ರಾಷ್ಟ್ರೀಯ

ಮಹರ್ಷಿ ವಾಲ್ಮೀಕಿ ಜಯಂತಿಯAದು ಅವರ ಶಾಶ್ವತ ಕೊಡುಗೆಯನ್ನು ಕೊಂಡಾಡಿದ ಪ್ರಧಾನಿ ಮೋದಿ

ಮಹರ್ಷಿ ವಾಲ್ಮೀಕಿ ಜಯಂತಿಯAದು ಅವರ ಶಾಶ್ವತ ಕೊಡುಗೆಯನ್ನು ಕೊಂಡಾಡಿದ ಪ್ರಧಾನಿ ಮೋದಿ

ನವದೆಹಲಿ, ಅ. ೨೬ : ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಶದ ಜನತೆಗೆ ಶುಭಾಶಯಗಳನ್ನು ಸಲ್ಲಿಸಿದ್ದು, ಭಾರತದ ಸಾಂಸ್ಕೃತಿಕ ಪರಂಪರೆಗೆ ಮಹರ್ಷಿ ವಾಲ್ಮೀಕಿ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದ್ದಾರೆ. ಅವರ ಕಾಲಾತೀತ ಬೋಧನೆಗಳು ತಲೆಮಾರುಗಳಿಂದ ಮಾನವಕುಲಕ್ಕೆ ದಾರಿದೀಪವಾಗಿವೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಮೋದಿ, "ಮಹರ್ಷಿ ವಾಲ್ಮೀಕಿ ಜಯಂತಿಯAದು ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಅವರ ಉದಾತ್ತ ಚಿಂತನೆಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಭದ್ರ ಬುನಾದಿಯಾಗಿವೆ. ಪ್ರತಿ ಯುಗದಲ್ಲಿಯೂ ದೇಶದ ಪ್ರಗತಿಗೆ ಅವು ಸಹಕಾರಿಯಾಗಲಿವೆ. ಮಾನವಕುಲಕ್ಕೆ ಅವರು ನೀಡಿರುವ ಅಮೂಲ್ಯ ಸಂದೇಶಗಳು ದೇಶದ ಜನರಿಗೆ ಸದಾ ದಾರಿದೀಪವಾಗಿರಲಿವೆ" ಎಂದು ತಿಳಿಸಿದ್ದಾರೆ.

ಆದಿಕವಿ ಎಂದು ಗೌರವಿಸಲ್ಪಡುವ ಮಹರ್ಷಿ ವಾಲ್ಮೀಕಿ ಅವರು ಭಾರತೀಯ ಸಾಹಿತ್ಯ ಮತ್ತು ಆಧ್ಯಾತ್ಮಿಕ ಪರಂಪರೆಯ ಅತ್ಯಂತ ಪ್ರಭಾವಶಾಲಿ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದ ಕರ್ತೃ ಎಂದು ಸಾಂಪ್ರದಾಯಿಕವಾಗಿ ಪರಿಗಣಿಸಲ್ಪಟ್ಟಿದ್ದಾರೆ.

ರಾಮಾಯಣವು ಶ್ರೀರಾಮನ ಜೀವನ ಚರಿತ್ರೆಯನ್ನು ವಿವರಿಸುವುದರ ಜೊತೆಗೆ ಸತ್ಯ, ಧರ್ಮ, ಕರ್ತವ್ಯ, ಕರುಣೆ ಮತ್ತು ಭಕ್ತಿಯಂತಹ ಶಾಶ್ವತ ಮೌಲ್ಯಗಳನ್ನು ಸಾರುತ್ತದೆ. ಸಾಹಿತ್ಯ, ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಮಹರ್ಷಿ ವಾಲ್ಮೀಕಿ ನೀಡಿದ ಮಹತ್ವದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ.

ರಾಮಾಯಣದ ರಚನೆಗೆ ಮಾತ್ರ ಸೀಮಿತವಾಗಿರದ ಅವರ ಕೊಡುಗೆ, ಭಾರತೀಯ ಸಂಸ್ಕೃತಿ, ಧಾರ್ಮಿಕ ಆಚರಣೆಗಳು ಮತ್ತು ಸಾಮಾಜಿಕ ಜೀವನದ ಮೇಲೂ ಪ್ರಭಾವ ಬೀರಿದೆ. ಮಹಾಕಾವ್ಯದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ.

ಮಹರ್ಷಿ ವಾಲ್ಮೀಕಿಯವರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅವು ಭಾರತದ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸುವುದರ ಜೊತೆಗೆ ಇಡೀ ಮಾನವಕುಲಕ್ಕೆ ಸ್ಫೂರ್ತಿ ನೀಡುತ್ತಿವೆ ಎಂಬುದನ್ನು ಪ್ರಧಾನಿ ಮೋದಿ ಅವರ ಸಂದೇಶ ಒತ್ತಿಹೇಳಿದೆ. ಅವರ ಸಾಹಿತ್ಯಿಕ ಮತ್ತು ತಾತ್ವಿಕ ಪರಂಪರೆ ತಲೆಮಾರುಗಳಿಂದ ಜನರಿಗೆ ಸ್ಫೂರ್ತಿಯ ಸೆಲೆಯಾಗಿ ಮುಂದುವರಿದಿದೆ.


ಸುದ್ದಿ ಓದಿ