ಪಿಕೆಪಿಎಸ್ ವಾರ್ಷಿಕ ಸಾಧಾರಣ ಸಭೆ
ತಾಳಿಕೋಟಿ೨೧: ಸಮೀಪದ ಯಾಳವಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಸೆ. 22ರಂದು ಬೆಳಿಗ್ಗೆ 11:00 ಗಂಟೆಗೆ ಸೋಮೇಶ್ವರ ಮಂಗಲಕಾರ್ಯಾಲಯದಲ್ಲಿ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ .ಸಂ. ನಾಡಗೌಡವಹಿಸಲಿದ್ದಾರೆ. ಕಳೆದವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿನ ಗೊತ್ತುವಳಿ ಒದುವುದು ಮತ್ತು ಖಾಯಂ ಮಾಡುವುದು. ಲೆಕ್ಕ ಪರಿಶೋಧನೆ ವರದಿ, ಅಂದಾಜು ಪತ್ರಿಕೆ, ಜಮಾ-ಖುರ್ಚ್ , ಲಾಭ-ಹಾನಿ, ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ಸಲಾಗುವುದು ಈ ಸಭೆಗೆ ಎಲ್ಲ ಸದಸ್ಯರು ತಪ್ಪದೆ ಹಾಜರಾಗಬೇಕೆಂದು ಸಂಘದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸಿ .ಆಯ್. ಲಗಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ