ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ
ಯರಗಟ್ಟಿ12: ಹಿಂದೂ ಮುಸ್ಲಿಂ ಸೌಹಾರ್ದಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು’ ಸೌಂಡ್ ಸಿಸ್ಟಮ್ ಬ್ಯಾನ್ ಮಾಡಿದೆ ನಮ್ಮ ಸಂಸ್ಕೃತಿ ವಾದ್ಯ ಮೇಳಗಳನ್ನು ಬಳಿಸಿ ಹಬ್ಬದವನ್ನು ಆಚರಿಸೋಣ ಎಂದು ಮುರಗೋಡ ಠಾಣೆ ಸಿಪಿಐ ಆಯ್. ಎಂ. ಮಠಪತಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದಲ್ಲಿ ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿವೆ. ಎಲ್ಲರೂ ಸೇರಿ ಸಮಸ್ಯೆಯಾಗದಂತೆ ಹಬ್ಬ ಆಚರಿಸಬೇಕು’ ಎಂದರು.
ಪಿಎಸ್ಐ ಚಾಂದಬಿ ಗಂಗಾವತಿ ಮಾತನಾಡಿ, ‘ಪಟ್ಟಣದಲ್ಲಿ ಐದು ಕಡೆಗಳಲ್ಲಿ ಪೀರಗಳನ್ನು ಕೂಡಿಸುತ್ತಿದ್ದು, ಸಮಿತಿಗಳನ್ನು ರಚಿಸಿಕೊಳ್ಳಬೇಕು. ಸಮ್ಯೆಯಾದರೆ ಸಮಿತಿಯ ಸದಸ್ಯರೇ ನೇರ ಹೊಣೆಯಾಗುತ್ತಾರೆ. ಪೀರಗಳನ್ನು ದಫನ ಮಾಡುವಾಗ ನಿಮ್ಮ ಮಾರ್ಗಗಳನ್ನು ನಮಗೆ ತಿಳಿಸಬೇಕು. ತಂಟೇ ತಕರಾರು ಮಾಡದೆ ಹಬ್ಬ ಆಚರಿಸಬೇಕು’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸದಾನಂದ ಹಣಬರ, ನೀಲಪ್ಪ ಬಾರ್ಕಿ, ಭಾಸ್ಕರ ಹಿರೇಮೆತ್ರಿ, ಇಮಾಮಸಾಬ ಹಳಬರ, ಬಾಬು ಚನ್ನಮೇತ್ರಿ, ವಿಶಾಲಗೌಡ ಪಾಟೀಲ, ಎಸ್. ಎಸ್. ಕುರುಬಗಟ್ಟಿಮಠ, ಸಲೀಂ ಜಮಾದಾರ, ಸುರೇಶ ಭಜಂತ್ರಿ, ಫಿರೋಜ್ ಖಾದ್ರಿ, ಶಿವಾನಂದ ಕರಿಗೋಣವರ, ಹನುಮಂತ ಕಡಕೋಳ, ಮುದ್ದಪ್ಪ ಪೂಜೇರ, ಮಹಾದೇವ ಯಂಡ್ರಾವಿ, ಮುರಾರಿ ತೇಣಗಿ, ಶಾಸನಾಯ್ಕ ಪಾಟೀಲ, ಸೋಮನಿಂಗ ಬೆಳವಡಿ, ವಿಠ್ಠಲ ಆಲದಕಟ್ಟಿ ಸೇರಿದಂತೆ ಪೊಲೀಸ್ ಸಿಬ್ಬಂದಿಯಾದ ಎಎಸ್ಐ ಡೆಬ್ಲೂ. ಎಚ್. ಯಾದವಾಡ, ವಾಯ್. ಎಂ. ಕಡಕೋಳ, ಎಚ್. ಆರ್. ನ್ಯಾಮಗೌಡರ, ಎಸ್. ಬಿ. ದೊಡ್ಡವಾಡ ಇದ್ದರು.