ಪಿಯು ಪರೀಕ್ಷೆ ಫಲಿತಾಂಶ: ವಿದ್ಯಾರ್ಥಿಗಳ ಉತ್ತಮ ಸಾಧನೆ
ಇಂಡಿ: ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶಾಲಿನಿ ಮಾಣಿಕ್ಚಂದ್ ದೋಶಿ ಮಹಿಳಾ ಕಲಾ, ವಾಣಿಜ್ಯ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರು ಶೇ.93.5 ಪ್ರತಿಶತ ಸಾಧನೆ ಗೈದಿದ್ದಾರೆ.
ಏಪ್ರಿಲ್ ಹಾಗೂ ಮೇ 2022 ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 206 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು. ಅದರಲ್ಲಿ 186 ವಿದ್ಯಾರ್ಥಿನಿಯರು ಪಾಸ ಆಗಿದ್ದಾರೆ.
ವಾಣಿಜ್ಯ ವಿಭಾಗದ ಐಶ್ವರ್ಯ ಉಟಗಿ 600 ಕ್ಕೆ 583 (ಶೇ.97.13) ಅಂಕ, ಭಾಗ್ಯಶ್ರೀ ಎಸ್. ಬಿರಾದಾರ 572 ಅಂಕ (ಶೇ.95.33) ದ್ವಿತೀಯ ಸ್ಥಾನ ಪಡೆದರೆ, ಭಾರತಿ ವಂದಾಲ 568 ಅಂಕ (ಶೇ.94.66) ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಶಾಂತಾ ಸಾಸವೇಕರ್ 566 (ಶೇ.94.33) ಅಂಕ ಪಡೆದು ಪ್ರಥಮ ಸ್ಥಾನ ಪಡೆದರೆ, ಅಕ್ಷತಾ ರಾಮ್ಲಾಲ್ ಚವ್ಹಾಣ 561 (ಶೇ.93.5) ಪಡೆದು ದ್ವಿತೀಯ ಸ್ಥಾನ ಪಡೆದರೆ, ನಿಖಿತಾ ರಾಠೋಡ 555 (ಶೇ.92.5) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ ಮತ್ತು ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.


