ರಾಣೆಬೆನ್ನೂರ

ನೂತನ ಅಧ್ಯಕ್ಷ ಸದಸ್ಯರಿಗೆ ಪಾಟೀಲ ಅಭಿನಂದನೆ

ನೂತನ ಅಧ್ಯಕ್ಷ ಸದಸ್ಯರಿಗೆ ಪಾಟೀಲ ಅಭಿನಂದನೆ

ರಾಣೇಬೆನ್ನೂರ 06: ನಗರಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಶಿವಕುಮಾರ ನರಸಗೊಂಡರ ಮತ್ತು ಸದಸ್ಯರುಗಳಾದ ಬಸವರಾಜ ಚಿಮ್ಮಲಗಿ, ರವಿ ತಳವಾರ, ಗೀತಾ ಜಂಬಗಿ ಅವರಿಗೆ ಗುರುವಾರದಂದು ನಗರಯೋಜನಾ ಪ್ರಾಧಿಕಾರದ ಕಾರ್ಯಲಯದಲ್ಲಿ ಏರಿ​‍್ಡಸಿದ್ದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಅಭಿನಂದಿಸಿ ಗೌರವಿಸಿದರು. 

ಈ ಸಂದರ್ಭದಲ್ಲಿ ಶಾಸಕರಾದ ಅರುಣಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿಪಂ ಮಾಜಿ ಸದಸ್ಯ ಮಂಗಳಗೌರಿ ಪೂಜಾರ, ಎಸ್‌.ಎಸ್‌.ಪಾಟೀಲ ಸೇರಿದಂತೆ ಮತ್ತಿತರರು ಆಗಮಿಸಿ ನೂತನ ಅಧ್ಯಕ್ಷ ಮತ್ತು ಸದಸ್ಯರುಗಳಿಗೆ ಶುಭಕೋರಿದರು ನಂತರ ನಗರಸಭಾ ಹಾಲಿ ಮಾಜಿ ಸಸ್ಯರುಗಳು, ಬಿಜೆಪಿ ಹಿರಿಯ ಕಿರಿಯ ಮುಖಂಡರುಗಳು ಹಾಗೂ ಅಭಿಮಾನಿಗಳು ಅಭಿನಂದಿಸಿದರು. 


ಸುದ್ದಿ ಓದಿ