ತಾಳಿಕೋಟಿ

ಪಾದಯಾತ್ರೆ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ

ಪಾದಯಾತ್ರೆ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ

ತಾಳಿಕೋಟೆ11: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ನಡೆಸಿದ ಕೂಡಲ ಸಂಗಮದಿಂದ ಬೆಂಗಳೂರವರೆಗಿನ ಪಾದಯಾತ್ರೆ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಜ.14 ರಂದು ಕೂಡಲಸಂಗಮದಲ್ಲಿ ಪಾದಯಾತ್ರೆ ವರ್ಷಾಚರಣೆ ಹಾಗೂ ಮೀಸಲಾತಿಗಾಗಿ ಪಂಚಮಸಾಲಿಗಳ ಜಾಗರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಬೇಕು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಜಿ ಕರೆ ನೀಡಿದರು.  

ಅವರು ಪಟ್ಟಣದಲ್ಲಿ ತಾಳಿಕೋಟೆ ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.   

ಲಿಂಗಾಯತ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟಕ್ಕೆ ಲಕ್ಷಾಂತರ ಜನ ಪಂಚಮಸಾಲಿ ಸಮಾಜ ಬಾಂಧವರು ಬಂದು ಅರ್ಥಪೂರ್ವ ಬೆಂಬಲ ನೀಡಿ ಯಶಸ್ವಿಗೊಳಿಸಿದ್ದಾರೆ. ಅವರೆಲ್ಲ ಸಹಾಯ, ಸಹಕಾರದಿಂದ ಹೋರಾಟಕ್ಕೆ ಕೆಲವೇ ದಿನಗಳಲ್ಲಿ ಪ್ರತಿಫಲ ದೊರೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ನೀಡಲು ಸಮುದಾಯದ ಸ್ಥಿತಿಗತಿ ಅಧ್ಯಯನವನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ನೀಡಿದ್ದಾರೆ. ರಾಜ್ಯಾಧ್ಯಂತ ವಸ್ತು ಸ್ಥಿತಿಯ ಅಧ್ಯಯನ ಪ್ರಾರಂಭವಾಗಿದೆ. ಸಮಾಜ ಬಾಂಧವರು ಅಧ್ಯಯನಕ್ಕೆ ಬರುವ ತಂಡಕ್ಕೆ ತಮ್ಮ ಮಾಹಿತಿಯನ್ನು ನೀಡಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರ​‍್ಪ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ನೂತನ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರು ಸಮಾಜಕ್ಕೆ ಮೀಸಲಾತಿ ಘೋಷಿಸುವ ಭರವಸೆ ಇದೆ. ಸರಕಾರ ಮಟ್ಟದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸರಕಾರದ ಮೇಲೆ ಒತ್ತಡವನ್ನು ಹೇರುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ.14 ರಂದು ಕೂಡಲ ಸಂಗಮಕ್ಕೆ ಬರಲಿದ್ದು, ಅಂದೇ ಮೀಸಲಾತಿ ಘೋಷಣೆ ಮಾಡುವ ಸಾಧ್ಯತೆ ಇದೆ. ಸಮಾಜ ಬಾಂಧವರು ತಮ್ಮಲ್ಲಿರುವ ವೈಯಕ್ತಿಕ ಭಿನ್ನತೆಗಳನ್ನು ಬಿಟ್ಟು ಸಮಾಜದ ಮಕ್ಕಳ ಭವಿಷ್ಯಕ್ಕಾಗ ಒಗ್ಗಟ್ಟು ಪ್ರದರ್ಶನ ಮಾಡಬೇಕು. ವರ್ಷಾಚರಣೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದರು.  

ಈ ಸಂದರ್ಭಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಮ್‌.ಪಾಟೀಲ, ಪುರಸಭೆ ಸದಸ್ಯ ನಿಂಗರಾಜ ಕುಂಟೋಜಿ, ಶರಣಗೌಡ ಗೋಟಗುಣಕಿ, ವೆಧ್ಯಾಧಿಕಾರಿ ಡಾ.ಶ್ರೀಶೈಲ ಹುಕ್ಕೇರಿ, ಮಡುಸಾಹುಕಾರ ಬಿರಾದಾರ, ಜಿ.ಎಸ್‌.ಕಶೇಟ್ಟಿ, ಕಾಸಿನಾಥ ಮುರಾಳ, ಬಿ.ವಿ.ಪಾಟೀಲ, ವಿಶ್ವನಾಥ ಬಿದರಕುಂದಿ, ಪ್ರಭು ಬಿಳೆಾವಿ, ಆಯ್‌.ಬಿ.ಬಿಳೆಾವಿ, ನಾಗಪ್ಪ ಚಿನಗುಡಿ, ಅಶೋಕ ಚಿನಗುಡಿ, ಜಗದೀಶ ಬಿಳೆಾವಿ, ಚಂದ್ರಶೇಖರ ಆಲ್ಯಾಳ ಸೇರಿದಂತೆ ಇತರರು ಇದ್ದರು.  


ಸುದ್ದಿ ಓದಿ