ಕಾರವಾರ

ತಾಂಡೇಲ್‌ರಿಗೆ ಪೌಲ್‌ಹ್ಯಾರಿಸ ಫೇಲೊ ಪ್ರಶಸ್ತಿ

ತಾಂಡೇಲ್‌ರಿಗೆ ಪೌಲ್‌ಹ್ಯಾರಿಸ ಫೇಲೊ ಪ್ರಶಸ್ತಿ

ಕಾರವಾರ 27:   ರೋಟರಿ ಕ್ಲಬ್ ಕಾರವಾರ ಹಿರಿಯ ಸದಸ್ಯ ರೋ. ಪಿ.ಎಂ.ತಾಂಡೇಲ್‌ರರವರು ರೋಟರಿ ಸಂಸ್ಥೆಯಲ್ಲಿ 50 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರು.  1977-78ರಲ್ಲಿ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಅನೇಕ ವರ್ಷಗಳವರೆಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವಾ ಅವಧಿಯಲ್ಲಿ ಕ್ಲಬ್ಬಿನ ಸ್ವಂತ ಕಟ್ಟಡ ಹಾಗೂ ಇನ್ನಿತರ ಜನಪರ ಕಾರ್ಯಗಳು ನಡೆದಿರುತ್ತವೆ.  ಇವರ ಈ ಸೂಧೀರ್ಘ ಸಮಾಜ ಸೇವೆಯನ್ನು ಪರಿಗಣಿಸಿ ರೋಟರಿ ಅಂತರಾಷ್ಟ್ರೀಯ ಸಂಸ್ಥೆಯಿಂದ ಕೊಡಲ್ಪಡುವ ಪ್ರಶಸ್ತಿಯಾದ “ಪೌಲ್‌ಹ್ಯಾರಿಸ್ ಫೆಲೋ” ಪ್ರಶಸ್ತಿ ಹಾಗೂ ಪಿನ್ ಪ್ರಧಾನ ಮಾಡಲಾಯಿತು.   

ರೋಟರಿ ಕ್ಲಬ್ ಕಾರವಾರ ಅಧ್ಯಕ್ಷ ರೋ. ಸುನಿಲ ಸೋನಿ ಎಲ್ಲರನ್ನು ಸ್ವಾಗತಿಸುತ್ತ ‘ನಮ್ಮ ಹೀರೀಯ ಸದಸ್ಯರನ್ನು ಈ ರೀತಿಯಾಗಿ ಸನ್ಮಾನಿಸುವುದು ನಮ್ಮ ಸೌಭಾಗ್ಯ,  ಇವರ ಸೇವೆಯನ್ನು ಸಂಸ್ಥೆಯು ಚಿರಕಾಲದವರೆಗೆ ಸ್ಮರಿಸುತ್ತದೆ’ ಎಂದರು.  ರೋ. ಕೃಷ್ಣಾನಂದ ಬಾಂದೇಕರ ರವರು ಮಾತನಾಡುತ್ತ ರೋ. ಪಿ.ಎಂ.ತಾಂಡೇಲರವರು ರಾಜಕೀಯವಾಗಿ, ಸಾಮಾಜಿಕವಾಗಿ ನಡೆದುಬಂದು ದಾರಿಯನ್ನು ಅತ್ಯಂತ ಸೊಗಸಾಗಿ ವಿವರಿಸಿದರು.  ರೋ ನಾಗರಾಜ ಜೋಶಿರವರು ‘ರೋ. ಪಿ.ಎಂ.ತಾಂಡೇರವರ ಸೂಧೀರ್ಘ ಸೇವೆಯನ್ನು ಪರಿಗಣಿಸಿ ರೋಟರಿ ಅಂತರಾಷ್ಟ್ರೀಯ ಸಂಸ್ಥೆ ಈ ಪ್ರಶಸ್ತಿಯನ್ನು ನೀಡಿದೆ, ಇದಕ್ಕೆ ಧನ್ಯವಾದವನ್ನು ಅರ​‍್ಿಸುತ್ತ, ತಾಂಡೇಲರವರ ಸೇವೆಯು ನಮಗೆಲ್ಲಾ ಸ್ಪೂರ್ತಿದಾಯಕವೆಂದರು.  

ಈ ಸಂದರ್ಭದಲ್ಲಿ ರೋ. ಎಂ.ಎ.ಕಿತ್ತೂರ, ರೋ. ಪ್ರಸನ್ನ ತೆಂಡೂಲ್ಕರ, ರೋ. ಮಿನಿನ ಪುಡ್ತಾಡೊ, ರೊ. ಶೈಲೆಶ ಹಳದೀಪೂರ, ರೋ. ಅಮರನಾಥ ಶೆಟ್ಟಿ, ರೋ. ರಾಜೇಶ ವೆರ್ಣೇಕರ, ರೋ. ಅನಮೋಲ ರೇವಣಕರ, ರೋ. ಸುರೇಶ ನಾಯ್ಕ, ರೋ. ಕೃಷ್ಣಾ ಕೇಳಸ್ಕರ, ರೋ. ರಾಮಚಂದ್ರ ಪಡವಳಕರ, ರೋ. ಮುರಲಿ ಗೋವೇಕರ, ರೋ. ಗುರು ಹೆಗಡೆ, ರೋ. ಅರ್ಚನಾ ಶೆಟ್ಟಿ ಉಪಸ್ಥಿತರಿದ್ದರು. 


ಸುದ್ದಿ ಓದಿ