ಪಾಲಕರು ಮಕ್ಕಳತ್ತ ಹೆಚ್ಚು ಗಮನ ಹರಿಸಿ : ಪ್ರಕಾಶ ಕೊಪ್ಪದ ಕರೆ
ಯರಗಟ್ಟಿ 15: ಕಲ್ಲಪ್ಪ.ವಾಯ್. ಹುಣಶೀಕಟ್ಟಿ ನಿವೃತ್ತ ಶಿಕ್ಷಕರು, ಸಾಹಿತಿಗಳು, ಸಂಸ್ಥಾಪಕರು ಜ್ಞಾನಾಮೃತ ಶಾಲೆ ತೋರಣಗಟ್ಟಿ ಇವರು ಮಾತನಾಡಿ ಇಂದಿನ ಮಕ್ಕಳು ನಾಳಿನ ದೇಶದ ಪ್ರಜ್ಞಾವಂತ ಪ್ರಜೆಗಳಾಗಿ ಸಮಾಜದಲ್ಲಿ ಉತ್ತಮ ಸಂಸ್ಕಾರವಂತರಾಗಿ ಬದುಕಿ ಬಾಳಬೇಕು ಮತ್ತು ಮಕ್ಕಳು ತಂದೆ ತಾಯಿಯ ಕನಸ್ಸುಗಳನ್ನು ಈಡೇರಿಸಬೇಕು ಮಕ್ಕಳು ದೇವರು ಇದ್ದ ಹಾಗೆ ಅವರನ್ನು ಪ್ರತಿಯೊಬ್ಬರೂ ಪ್ರೀತಿಸಿ ಸರಿಯಾದ ದಾರಿ ತೋರಿಸಬೇಕು ಎಂದು ಹೇಳಿದರು.
ಅವರು ಪಟ್ಟಣದ ಸಹರಾ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಸಂಸ್ಕೃತಿಕ ಕಾರ್ಯಕ್ರಮ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಹಾರಾ ಶಾಲೆಯ ಕಾರ್ಯದರ್ಶಿ ಪ್ರಕಾಶ ಕೊಪ್ಪದ ಮಾತನಾಡಿ ಸಹಾರಾ ಶಾಲೆಯು ಮಕ್ಕಳಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಸಂಸ್ಥೆಯಾಗಿದೆ ಎಂದು ಪಾಲಕರಿಗೂ ಮಕ್ಕಳನ್ನು ಕಾಳಜಿ ಮಾಡುವ ಸಲಹೆ ಸೂಚನೆಗಳನ್ನು ನೀಡಿದರು.
ಇದೆ ಸಂದರ್ಭದಲ್ಲಿ ದೇಶದ ಸೈನಿಕರನ್ನು ಸನ್ಮಾನಿಸಲಾಯಿತು ಸೈನಿಕ ಗೀರೀಶ್ ಕಳಸಣ್ಣವರ ಮಾತನಾಡಿ ನಿಜವಾಗಿಯೂ ಮಕ್ಕಳ ಜೊತೆ ಸೇವೆ ಸಲ್ಲಿಸುವ ನೀವೆಲ್ಲ ಶಿಕ್ಷಕರು ಭಾಗ್ಯವಂತರು ಮಕ್ಕಳನ್ನು ಮುಂದಿನ ನಿಷ್ಠಾವಂತ ಪ್ರಜೆಯನ್ನಾಗಿ ದೇಶಪ್ರೇಮದ ಜೊತೆಗೆ ಸಮಾಜದಲ್ಲಿ ಪ್ರತಿಯೊಬ್ಬರನ್ನು ಪ್ರೀತಿಸುವ ಗುಣವನ್ನು ಕಲಿಸಿ ಎಂದು ಹೇಳಿ ತಮ್ಮ ಹಳೆಯ ವಿದ್ಯಾರ್ಥಿ ಜೀವನ ಘಟನೆಗಳನ್ನು ಸ್ಮರಿಸಿದರು.
ಉದಯಕುಮಾರ ಹಣಬರ ಮಾತನಾಡಿ ಮಕ್ಕಳ ಪ್ರತಿಭೆ ಮತ್ತು ಸಹಾರಾ ಶಾಲೆಯ ಸಾಧನೆಗಳನ್ನು ಸ್ಮರಿಸಿದರು.
ಪ್ರಕಾಶ ನರಿ ಎಪಿಎಂಸಿ ಅಧ್ಯಕ್ಷರು ಸವದತ್ತಿ. ಗಂಗಪ್ಪ ಮೀಶಿ ಗ್ರಾಂ. ಪಂ. ಸದಸ್ಯರು ಗೊರಗುದ್ದಿ, ರಾಜು ಕರೋಲ, ಬಸಲಿಂಗಯ್ಯ ಕಟ್ಟಿಮನಿ ಪ್ರಧಾನ ಗುರುಗಳು ಜ್ಞಾನಾಮೃತ ಶಾಲೆ ತೋರಣಗಟ್ಟಿ. ಸಹಾರಾ ಶಾಲೆಯ ಪಾಲಕರು, ಗ್ರಾಮದ ಗಣ್ಯರು, ಮುದ್ದು ಮಕ್ಕಳು ಹಾಜರಿದ್ದರು. ಹಣಮಂತ ಬೆಳ್ಳಿಕುಂಪಿ ಪ್ರಧಾನಗುರುಗಳು ಸಹಾರಾ ಶಾಲೆ ಯರಗಟ್ಟಿ ನಿರೂಪಣೆ ಮಾಡಿದರು ರೇಖಾ ಬಾಗೋಡಿ ಸ್ವಾಗತಿಸಿದರು ರೂಪಾ ಹುಣಶೀಕಟ್ಟಿ ವಂದಿಸಿದರು.