ಶಿಗ್ಗಾವ್

ವಿದ್ಯುತ್ ಕ್ಷೇತ್ರ ಖಾಸಗೀಕರಣ ಕೈ ಬಿಡಲು ಪಾಟೀಲ ಆಗ್ರಹ

ವಿದ್ಯುತ್ ಕ್ಷೇತ್ರ ಖಾಸಗೀಕರಣ ಕೈ ಬಿಡಲು ಪಾಟೀಲ ಆಗ್ರಹ

ಶಿಗ್ಗಾವಿ 06: ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಕೇಂದ್ರ ಸರಕಾರದ ನಿರ್ಧಾರವನ್ನು ಕೈಬೀಡಬೇಕು ಎಂದು ರೈತ ಸೇನಾ ಜಿಲ್ಲಾಧ್ಯಕ್ಷ ವರುಣಗೌಡ ಪಾಟೀಲ ಆಗ್ರಹಿಸಿದರು. 

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ಬಿಜೆಪಿ ಸರಕಾರ ಈಗಾಗಲೇ ಪೆಟ್ರೋಲ್‌-ಡಿಸೇಲ್ ಬೆಲೆ ಹೆಚ್ಚಿಗೆ ಮಾಡಿದ್ದರಿಂದ ನೇರವಾಗಿ ರೈತರ ಕೃಷಿ ಚಟುವಟಿಕೆಗೆ ತುಂಬಾ ತೊಂದರೆಯಾಗಿದೆ ಇದೀಗ ಕೇಂದ್ರ ಸರಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೋಳಿಸುವ ತಿದ್ದುಪಡಿಯ ಪ್ರಸ್ತಾವನೆಯನ್ನು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುತ್ತದೆ,  ಈ ತಿದ್ದುಪಡಿ ಕಾಯ್ದೆಯು ರೈತರಿಗೆ, ಆರ್ಥಿಕ ದುರ್ಬಲರಿಗೆ, ನೌಕರರಿಗೆ ಮರಣ ಶಾಸನವಾಗಲಿದೆ ಎಂದು ಹೇಳಿದರು. 

ವಿದ್ಯುತ್ ಕ್ಷೇತ್ರವು ಬಂಡವಾಳ ಶಾಹಿಗಳ ಕೈಗೆ ಸಿಕ್ಕಿ ನೇರವಾಗಿ ಖಾಸಗಿಯವರ ಪಾಲಾಗಲಿದೆ ಆದರಿಂದ ರೈತರ ಕೃಷಿ ಪಂಪಸೆಟ್‌ಗೆ ನೀಡುತ್ತಿರುವ ಉಚಿತ ವಿದ್ಯುತ್ತರದ್ದಾಗಲಿದೆ, ಬಡವರಿಗೆ ನೀಡಿರುವ ಭಾಗ್ಯಜ್ಯೋತಿರದ್ದಾಗಲಿದೆ, ವಿದ್ಯುತ್ ಬೆಲೆ ಬೇರೆ ರಾಜ್ಯಗಳಲ್ಲಿ 10-12 ರೂ.ಗೆ ಏರಿಕೆಯಾಗಲಿದೆ ಈಗೆ ಅನೇಕ ಸಮಸ್ಯೆಗಳು ಎದುರಾಗಲಿವೆ ಆದ್ದರಿಂದ ಕೇಂದ್ರ ಸರಕಾರ ಈ ನಿರ್ಧಾರವನ್ನು ಕೈ ಬಿಡಬೇಕು ಇಲ್ಲದಿದ್ದರೆ ರೈತ ಸೇನಾ ಕರ್ನಾಟಕ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. 


ಸುದ್ದಿ ಓದಿ