ಪತಂಜಲಿ ಯೋಗ ಸಮಿತಿ 12 ದಿವಸಗಳ ಕಾಲ ವಿಶೇಷ ಯೋಗ ಶಿಬಿರ

ಪತಂಜಲಿ ಯೋಗ ಸಮಿತಿ 12 ದಿವಸಗಳ ಕಾಲ ವಿಶೇಷ ಯೋಗ ಶಿಬಿರ

ಲೋಕದರ್ಶನ ವರದಿ

ಬಳ್ಳಾರಿ 05: ಬಳ್ಳಾರಿ ವಿದ್ಯಾನಗರ ಹಿಂಬಾಗದಲ್ಲಿರುವ ರಾಘವ ಕಾಲೋನಿ ಕ್ಷೆಮಾಭಿವೃದ್ದಿ ಸಂಘ ಹಾಗೂ ಜಿಲ್ಲಾ ಪತಂಜಲಿ ಯೋಗ ಸಮಿತಿ 12 ದಿವಸಗಳ ಕಾಲ 70 ಮಹಿಳೆಯರಿಗೆ ಮತ್ತು ಪುರುಷರಿಗೆ ವಿಶೇಷ ಯೋಗ ಶಿಬಿರ ಸಂಪೂರ್ಣ ಮುಗಿದಿದ್ದು ಶಿಬಿರದ ಸಮಾರೋಪ ಸಮಾರಂಭವನ್ನು ಮಂಗಳವಾರ ಆಚರಿಸಲಾಯಿತು. ಯೋಗ ಶಿಕ್ಷಕರಾದ ಗಾಜಲ ವಿರೇಶ್ ಶಿಬಿರವನ್ನು ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾದ ಜಿಲ್ಲಾ ಪತಂಜಲಿ ಯೋಗ ಸಂಯೋಜಕರಾದ ಇಸ್ವಿ ಪಂಪಾಪತಿಯವರು ಸಭೆಯನ್ನು ಉದ್ದೇಶಿಸಿ ಇಂದಿನ ತಾಂತ್ರಿಕ ಯುಗದಲ್ಲಿ ಮಹಿಳೆಯರು ಎಲ್ಲಾ ಯಂತ್ರದ ಮುಖಾಂತರ ಕೆಲಸವನ್ನು ಅಳವಡಿಸಿಕೊಂಡಿದ್ದು ದೇಹಕ್ಕೆ ದಣಿವು ಕಡಿಮೆ ಆಗಿ ನಾನಾ ರೋಗಗಳು ಆವರಿಸಿಕೊಂಡು ಅನಾರೋಗ್ಯದಿಂದ ಬಳಲುತ್ತಿದ್ದಾರೆ ತಿಂಗಳಿಗೊಮ್ಮೆ ಆಗುವ ಸಮಯಕ್ಕೆ ಸರಿಯಾಗಿ ಆಗದೆ ಏರುಪೇರಾಗಿ ಹಾಮರ್ೊನಿಯಂ ಕಡಿಮೆಯಾಗಿ ರಕ್ತದ ಕಣಗಳು ವೃದ್ದಿಯಾಗುತ್ತಿಲ್ಲ. ಹುಟ್ಟುವ ಮಕ್ಕಳು ಸಹ ಸದೃಡವಾಗಿರುವುದಿಲ್ಲ. ಇದಕ್ಕೆ ಕಾರಣ ಮಾನಸಿಕ ಒತ್ತಡ ತಿನ್ನುವ ಆಹಾರ, ಮತ್ತು ಪರಿಷ್ಕೃತ ಗಾಳಿ, ಕಾರಣ ಮಹಿಳೆಯರು ನಿತ್ಯ ಒಂದು ತಾಸು ಪ್ರಾಣಾಯಮ ಆಸನ, ಧ್ಯಾನ, ಮತ್ತು ಒಳ್ಳೆಯ ಧವಸ ಧಾನ್ಯಗಳು ಉಪಯೋಗಿಸುವುದರಿಂದ ದೈಹಿಕ ಶಕ್ತಿ ಹೆಚ್ಚಾಗಿ, ವೈಯಕ್ತಿಕ ಪಾರವಾರಿಕ, ಸಾಮಾಜಿಕ, ಲೌಖಿಕ ಇವುಗಳಿಂದ ಜಯಿಸಬಹುದು ಎಂದು ತಿಳಿಸಿದರು. 

ರಾಘವ ಕಾಲೋನಿ ಕ್ಷೇಮಾಭಿವೃದ್ದಿ ಸಂಘದ ಕಾರ್ಯದಶರ್ಿಗಳು ಹಾಗೂ ನಿವೃತ್ತ ಪ್ರಾಂಶುಪಾಲರಾದ ಜಿ.ಆರ್.ವೆಂಕಟೇಶುಲು ಮಾತನಾಡಿ ಈ ಶಿಬಿರ 12 ದಿವಸಕ್ಕೆ ಸೀಮಿತವಾಗಬಾರದು ಯೋಗ ಶಿಬಿರ ನಿತ್ಯ ನಡೆಸಿಕೊಡಬೇಕೆಂದು ಜಿಲ್ಲಾ ಪತಂಜಲಿಯವರು ಮನವಿ ಮಾಡಿಕೊಂಡರು. ಇದಕ್ಕೆ ನಮ್ಮ ಸಮಿತಿಯ ವತಿಯಿಂದ ಶಿಬಿರಕ್ಕೆ ಏನೂ ಬೇಕಾದರೂ ಸಹಕಾರ ನೀಡುತ್ತೇವೆ. ಹಾಗೆಯೇ ಎಲ್ಲಾ ಜಿಲ್ಲಾ ಪತಂಜಲಿ ಯೋಗ ಪದಾದಿಕಾರಿಗಳಿಗೆ ಗೌರವದಿಂದ ಸನ್ಮಾನಿಸಿದರು. 

ವೀರಶೈವ ಮಹಾವಿದ್ಯಾಲಯದ ಕನ್ನಡ ಪ್ರಾದ್ಯಾಪಕರಾದ ಮಂಜುನಾಥ ರೂ.5000 ಬೆಲೆ ಬಾಳುವ ಶಿಬಿರಕ್ಕೆ ಉಪಯೋಗಕ್ಕೆವಾಗು ಹಸಿರು ಮ್ಯಾಟ್ಗಳನ್ನು ದಾನವಾಗಿ ನೀಡಿದರು. ಶಿಬಿರದಲ್ಲಿ ಜಿಲ್ಲಾ ಪತಂಜಲಿ ಯೋಗ ಅಧ್ಯಕ್ಷರಾದ ಪಿ.ಎಂ.ನಟರಾಜ್ ಸಂಯೋಜಕರಾದ ಕಣೆಕಲ್ ಯರ್ರಿಸ್ವಾಮಿ, ರಾಘವ ಕಾಲೋನಿ ಪದಾದಿಕಾರಿಗಳಾದ ಪ್ರಸನ್ನ, ವಿರೇಶ್ಬಾಬು, ಅಂಬರೇಶ್. ಸಿವಿ.ರಾವ್. ಹಾಗೂ ನಾಯಕ್ ಶಿಬಿರಾಥರ್ಿಗಳು ಭಾಗವಹಿಸಿದರು.

 

ಸುದ್ದಿ ಓದಿ