ಇಂದಿನಿಂದ ಜಿಲ್ಲಾಧ್ಯಂತ ಪಲ್ಸ ಪೋಲೀಯೋ ಅಭಿಯಾನ
ಕಾರವಾರ 30: ರಾಜ್ಯಾದ್ಯಂತ ಜ. 31ರಂದು ಪಲ್ಸ ಪೊಲೀಯೋ ಅಭಿಯಾನ ನಡೆಯುತ್ತಿದ್ದು, ಜಿಲ್ಲೆಯಲ್ಲೂ ಕೂಡ ಅಂದು ಜಿಲ್ಲಾ ವೈದ್ಯಕೀಯ ವಿಜ್ಷಾನ ಸಂಸ್ಥೆ ಆಸ್ಪತ್ರೆಯಲ್ಲಿ 5ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೊಲಿಯೋ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರದ ನಾಯಕ ತಿಳಿಸಿದ್ದಾರೆ.
ಫೆ. 1 ಮತ್ತು 2ರಂದು ಗ್ರಾಮೀಣ ಭಾಗ ಹಾಗೂ 1, 2, 3ರಂದು ನಗರ ಪ್ರದೇಶದಲ್ಲಿ ಬಿಟ್ಟುಹೋದ ಮಕ್ಕಳಿಗೂ ಕೂಡ ಪಲï್ಸ ಪೊಲೀಯೋ ಲಸಿಕೆ ಹಾಕುವ ವ್ಯವಸ್ಥೆ ಇರುತ್ತದೆ. ಇದಕ್ಕಾಗಿ ಜಿಲ್ಲೆಯಲ್ಲಿಒಟ್ಟು 881 ಪಲ್ಸ್ ಪೊಲಿಯೋ ಭೂತಗಳನ್ನು ನಿರ್ಮಿಸಿದ್ದು, ಇಲಾಖೆ, ಇಲಾಖೇತರ ಹಾಗೂ ವಿವಿಧ ಸಯಂ ಸೇವಾ ಸಂಸ್ಥೆಯ 2679 ಸದಸ್ಯರನ್ನು ನಿಯೋಜಿಸಲಾಗಿದೆ. ಅಭಿಯಾನದ ಮೇಲ್ವಿಚಾರಣೆಗಾಗಿ 179 ಮೇಲ್ವಿಚಾರಕರನ್ನು ಹಾಗೂ ಎಲ್ಲ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜೊತೆಗೆ ಕೋವಿಡ್-19ನ ಎಲ್ಲ ಮುನ್ನಚ್ಚೆರಿಕೆ ಕ್ರಮಕೈಗೊಂಡು ಪಲ್ಸ ಪೊಲಿಯೋ ಲಸಿಕಾ ವಿತರಣಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಈ ಅಭಿಯಾನದಲ್ಲಿ ರೋಟರಿ ಕ್ಲಬ್ ಹಾಗೂ ಇತರೇ ಸ್ವಯಂ ಸೇವಾ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೋಳ್ಳುತ್ತಿವೆ. ಪಲ್ಸ ಪೊಲೀಯೋ ಅಭಿಯಾನ ಉದ್ಘಾಟನೆಯನ್ನು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜನಪ್ರತಿನಿದಿಗಳಿಂದ, ತಾಲೂಕು ಮಟ್ಟದಲ್ಲಿ ಶಾಸಕರು ಹಾಗೂ ಚುನಾಯಿತ ಪ್ರತಿನಿದಿಗಳಿಂದ, ಗ್ರಾಮ ಪಂಚಾಯತ್ ಉಪಕೇಂದ್ರದ ಮಟ್ಟದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರಿಂದ ಚಾಲನೆ ನೀಡಲಾಗುವುದು ಎಂದಿದ್ದಾರೆ.
ಪೊಲೀಯೋ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಕಾಯಿಲೆಯಾಗಿದ್ದರಿಂದ ಪಾಲಕರು ಹೆಚ್ಚಿನ ಕಾಳಜಿ ವಹಿಸಿ, ಆರೋಗ್ಯ ಸಿಬ್ಬಂದಿ ಮನೆ ಭೇಟಿ ನೀಡಬೇಕೆನ್ನುವ ಅವಕಾಶಕ್ಕಾಗಿ ಕಾಯದೇ ಜ. 31ರಂದು ತಮ್ಮ ಸಮೀಪದ ಭೂತಗಳಿಗೆ 5 ವರ್ಷದೊಳಗಿನ ಮಕ್ಕಳನ್ನು ಕರೆ ತಂದು ಲಸಿಕೆ ಹಾಕಿಸಿ ಪೊಲಿಂಯೋ ನಿರ್ಮೂಲನೆ ಮಾಡುವಲ್ಲಿ ಸಹಕರಿಸಬೇಕೆಂದು ಡಿಹೆಚ್ಒ ವಿನಂತಿಸಿದ್ದಾರೆ.