ಕಾಮರ್ಿಕರಿಗೆ ವೇತನ, ಉದ್ಯೋಗ ಭದ್ರತೆ ನೀಡಿ: ದೇವದಾಸ್

ಕಾಮರ್ಿಕರಿಗೆ ವೇತನ, ಉದ್ಯೋಗ ಭದ್ರತೆ ನೀಡಿ: ದೇವದಾಸ್

ಬಳ್ಳಾರಿ 12: ನಗರದ ಗಾಂಧಿಭವನದಲ್ಲಿ ವಿಮ್ಸ್ ಗುತ್ತಿಗೆ ಕಾಮರ್ಿಕರ ಸಂಘದ ಪ್ರಥಮ ಸಮಾವೇಶ ನಡೆಯಿತು. ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ವಿಮ್ಸ್ ಗುತ್ತಿಗೆ ಕಾಮರ್ಿಕರ ಸಂಘದ ಅಧ್ಯಕ್ಷರಾದ ಆರ್.ಸೋಮಶೇಖರ್ಗೌಡರವರು ಮಾತನಾಡಿದರು. 

ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಸರ್ಜನ್ ಡಾ||ಅರವಿಂದ್ ಮಟೇಲ್ ಮಾತನಾಡುತ್ತಾ.., "ವಿಮ್ಸ್ ಗುತ್ತಿಗೆ ನೌಕರರಲ್ಲದೇ ಎಲ್ಲರೂ ಕೂಡ ಪ್ರಶ್ನೆ ಮಾಡುವಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ. ವಿಮ್ಸ್ ಗುತ್ತಿಗೆ ನೌಕರಿಗೆ ಪಿ.ಎಫ್, ಇ.ಎಸ್.ಐ.ನಂತಹ ಮೂಲಭೂತ ಹಕ್ಕುಗಳೇ ಇಲ್ಲವಾಗಿವೆ. ಇದನ್ನು ಎಲ್ಲಾ ಕಾಮರ್ಿಕರು ಒಗ್ಗಟ್ಟಾಗಿ ಒಕ್ಕೊರಲಿನಿಂದ ಪ್ರಶ್ನಿಸಬೇಕು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ" ಎಂದು ತಿಳಿಸಿದರು. 

ಖ್ಯಾತ ಮಕ್ಕಳ ತಜ್ಞರಾದ ಡಾ|| ವೈ.ಸಿ.ಯೋಗಾನಂದ ರೆಡ್ಡಿ ಮಾತನಾಡುತ್ತಾ.., "ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರೂ ಗುತ್ತಿಗೆಯ ಆಧಾರದ ಮೇಲೆ ಕೆಲಸಗಳು ಸಿಗುತ್ತಿವೆ. ಖಾಯಂ ಉದ್ಯೋಗಗಳು ಇಲ್ಲವೇ ಇಲ್ಲ. ಕಾಮರ್ಿಕರನ್ನು  ಗುತ್ತಿಗೆಯ ಹೆಸರಿನಲ್ಲಿ ಸಕರ್ಾರಗಳೂ ಶೋಷಣೆ ಮಾಡುತ್ತಿವೆ. ರೋಗಿಗಳನ್ನು ಗುಣಪಡಿಸುವ ಕಾರ್ಯದಲ್ಲಿ ವೈದ್ಯರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪಾತ್ರವನ್ನು ದಾದಿಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಮತ್ತು ಆಸ್ಪತ್ರೆಯನ್ನು ಸ್ವಚ್ಛಗೊಳಿಸುವ ಆಯಾಗಳು, ಹಾಸ್ಟಲ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಕಾಮರ್ಿಕರು ವಹಿಸುತ್ತಾರೆ. ಆದರೆ ಇಂದಿನ ದುಬಾರಿ ದಿನಗಳಲ್ಲಿ ಮೂರ್ನಾಲ್ಕು ತಿಂಗಳ ಸಂಬಳವಿಲ್ಲದೆ ಇಂತಹ ಗುತ್ತಿಗೆ ನೌಕರರ ಜೀವನ ನಡೆಸುವುದು ಕಷ್ಟಕರವಾಗಿದೆ" ಎಂದು ತಿಳಿಸಿದರು. ಎಐಎಮ್ಎಸ್ಎಸ್ನ ರಾಜ್ಯ ಉಪಾಧ್ಯಕ್ಷ ಎಮ್.ಎನ್.ಮಂಜುಳಾ ಮಾತನಾಡುತ್ತಾ.., "ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಪ್ರಶ್ನೆ ಮಾಡುವ ಮನೋಭಾವವನ್ನೇ ಕಲಿತಿಲ್ಲ. ಎಂದು ತಿಳಿಸಿದರು. 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ವಿಮ್ಸ್ ಗುತ್ತಿಗೆ ಕಾಮರ್ಿಕರ ಸಂಘದ ಕಾರ್ಯದಶರ್ಿ ಎ.ದೇವದಾಸ್ ಮಾತನಾಡುತ್ತಾ.., "ವಿಮ್ಸ್ ಗುತ್ತಿಗೆ ನೌಕರರಲ್ಲಿ ಹೆಚ್ಚು ಮಹಿಳಾ ಕಾಮರ್ಿಕರು ಕೆಲಸದಲ್ಲಿದ್ದಾರೆ. ಕುಟುಂಬದ ಹೊಣೆ ಹೊತ್ತು ಒಪ್ಪತ್ತಿನ ಊಟಕ್ಕಾಗಿ ಈ ಕೆಲಸವನ್ನೇ ನಂಬಿ ಹಗಲಿರುಳು ಕಷ್ಟಪಟ್ಟು ದುಡಿಯುತ್ತಿದ್ದಾರೆ. ಇಂದಿನ ದುಬಾರಿ ದಿನಗಳಲ್ಲಿ ಎಲ್ಲಾ ತೊಂದರೆಗಳನ್ನು ಎದುರಿಸಿ ಕೆಲಸ ಮಾಡುತ್ತಿದ್ದರೂ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಹಾಗೆಯೇ ಕೆಲಸ ಮಾಡುವಲ್ಲಿ ದಿನನಿತ್ಯ ಅನುಭವಿಸುವ ಕಿರುಕುಳ, ಅವಮಾನ, ಮಾನಸಿಕ ಹಿಂಸೆಗಳಿಗೆ ಗುರಿಯಾಗುತ್ತಿರುವರು. ಇವೆಲ್ಲಾ ಸಮಸ್ಯೆಗಳಿಗೆ ಕೊನೆ ಹಾಕಲು ವಿಮ್ಸ್ ಸಂಸ್ಥೆ/ ರಾಜ್ಯ ಸಕರ್ಾರವು, ಗುತ್ತಿಗೆ ನೌಕರರಿಗೆ ಗೌರವದಿಂದ ಜೀವನ ನಡೆಸಲು ಬೇಕಾಗುವ ವೇತನ, ಉದ್ಯೋಗ ಭದ್ರತೆ, ಎಲ್ಲಾ ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಕೆಲಸದ ಸ್ಥಳದಲ್ಲಿ ಆರೋಗ್ಯಕರ ವಾತಾವರಣ ನಿಮರ್ಿಸಲು ತುತರ್ು ಕ್ರಮಗಳನ್ನು ಕೈಗೊಳ್ಳಬೇಕು" ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ವಿಮ್ಸ್ ಗುತ್ತಿಗೆ ಕಾಮರ್ಿಕರ ಮುಖಂಡರಾದ ಲಕ್ಷ್ಮಿ, ಹೊನ್ನೂರಬಿ, ಪಾರ್ವತಿ, ಕಾಮಾಕ್ಷಿ, ದುರ್ಗಮ್ಮ, ಪದ್ಮ ಮತ್ತು ವಿಮ್ಸ್ನ ನೂರಾರು ಗುತ್ತಿಗೆ ಕಾಮರ್ಿಕರು ಪಾಲ್ಗೊಂಡಿದ್ದರು 

ಸುದ್ದಿ ಓದಿ