ತುಂಬಿ ಹರಿದ ಡೋಣಿ ನದಿ: ಸಂಪರ್ಕ ಕಡಿತ
ತಾಳಿಕೋಟೆ23: ಜಿಲ್ಲೆಯಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಪಟ್ಟಣಕ್ಕೆ ಹೊಂದಿಕೊಂಡಿರುವ ಡೋಣಿ ನದಿ ತುಂಬಿ ಹರಿಯುತ್ತಿದ್ದು ಪಟ್ಟಣದಿಂದ ಹಡಗಿನಾಳ ರಸ್ತೆ ಸಂಪರ್ಕ ಕಡಿತಾಗಿದೆ. ಡೋಣಿ ನದಿಯಲ್ಲಿ ಪ್ರವಾಹ ಹೆಚ್ಚಾದರೆ ಮನಗೂಳಿ - ದೇವಾಪೂರ ರಾಜ್ಯ ಹೆದ್ದಾರಿ 60 ರಲ್ಲಿರುವ ಸೇತುವೆ ಮುಳಗಡೆ ಅಗುವ ಸಾಧ್ಯತೆ ಇರುವದರಿಂದ ಸಂಚಾರ ಬಂದ್ ಆಗುವ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಕಳೆದ ಮೂರಾ್ನಲ್ಕು ದಿನಗಳಿಂದ ಸುರಿದ ಮಳೆಯಿಂದ ಡೋಣಿ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ. ಜಿಲ್ಲೆಯಾಧ್ಯಂತ ಮಳೆ ನಿಂತರೂ ಪ್ರವಾಹ ಮಾತ್ರ ಇನ್ನು ನಿಂತಿಲ್ಲ. ಪಟ್ಟಣಕ್ಕೆ ಹೊಂದಿಕೊಂಡಿರುವ ಡೋಣಿ ನದಿಯಲ್ಲಿ ಶನಿವಾರ ತಡರಾತ್ರಿ ಪ್ರವಾಹ ಆರಂಭವಾಗಿದೆ. ಶನಿವಾರ ತಡರಾತ್ರಿಯಿಂದ ಪಟ್ಟಣದಿಂದ ಹಡಗಿನಾಳ ರಸ್ತೆಯಲ್ಲಿರುವ ಕೆಳ ಮಟ್ಟದ ಸೇತುವೆ ಮೇಲೆ ನೀರು ಬಂದಿದ್ದರಿಂದ ರಸ್ತೆ ಸಂಚಾರ ಬಂದ್ ಆಗಿದೆ. ಮನಗೂಳಿ ದೇವಾಪೂರ ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆ ಶಿಥಿಲವಾಗಿದ್ದು ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಹೀಗಾಗಿ ಬೀಟಿಷರ್ ಕಾಲದಲ್ಲಿ ನಿರ್ಮಾಣವಾಗಿದ್ದ ಕೆಳ ಮಟ್ಟದ ಸೇತುವೆ ಮೇಲೆ ತಾತ್ಕಾಲಿಕವಾಗಿ ಸಂಚಾರ ಆರಂಬಿಸಲಾಗಿದೆ. ಆದರೆ ಸದ್ಯ ಡೋಣಿ ನದಿಯಲ್ಲಿ ಭಾರಿ ಪ್ರವಾಹ ಬಂದರೆ ಪಟ್ಟಣಕ್ಕೆ ಸಂಪರ್ಕ ಬಂದ್ ಆಗಲಿದೆ. ಹಿಗಾಗಿ ಜಿಲ್ಲಾ ಕೇಂದ್ರ ವಿಜಯಪೂರ, ತಾಲೂಕು ಕೇಂದ್ರ ಮುದ್ದೇಬಿಹಾಳ, ಬಾಗಲಕೋಟೆ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಡಿತವಾಗುವ ಆತಂಕವನ್ನುಂಟು ಮಾಡಿದೆ.
ಪಟ್ಟಣದ ಹಡಗಿನಾಳ ರಸ್ತೆಯಲ್ಲಿ ನೂತನವಾಗಿ ಸೇತುವೆ ಕಾಮಗಾರಿ ಮುಕ್ತಾಯವಾಗಿದೆ. ಆದರೆ ಅದಕ್ಕೆ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಭೂ ಸ್ವಾಧಿನ ಕಾರ್ಯ ಆಗಿಲ್ಲ. ಇದರಿಂದ ರಸ್ತೆ ಕಾಮಗಾರಿ ಆಗಿಲ್ಲ. ಸೇತುವೆ ನಿರ್ಮಾಣವಾದರೂ ಅದು ಉಪಯೋಗಕ್ಕೆ ಬಾರದಾಗಿದೆ. ಜಿಲ್ಲಾಡಳಿತ ಎಚ್ಚೆತ್ತುಕೊಂಡು ತುರ್ತಾಗಿ ರಸ್ತೆ ಕಾಮಗಾರಿ ಮುಗಿಸಿದರೆ ಡೋಣಿಯಲ್ಲಿ ಎಷ್ಟೇ ಪ್ರವಾಹ ಬಂದರೂ ಸಹಿತ ಸಂಚಾರಕ್ಕೆ ಅನಕೂಲವಾಗಲಿದೆ. ಇನ್ನು ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿಯಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ತುರ್ತಾಗಿ ಆರಂಭಿಸಿ ಮುಗಿಸಬೇಕಾದ ಅನಿವಾರ್ಯತೆ ಇದ್ದು ಸರಕಾರ, ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕಿದೆ.
ಪ್ರವಾಹದಿಂದ ಹಡಗಿನಾಳ ರಸ್ತೆಯಲ್ಲಿರುವ ಸೇತುವೆ ಮುಳಗುಡೆಯಾಗಿದ್ದರಿಂದ ಸಂಚಾರ ಬಂದ್ ಆಗಿ ಹಡಗಿನಾಳ ಮೂಕಿಹಾಳ, ಕಲ್ಲದೇವನಹಳ್ಳಿ, ಶಿವಪೂರ ರಸ್ತೆ ಸಂಚಾರ ಬಂದ್ ಆಗಿತ್ತು. ಇದರಿಂದ ಎಲ್ಲ ಗ್ರಾಮಗಳ ಗ್ರಾಮಸ್ಥರು ಸುತ್ತುವರೆದು