ಶಾಂತಿ, ಸೌಹಾರ್ಧತೆ ಕಾನೂನು ಸುವ್ಯವಸ್ಥೆ ನೆಲೆಸುವಂತಾಗಿದೆ: ನ್ಯಾ.ಶ್ರೀಕಾಂತ
ಲೋಕದರ್ಶನ ವರದಿ
ಶಿಗ್ಗಾವಿ 26: ನಮ್ಮ ದೇಶದಲ್ಲಿ ಕಾಖಿ, ಕಾವಿ, ಖಾದಿ ಧಾರಿಗಳ ಕಾರ್ಯ ಅರ್ಥಪೂರ್ಣ ಕಾರ್ಯವಾಗಿದ್ದು ಅವುಗಳ ನಿಸ್ವಾರ್ಥ ಸೇವೆಯ ಪ್ರತಿಫಲವಾಗಿ ದೇಶದಲ್ಲಿ ಶಾಂತಿ, ಸೌಹಾರ್ಧತೆ ಕಾನೂನು ಸುವ್ಯವಸ್ಥೆ ನೆಲೆಸುವಂತಾಗಿದೆ ಎಂದು ನ್ಯಾಯವಾದಿ ಶ್ರೀಕಾಂತ ಪೂಜಾರ ಹೇಳಿದರು.
ಬಿಸನಳ್ಳಿ ಗ್ರಾಮದ ಶ್ರೀಕಾಶೀ ಜಂಗಮವಾಡಿ ಶಾಖಾ ಮಠದ ಆವರಣದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಮೂರನೇ ದಿನದ ಧರ್ಮಸಭೆಯನ್ನುದ್ದೇಸಿಸಿ ಮಾತನಾಡಿದ ಅವರು, ಕಾಖಿ ಧಾರಿಗಳು ಅನ್ಯಾಯ ಅಕ್ರಮಗಳನ್ನು ತಡೆದು, ದೇಶದ ರಕ್ಷಣೆಗೆ ಸಿದ್ಧರಾದರೆ, ಕಾವಿಧಾರಿಗಳು ಧರ್ಮೋಪದೇಶ ಮಾಡುವ ಮೂಲಕ ಸಮಾಜದ ಅಂಕು ಡೋಂಕುಗಳನ್ನು ತಿದ್ದುವ ಕೇಲಸ ಮಾಡುತ್ತಿದ್ದಾರೆ. ಖಾದಿ ದಾರಿಗಳು ಸಮಾಜ ಅಭಿವೃದ್ಧಿಗಾಗಿ ಶ್ರಮಿಸುವಮೂಲಕ, ಸಂಕಷ್ಟದಲ್ಲಿರುವ ಜನರನ್ನು ಮೇಲೇತ್ತುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಗುಳೆದಗುಡ್ಡದ ಶ್ರೀ ಡಾ.ನೀಲಕಂಠ ಶಿವಾಚಾರ್ಯರು ಪ್ರಾಸ್ತಾವಿಕ ನುಡಿನಮನ ಸಲ್ಲಿಸಿದ ಅವರು, ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ವಿಷಾದದ ಸಂಗತಿಯಾಗಿದೆ. ವಿದೇಶಿಯರು ಕೂಡಾ ಭಾರತದೋಳಗೆ ಪಾದಾರೆ್ಣ ಮಾಡುವಾಗ ಭಾರತದ ಮಣ್ಣನ್ನು ಹಣೆಗೆ ವಿಭೂತಿತರ ಧರಿಸಿಕೊಂಡು ಬರುತ್ತಿದ್ದಾರೆ. ವೀರಶೈವ ಧರ್ಮ ಸಿದ್ದಾಂತವನ್ನು ಮೇಚ್ಚಿ ಸಾಕಷ್ಟು ವಿದೇಶಿಯರು ನಮ್ಮ ಕಾಶೀ ಜಗದ್ಗುರುಗಳವರಿಂದ ಲಿಂಗಧಾರಣೆ ದೀಕ್ಷಾ ಸಂಸ್ಕಾರವನ್ನು ಪಡೆದು ತೆರಳುತ್ತಿದ್ದಾರೆ. ಅಂತಹ ಪವಿತ್ರ ಸಂಸ್ಕೃತಿ ನಮ್ಮದಾಗಿದೆ ಎಂದು ಹೇಳಿದರು.
ಕಾಶೀ ಜಂಗಮವಾಡಿಮಠದ ಜ.ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಭೆಯ ಧಿವ್ಯ ಸಾನಿಧ್ಯವನ್ನು ವಹಸಿ ಆರ್ಶೀವಚನ ನೀಡಿದ ಶ್ರೀಗಳು, ಸೋಪಾದಿಕ ದಾನ,ನಿರುಪಾದಿಕ ದಾನಕ್ಕೀಂತಲೂ ಸಹಜದಾನ ಶ್ರೇಷ್ಠದಾನಗಳಲ್ಲೋಂದಾಗಿದೆ. ಈ ಜಗದಲಿ ಜ್ಞಾನಕ್ಕೀರುವ ಅಮೋಘವಾಧ ಶಕ್ತಿ ಬೇರೋಂದಕ್ಕೀಲ್ಲ. ಭಕ್ತ ನಗ,ನಾಣ್ಯ,ದವಸ,ದಾನ್ಯಗಳನ್ನು ದಾನಮಾಡಿದರೆ, ಅದರ ಪ್ರತಿ ಫಲವಾಗಿ ಗುರುವರ್ಯರು ಜ್ಞಾನವನ್ನು ಧಾರೆ ಎರೆಯುತ್ತಾ ಬರುತ್ತಿದ್ದಾರೆ ಎಂದು ನುಡಿದರು.
. ಸಭೆಯಲ್ಲಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶಿಧರ ಯಲಿಗಾರ ರವರಿಗೆ ಶ್ರೀ ಮಠದಿಂದ ಗೋ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರೇಮಣಕಟ್ಟಿ ಶ್ರೀ ವಿಶ್ವಾರಾಧ್ಯ ಶ್ರೀಗಳು, ಶಂಭಣ್ಣ ಮಾ.ಪ.ಶೆಟ್ಟರ, ಮುರಗೇಶ ಆಜೂರ, ಪ್ರೇಮಾ ಪಾಟೀಲ, ವಸಂತಾ ಬಾಗೂರ, ವಿರೇಶ ಆಜೂರ, ಚನಬಸಪ್ಪ ಅಂಗಡಿ, ಶಿವಾನಂದ ಬಿಳೆಕುದರಿ, ರಮೇಶ ದುಗ್ಗತ್ತಿ, ಸೋಮಶೇಖರ ಆಜೂರ, ಆರ್.ಎಸ್.ನಾಗಶೆಟ್ಟಿ, ಸೋಮಶೇಖರ ಆಜೂರ ಸೇರಿದಂತೆ ಇತರರು ಇದ್ದರು. ಶಿಕ್ಷಕಿ ಜಿ.ಎಸ್.ದೇಸಾಯಿ ನಿರೂಪಿಸಿದರು.