ಯರಗಟ್ಟಿ

ಜೋಡೆತ್ತಿನ ತೆರೆಬಂಡಿ ಸ್ಪರ್ಧೆ ಹಳ್ಳಿಯ ಸೊಬಗಿನ ಕ್ರೀಡೆ: ವೈದ್ಯ

ಜೋಡೆತ್ತಿನ ತೆರೆಬಂಡಿ ಸ್ಪರ್ಧೆ ಹಳ್ಳಿಯ ಸೊಬಗಿನ ಕ್ರೀಡೆ: ವೈದ್ಯ

ಯರಗಟ್ಟಿ 16: ಇದೊಂದು ಹಳ್ಳಿಯ ಸೊಬಗಿನ ಕ್ರೀಡೆಯಾಗಿದೆ. ಬಸವಣ್ಣನ ಸ್ವರೂಪಿಯಾದ ಎತ್ತುಗಳು ರೈತರ ತಮ್ಮ ತಮ್ಮ ಎತ್ತುಗಳ ಶಕ್ತಿಯನ್ನು ತೋರಿಸಲು ಇಂತಹ ಸ್ಪರ್ಧೆಗಳನ್ನು ಏರ್ಪಡಿಸಿರುತ್ತಾರೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 

ಸಮೀಪದ ಇಟ್ನಾಳ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡೆತ್ತಿನ ತೆರೆಬಂಡಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.  

ಇಂತಹ ಸ್ಪರ್ಧೆಗಳಲ್ಲಿ ಎತ್ತುಗಳಿಗೆ ಹಿಂಸಿಸಬೇಡಿ ಎತ್ತುಗಳು ಬಸವಣ್ಣನ ಸ್ವರೂಪಿಯಾಗಿವೆ.  ನಿಮ್ಮ ಗ್ರಾಮಕ್ಕೆ ಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದು ಅಭಿವೃದ್ಧಿ ಪಡಿಸುತ್ತೇನೆ. ಪ್ರತಿ ವರ್ಷ ಬಸವೇಶ್ವರರ ಜಾತ್ರೆ ಅತಿ ವಿಜೃಂಭಣೆಯಿಂದ ಆಚರಿಸಿ ಎಂದು ಹೇಳಿದರು. 

ಬಂಗಾರ​‍್ಪ ಹರಳಿ, ಪ್ರಕಾಶ ವಾಲಿ, ಶಂಕರ ಇಟ್ನಾಳ, ಮಲಿಕಸಾಬ ಬಾಗವಾನ, ರಾಜು ಸೋಮನ್ನವರ, ಶಿವು ಚಂದರಗಿ, ಸಿದ್ದಪ್ಪ ಸಿದ್ದಬಸನ್ನವರ, ಈರ​‍್ಪ ಚಂದರಗಿ, ಮತ್ತಿತರರು ಇಟ್ನಾಳ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ