ಕಾರವಾರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಅವರಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ವಿತರಣೆ ದೇವರ ಪ್ರಸಾದ ಇದ್ದಂತೆ '' ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್

ಧರ್ಮಸ್ಥಳ ಗ್ರಾಮಾಭಿವೃದ್ಧಿ ಅವರಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ವಿತರಣೆ ದೇವರ ಪ್ರಸಾದ ಇದ್ದಂತೆ '' ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್

ಜನ ಸೇವೆಯೇ ಜನಾರ್ಧನ ಸೇವೆ :  

“ಧರ್ಮಸ್ಥಳ ಗ್ರಾಮಾಭಿವೃದ್ಧಿ ಅವರಿಂದ ಆಕ್ಸಿಜನ್ ಕಾನ್ಸಂಟ್ರೇಟರ್ ವಿತರಣೆ ದೇವರ ಪ್ರಸಾದ ಇದ್ದಂತೆ '' ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ 

ಕಾರವಾರ 02: ಕರೋನಾ ಸಂಕಷ್ಟದ ಸಮಯದಲ್ಲಿ ಜಿಲ್ಲೆಯ ಜನರಿಗೆ ಉಪಯೋಗವಾಗಲೆಂಬ ಸದುದ್ದೇಶದಿಂದ ಆಕ್ಸಿಜನ್ ಕಾನ್ಸಂಟ್ರೇಟರ್  ಪೂರೈಸುವ ಮೂಲಕ ಸಾಕ್ಷಾತ್ ಮಂಜುನಾಥ ಸ್ವಾಮಿಯ  ಆಶೀರ್ವಾದ ಮತ್ತು ಪ್ರಸಾದ ನೀಡಿದಂತಾಗಿದೆ ಎಂದು ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್  ಹೇಳಿದರು.  

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆಗಳಿಗೆ ಉಚಿತವಾಗಿ ಐದು  ಆಕ್ಸಿಜನ್ ಕಾನ್ಸಂಟ್ರೇಟರ್  ವಿತರಿಸಿದ್ದು, ಕಾನ್ಸಂಟ್ರೇಟರ್‌ಗಳನ್ನು  ಜಿಲ್ಲಾಡಳಿತದ ಪರವಾಗಿ ಸ್ವೀಕರಿಸಿದರು. ಬುಧುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಸಚಿವ ಹೆಬ್ಬಾರ  ಮಾತನಾಡುತ್ತ ಸ್ವಾಸ್ಥ್ಯ ಹಾಗೂ ಸದೃಢ ಆರೋಗ್ಯ ನಿರ್ಮಾಣ ಮಾಡುವ ಗುರಿಯನ್ನು ಇಟ್ಟುಕೊಂಡು ಜನ ಸಂಘಟನೆ ಮತ್ತು ಸ್ವ ಸಹಾಯ ಸಂಘಗಳ ರಚನೆ,ಕೃಷಿ ಅಭಿವೃದ್ಧಿ, ಜ್ಞಾನ ವಿಕಾಸ,ವಿಮಾ ಕಾರ್ಯಕ್ರಮ,ರೈತರ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ, ಕೆರೆಗಳ ಪುನಶ್ಚೇತನ,ಸಮುದಾಯ ಅಭಿವೃದ್ಧಿ, ವಿಪತ್ತು ರಕ್ಷಣಾ ಪಡೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಜನರೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದು, ಪ್ರಸ್ತುತ ಕೋವಿಡ್ ಮಹಮಾರಿ ತೀವ್ರವಾಗಿ ಹಬ್ಬುತ್ತಿರುವ ಸಮಯದಲ್ಲಿ ನಿರ್ಗತಿಕರಿಗೆ ಆಹಾರ ಕಿಟ್ ಒದಗಣೆ,ಭಿಕ್ಷುಕರಿಗೆ, ರೋಗಿಗಳಿಗೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನ ಚಾಲಕ ನಿರ್ವಾಹಕರಿಗೆ ದೈನಂದಿನ ನೆಲೆಯಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. 

ಕೋವಿಡ್ ಲಕ್ಷಣ ಹೊಂದಿರುವವರಿಗೆ ಆಸ್ಪತ್ರೆಗೆ ತೆರಳಲು ಹಾಗೂ ಗುಣಮುಖರಾಗಿ ಮನೆಗೆ ಮರಳಿ ಬರುವವರಿಗೆ ಉಚಿತ ವಾಹನ ವ್ಯವಸ್ಥೆ, ಆಕ್ಸಿಜನ್ ವೆಂಟಿಲೇಟರ್ ವಿತರಣೆ,ಕಾನ್ಸನ್ಟ್ಸೇಟರ ಇನ್ನಿತರ ಪರಿಕರಗಳನ್ನು ಆಯ್ದ ಆಸ್ಪತ್ರೆಗಳಿಗೆ ಉಚಿತವಾಗಿ ಒದಗಿಸಿದ್ದು, ಜನ ಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿ ಕರ್ತವ್ಯ ನಿರ್ವಹಿಸುತ್ತಿರುವ  ಕಾರ್ಯ ಶ್ಲಾಘನೀಯ ಎಂದರು. 

ಜನರು ಕರೋನಾ ಮಹಾಮಾರಿಗೆ ಅಂಜದೇ ಸರಿಯಾದ ರೀತಿಯಲ್ಲಿ ಓಷೋಧೋಪಚಾರ ಮಾಡಿಕೊಂಡಲ್ಲಿ ತಕ್ಷಣ ಗುಣಮುಖರಾಗ ಬಹುದಾಗಿದ್ದು, ಗುಣ ಲಕ್ಷಣ ಕಾಣಿಸಿಕೊಂಡ ತಕ್ಷಣ ಟೆಸ್ಟ್‌ ಮಾಡಿಸಿಕೊಳ್ಳಬೇಕೆಂದು ತಿಳಿಸಿದ ಅವರು ಜಿಲ್ಲಾ ವ್ಯಾಪ್ತಿಯಲ್ಲಿ ಕರೋನಾ ರೋಗದ ವಿರುದ್ಧ ಹೋರಾಡಲು ಅಗತ್ಯ ವ್ಯವಸ್ಥೆ ಗಳಿದ್ದು ಜನರು ಯಾರು ಭಯ ಪಡುವ ಅಗತ್ಯ ಇಲ್ಲವಾಗಿದ್ದು,ತಾವೆಲ್ಲರೂ ಸಹಕಾರ ನೀಡಿದಲ್ಲಿರಲ್ಲಿ ಬಹುಬೇಗನೇ ಜಿಲ್ಲೆಯನ್ನು ಕರೋನಾ ಮುಕ್ತ ಮಾಡಬಹುದಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ್‌ ಉಪಸ್ಥಿತರಿದ್ದು ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಉಪಸ್ಸಿತರಿದ್ದು ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ ರವರು ಮಾತನಾಡುತ್ತ ಸ್ಟೇಟ್ ಬ್ಯಾಂಕ್ ಇಂಡಿಯಾದ ಬಿಸಿನೆಸ್ ಕರೆಸ್ಪಾಂಡೆಡ್ (ಬಿ.ಸಿ) ಯಾಗಿ ಕಾರ್ಯನಿರ್ವಹಿಸುತ್ತಿದ್ದು ಸುಮಾರು ಒಂದು ಸಾವಿರಕ್ಕಿಂತ  ಹೆಚ್ಚಿನ ಕಾರ್ಯಕರ್ತರ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಮುನ್ನೂರಕ್ಕಿಂತಲೂ ಹೆಚ್ಚು ಗ್ರಾಹಕ ಶೇವಾ ಕೇಂದ್ರಗಳನ್ನು ತೆರೆದಿದ್ದು ಮನೆ ಬಾಗಿಲಿಗೆ ಬ್ಯಾಂಕ್ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು ಈ ಮೂಲಕ ನಮ್ಮ ಸಂಸ್ಥೆಯು ಸಹ ಕರೋನಾ ವಾರಿಯರ್ಸ ರೀತಿಯಲ್ಲಿ ಜನ ಸಾಮಾನ್ಯರ ಕಷ್ಟದಲ್ಲಿ ಭಾಗಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.  ಧರ್ಮಸ್ಥಳ ಕ್ಷೇತ್ರದ ವಸಂತ ಸಾಲ್ಯಾನ್ ಅವರು  ಡಿಎಚ್‌ಒ ಶರದ್ ನಾಯಕ್‌ಗೆ ಕಾನ್ಸಂಟ್ರೇಟರ್  ಹಸ್ತಾಂತರ ಮಾಡಿದರು. ಉತ್ತರ ಕನ್ನಡ ಜಿಲ್ಲಾ ನಿರ್ದೇಶಕರಾದ ಶಂಕರ ಶೆಟ್ಟಿ ಜಿಲ್ಲಾ ಜನಜಾಗೃತಿ   ಉಪಾಧ್ಯಕ್ಷರಾದ ಮಹೇಶ್ ನಾಯ್ಕ್‌ ಯೋಜನಾಧಿಕಾರಿ ವಿನಾಯಕ ನಾಯ್ಕ್‌ ಕೃಷಿಮೇಲ್ವಿಚಾರಕರಾದ ಕೃಷ್ಣ ಮೇಲ್ವಿಚಾರಕರಾದ ಸಂತೋಷ್,  ನಗರಸಭೆ ಅಧ್ಯಕ್ಷರಾದ ನಿತಿನ್ ಪಿಕಳೆ ಉಪಸ್ಥಿತರಿದ್ದರು. ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ