ರಾಣೆಬೆನ್ನೂರ

30 ವರ್ಷ ಕಾಲ ತಿರಂಗಾ ಧ್ವಜ ಹಾರಿಸದವರಿಗೆ ಇಂದು ದೇಶಪ್ರೇಮ ಉಕ್ಕಿ ಹರಿದಿದೆ

30 ವರ್ಷ ಕಾಲ ತಿರಂಗಾ ಧ್ವಜ ಹಾರಿಸದವರಿಗೆ ಇಂದು ದೇಶಪ್ರೇಮ ಉಕ್ಕಿ ಹರಿದಿದೆ

ಮಾಧ್ಯಮ ಗೋಷ್ಠಿಯಲ್ಲಿ ಆರ್‌ಎಸ್‌ಎಸ್ ಕುರಿತು ಮಾಜಿ ಸಭಾಪತಿ ಕೆ ಬಿ. ಕೋಳಿವಾಡ ಟೀಕೆ

ರಾಣೆಬೆನ್ನೂರು ಅ 13 ದೇಶದ ಸ್ವಾತಂತ್ರ್ಯಕ್ಕಾಗಿ ಅಂದು 1912 ರಲ್ಲಿ ಈ ದೇಶ ಕಂಡ ಮಹಾನ್ ಮಹಾತ್ಮ ಗಾಂಧೀಜಿಯವರ ನೇತ್ರತ್ವದಲ್ಲಿ ಸ್ವಾತಂತ್ರ್ಯ ಚಳುವಳಿ ಆರಂಭವಾಗಿದ್ದು, ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ಸ್ವಾತಂತ್ರ್ಯಕ್ಕಾಗಿ  ಈ ದೇಶದ ಮತ್ತು ನಾಡಿನ ಲಕ್ಷಾಂತರ ಮುತ್ಸದ್ದಿಗಳು, ಸಮಾಜ ಚಿಂತಕರು, ಸಾಹಿತಿಗಳು, ಕೃಷಿಕರು ಅವರ ಉದ್ದೇಶ ಒಂದೇ ಆಗಿತ್ತು ಸ್ವಾತಂತ್ರ್ಯ ಸಿಗಬೇಕು ಎನ್ನುವುದು. ಅಂತಹ ಮಹಾನ್ ನಾಯಕರ ತ್ಯಾಗ-ಬಲಿದಾನ, ಮತ್ತು ಬಹು ದೂರದೃಷ್ಟಿಯ ಕಾರಣದಿಂದ  ದೇಶ ಸ್ವಾತಂತ್ರ್ಯ ಕಂಡಿದೆ ಎಂದು ಮಾಜಿ ಸಭಾಪತಿ ಕೆ. ಬಿ. ಕೋಳಿವಾಡ ಹೇಳಿದರು.ಅವರು ತಾಲೂಕಿನ ಕುಪ್ಪೇಲೂರು ಗ್ರಾಮದಲ್ಲಿ ನಡೆದ, ಹುತಾತ್ಮ ಮೆಣಸಿನಹಾಳ ತಿಮ್ಮನಗೌಡರ ಗ್ರಾಮ ಭೇಟಿ  ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.  

ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಬಾಲಗಂಗಾಧರ ತಿಲಕ್, ಸರೋಜಿನಿ ನಾಯ್ಡು, ಕಸ್ತೂರಿಬಾಯಿ ಹೀಗೆ ನೂರಾರು ಮುಖಂಡರ  ನಾಯಕತ್ವದಲ್ಲಿ ಬ್ರಿಟಿಷರೇ ದೇಶ ಬಿಟ್ಟು ತೊಲಗಿ ಆಂದೋಲನ ಆರಂಭವಾಗಿದ್ದು, ಎಂದು ವಿವರಿಸಿದರು. ಕರ್ನಾಟಕದಲ್ಲಿ ಹರ್ಡೀಕರ ಮಂಜಪ್ಪ, ನಿಟ್ಟೂರು ಶ್ರೀನಿವಾಸರಾವ್, ಆಲೂರು ವೆಂಕಟರಾವ್, ಎಸ್‌. ಆರ್ ಹುಕ್ಕೆರಿಕರ್  ಹೀಗೆ ಅನೇಕ ಮುಖಂಡರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಮುಂಚೂಣಿ ನಾಯಕರು, ಹಿರಿಯರು ನಡೆಸಿದ ಆಂದೋಲನ ಮಾರ್ಗದರ್ಶನದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದ ಮೆಣಸಿನಹಾಳ ತಿಮ್ಮನಗೌಡರು ಸಂಗೂರು ಕರಿಯಪ್ಪ, ಹಳ್ಳಿಕೇರಿ ಗುದ್ಲೆಪ್ಪ, ತಿರಕಪ್ಪ  ಮಡಿವಾಳರ ಹೀಗೆ ನೂರಾರು ದೇಶಭಕ್ತರು   ಧುಮಿಕಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ, ಅವರು ಅಂದು ಮಾಡಿದ ತ್ಯಾಗದ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಸ್ವಚ್ಛಂದವಾಗಿ ಬದುಕುತ್ತಿದ್ದೇವೆ ಎಂದರು.  

ಜಿಲ್ಲೆಯ 89 ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕೇವಲ 44 ದೇಶಭಕ್ತರು ಮಾತ್ರ ನಮ್ಮ ಮಧ್ಯೆ  ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಬಿಜೆಪಿ ಮೋದಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಹೇಳಿದಂತೆ ದೇಶದ ಬಹುದೊಡ್ಡ ಶ್ರೀಮಂತರ   ರಕ್ಷಣೆಗೆ ನಿಂತಿದೆ. ದೇಶ ರಕ್ಷಣೆ ಹೆಸರಿನಲ್ಲಿ ಬಡವರ ರಕ್ತ ಹೀರುತ್ತದೆ, ಆ ಟ್ಯಾಕ್ಸ ಈ ಟ್ಯಾಕ್ಷ ಜಿಎಸ್ಟಿ ಹೆಸರಿನಲ್ಲಿ ಬಡವರನ್ನು ಲೂಟಿ ಮಾಡುತ್ತಿದೆ ಇದರ ಪರಿಣಾಮ ಸಾಮಾನ್ಯರು ತಮ್ಮ ಬದುಕನ್ನು ಸಾಗಿಸುವುದು ಕಷ್ಟವಾಗಿದೆ, ಇಂತಹ ಭ್ರಷ್ಟ ಸರ್ಕಾರವನ್ನು  ಕಿತ್ತೊಗೆಯಬೇಕು ಎಂದು ಕಿಡಿಕಾರಿದರು ಕಾಂಗ್ರೆಸ್ ಸರ್ಕಾರ ಬಡವರ ಸೇವೆಯಲ್ಲಿ ಸದಾ ಮುಂದಿದೆ, ದೇಶದ ಯುವಜನರು ಮೋದಿ ಮಾತಿಗೆ ಮರುಳಾಗಿ, ಉದ್ಯೋಗವಿಲ್ಲದೆ, ನೀಡಿದ ಭರವಸೆ ಈಡೇರದೆ ಭ್ರಮನಿರಸನ.ಗೊಂಡಿದ್ದಾರೆ, ಮೋಸ ಹೋಗುವುದು ಸಹಜ  ಇನ್ನಾದರೂ ಮರುಳು ಮಾತಿಗೆ ಮಾರುಹೋಗದೆ, ನೀಡುವ ಆಮಿಷಗಳಿಗೆ ಬೆಲೆ ನೀಡದೆ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.  

ಬಿಜೆಪಿ ಇದುವರೆಗೂ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ, ಇಂದಿರಾ ಗಾಂಧಿ ಸರಕಾರ ಅನ್ನ ಆಹಾರಕ್ಕೆ ಕೊರತೆಯಾಗದಂತೆ, 20 ಅಂಶಗಳನ್ನು ಜಾರಿಗೆ ತಂದು ಆಹಾರ ಭದ್ರತೆ ಒದಗಿಸಿದ್ದಾರೆ ಇಲ್ಲಿಯವರೆಗೂ ಸಾಗಿ ಬಂದಿದೆ. ಇತಿಹಾಸವನ್ನು ತಿಳಿದುಕೊಂಡು, ಯುವಕರು ಮುಂದೆ ಸಾಗಬೇಕು ಆಗಮಾತ್ರ ದೇಶ ಮತ್ತಷ್ಟು ಪ್ರಬಲವಾಗಲು ಸಾಧ್ಯವಾಗುವುದು ಎಂದರು.  

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ರಾಮಪ್ಪ ಅವರು ಕಾಂಗ್ರೆಸ್ ಹೈಕಮಾಂಡಿನ ದೇಶದ ಯೋಜನೆಯನ್ನು ಜಾರಿಗೊಳಿಸುವ ಕುರಿತು ಸಮಗ್ರವಾಗಿ ವಿವರಿಸಿ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ, ಸಣ್ಣ ತಮ್ಮಪ್ಪ ಬಾರ್ಕಿ, ಜಟ್ಟೆಪ್ಪ ಕರೆಗೌಡ್ರ್‌, ಡಾ. ಆರ್‌. ಎಂ.ಕುಬೇರ​‍್ಪ, ಮಂಜನ ಗೌಡ ಪಾಟೀಲ್, ಪಿ.ಜೆ. ಮರಿಯಮ್ಮನವರ, ಪ್ರಕಾಶ್ ಕೋಳಿವಾಡ, ಬಸನಗೌಡ ಮರದ, ಏಕನಾಥ ಭಾನುವಳ್ಳಿ, ಕೃಷ್ಣಪ್ಪ ಕಂಬಳಿ, ಮೊದಲಾದವರು ಸ್ವಾತಂತ್ರ ರಕ್ಷಣೆಯಲ್ಲಿ ಉತ್ತರ ಕರ್ನಾಟಕ ಹಾಗೂ ಹಾವೇರಿ ಜಿಲ್ಲೆಯ ಯೋಧರ ಕೊಡುಗೆ ಕುರಿತು ಮಾತನಾಡಿದರು.  

ವೇದಿಕೆಯಲ್ಲಿ ನಿಂಗರಾಜ ಕೋಡಿಹಳ್ಳಿ, ಗೀರೀಶ ಮಾಕನೂರು, ಶಿವಾನಂದ ಕನ್ನಪ್ಪಳವರ, ರಾಜಣ್ಣ ಮೋಟಗಿ, ಪಕೀರ​‍್ಪ ಹೊನ್ನಾಳಿ, ತಿರುಪತಿ ಅಜ್ಜನವರ್, ಸುರೇಶ್ ಬಾನುವಳ್ಳಿ, ಎಲ್ಲಪ್ಪ ರೆಡ್ಡೇರ ಇದ್ದರು. 


ಸುದ್ದಿ ಓದಿ