ರಾಮದ ಮಳಿಮಲ್ಲೇಶ್ವರ ಮಠದ ಆವರಣದಲ್ಲಿ ನಡೆದ ಸಿದ್ದಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ನಿತ್ಯ ಧ್ಯಾನ, ದೇವರ ಸ್ಮರಣೆಯಂತಹ ಆಧ್ಯಾತ್ಮಿಕ ಕೆಲಸದಲ್ಲಿ ತೊಡಗಬೇಕು. ನಿತ್ಯದ ದುಡಿಮೆ ಜತೆಗೆ ಆಧ್ಯಾತ್ಮದ ಕಡೆಗೂ ಗಮನಹರಿಸಬೇಕು ಎಂದರು
ಈ ಸಂದರ್ಭದಲ್ಲಿ ಬಾಗೋಜಿಕೊಪ್ಪದ ಮ. ಘ. ಚ. ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು, ಸತ್ತಿಗೇರಿಯ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಸ್ಥಳೀಯರಾದ ಶಿವಾನಂದ ವಾಲಿ, ಪ್ರಕಾಶ ವಾಲಿ, ಮಹಾಂತೇಶ ಗೋಡಿ, ಗುರು ವಾಲಿ, ಮಕ್ತುಮಸಾಬ ಬಾಗವಾನ, ಬಂಗಾರೆಪ್ಪ ಹರಳಿ, ಸುದೀರ ಗೋಡಿ, ಗುರುಪಾದ ಪಾಟೀಲ,ಉಮೇಶ ಮಾಗುಂಡನವರ ಸೇರಿದಂತೆ ಅನೇಕ ಇದ್ದರು.