ಬುದ್ದ ಅಂಬೇಡ್ಕರ ಉದ್ಯಾನವನ ನಿರ್ಮಾಣಕ್ಕೆ ರೂಪರೇಷೆ
ಲೋಕದರ್ಶನ ವರದಿ,
ಜಮಖಂಡಿ 25: ನಗರದ ಅಂಬೇಡ್ಕರ ಭವನದ ಹತ್ತಿರ ಸುಂದರ, ಸುಸಜ್ಜಿತ, ಬುದ್ದ-ಅಂಬೇಡ್ಕರ ಉದ್ಯಾನವನ ನಿರ್ಮಣಕ್ಕೆ ನಗರ ಯೋಜನಾ ಪ್ರಾಧಿಕಾರ ರೂಪರೇಷೆ ರಚಿಸಿ ಸರ್ಕಾರದ ಅನುಮೋದನೆಗೆ ಕಳಿಸಲಾಗಿದ್ದು, ಶೀಘ್ರದಲ್ಲಿ ಡಿಪಿಆರ್ಗೆ ಅನುಮತಿ ಸಿಗುವ ಸಾಧ್ಯತೆ ಇದೆಂದು ಪ್ರಾಧಿಕಾರ ಅಧ್ಯಕ್ಷ ಯಮನೂರು ಮೂಲಂಗಿ ತಿಳಿಸಿದರು.
ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಗಾಗಲೇ ಪ್ರಾಧಿಕಾರದಲ್ಲಿ ವಿವಿಧ ತೆರಿಗೆ ಮೂಲಗಳಿಂದ ಸು. 34 ಲಕ್ಷ ರೂ,ಗಳಷ್ಟು ಹಣ ಸಂಗ್ರಹವಾಗಿದ್ದು, 12,225 ಚದರ ಮೀಟರ್ ಭೂಮಿಯಲ್ಲಿ ಬುದ್ದ- ಅಂಬೇಡ್ಕರ ಉದ್ಯಾನವನ ನಿರ್ಮಾಣದ ವಿನಿಯೋಗಕ್ಕೆ ನಿರ್ಧರಿಸಲಾಗಿದೆ. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ನೇತೃತ್ವದಲ್ಲಿ ಸರ್ಕಾರಕ್ಕೆ ಕ್ರೀಯಾಯೋಜನೆ ಫೈಲ್ ಕಳಿಸಿದ್ದು, ಮಂಜೂರಾತಿ ಕೊಡಾ ಸಿಗಲಿದೆ. ತೋಟಗಾರಿಕೆ, ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯಲಿದ್ದು, ನಗರದ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗುವಂತಹ ಸುಸಜ್ಜಿತ ಸುಂದರ ಉದ್ಯಾನವನ ನಿರ್ಮಾಣಗೊಳ್ಳಲಿದೆ. ಉದ್ಯಾನವನಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮಕ್ಕಳು ಆಟ, ನಾಗರಿಕರು ವಾಯುವಿಹಾರ ಸವಿಯಬಹುದು ಎಂದರು.
ನಗರದ ಮಧ್ಯ ಭಾಗದಲ್ಲಿರುವ ಲಕ್ಕನಕೆರೆಯ ಸಂರಕ್ಷಣೆ ಕಾಮಗಾರಿ ಪ್ರಾರಂಭವಾಗುತ್ತದೆ. ಸ್ವಾಮಿವಿವೇಕಾನಂದರ ಮೂರ್ತಿ ಪ್ರತಿಸ್ಥಾಪನೆಯಾಗಲಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ಅನೇಕ ಅಭಿವೃದ್ದಿ ಕಾಮಗಾರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದು, ಸಂತೋಷುಕರ ಸಂಗತಿಯಾಗಿದೆಂದು ತಿಳಿಸಿದರು. ಪ್ರಾಧಿಕಾರ ಸದಸ್ಯ ಶ್ರೀಧರ ಕಂಬಿ, ಮುರುಗೇಶ ಕಲ್ಯಾಣಶೆಟ್ಟಿ, ರಾಹುಲ್ ದೇಸಾಯಿ ಇದ್ದರು.