ಹೂವಿನ ಹಡಗಲಿ

ನಮ್ಮ ನಾಡಿನ ಸೌಹಾರ್ದತೆ ಪ್ರಪಂಚಕ್ಕೆ ಮಾದರಿ: ಸಖಾಫಿ

ನಮ್ಮ ನಾಡಿನ ಸೌಹಾರ್ದತೆ ಪ್ರಪಂಚಕ್ಕೆ ಮಾದರಿ: ಸಖಾಫಿ

ಹೂವಿನಹಡಗಲಿ. 01:  ನಮ್ಮ  ನಾಡು  ಸೌಹಾರ್ದತೆಯ ನೆಲೆಬೀಡು ಇಲ್ಲಿ  ಜಾತಿ ಧರ್ಮ ಕುಲ ಯಾವುದು ಇಲ್ಲ ಹಾಗಾಗಿ ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ತೋರಿಸುತ್ತದೆ ಎಂದು ಎಸ್ ಎಸ್ ಎಫ್ ಸಂಘಟನೆಯ ರಾಜ್ಯಾಧ್ಯಕ್ಷ ಸುಫೀಯಾನ್ ಸಖಾಫಿ ಹೇಳಿದರು.   

ಪಟ್ಟಣದ  ಅಂಜಿನೇಯ  ದೇವಾಸ್ಥಾನದ ಹತ್ತೀರ ಹಮ್ಮಿಕೊಂಡಿದ್ದ ಮನುಷ್ಯ  ಮನುಷ್ಯಗಳನ್ನು ಪೋಣಿಸುವ ಸೌಹಾರ್ದ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತದಲ್ಲಿ ವಿವಿಧ ಧರ್ಮ, ಜಾತಿ, ಭಾಷೆ ಮತ್ತು ಸಂಸ್ಕೃತಿಯ ಜನರು  ಪರಸ್ಪರ ಗೌರವದಿಂದ ಬಾಳುತ್ತಿದ್ದಾರೆ. ಇದು ಭಾರತದ ಶಕ್ತಿ ಶ್ರೀಮಂತಿಕೆಯ ಸಂಕೇತವಾಗಿದೆ. ವಿವಿಧ ಧರ್ಮದ ಗ್ರಂಥಗಳು ನಮಗೆ ಶಾಂತಿ ಸೌಹಾರ್ದತೆ ಸಹೋದರತೆ ಅರಿವು ಮೂಡಿಸತ್ತವೆ  ಎಂದರು. ಬಾಲಯೇಸುವಿನ ದೇವಾಲಯದ ಮಠಾಧಿಪತಿಗಾದ ಫಾದರ್ ಡೆನ್ಜಿಲ್ ವೇಗಸ್ ಮಾತನಾಡಿ ಪ್ರಪಂಚದ  ಪ್ರತಿಯೊಂದು ಧರ್ಮವೂ ತನ್ನದೇ ಆದ ವಿಶಿಷ್ಟ ಮೌಲ್ಯಗಳನ್ನು  ಈ ಸಮಾಜಕ್ಕೆ  ನೀಡುತ್ತದೆ. ಒಂದು ಧರ್ಮಕ್ಕಿಂತ ಇನ್ನೊಂದು ಧರ್ಮ ಶ್ರೇಷ್ಠವಲ್ಲ. ಅಂತಹ ಧರ್ಮ ಭೂಮಿಯ ಮೇಲೆ ಯಾವುದೂ ಇಲ್ಲ . ನಾವು ನಮ್ಮ ಧರ್ಮವನ್ನು ಹೊರತುಪಡಿಸಿ ಇನ್ನೊಂದು ಧರ್ಮದವರು ನಂಬುವ ನಂಬಿಕೆಗಳನ್ನು ಗೌರವಿಸಬೇಕು ಎಂದರು.                  

ಮಲ್ಲನಕೆರೆ ಮಠದ ಚನ್ನಬಸವ ಮಾಹಾಸ್ವಾಮಿಗಳು ಮಾತನಾಡಿ ಸರ್ವ ಧರ್ಮ ಸಮಭಾವ ಎನ್ನುವುದು ಒಂದು ಹಿಂದೂ ಧರ್ಮದಲ್ಲಿನ ಪ್ರಮುಖ ಪರಿಕಲ್ಪನೆಯಾಗಿದೆ.  ಧರ್ಮಗಳಿಗೆ ಸಮಾನ ಗೌರವ ಎನ್ನುವ ಅರ್ಥವನ್ನು ನೀಡುತ್ತದೆ. ಇದರಿಂದ ಎಲ್ಲಾ ಧರ್ಮವೂ ಒಂದೇ ಎಂಬುದನ್ನು ತಿಳಿಸುತ್ತದೆ. ಏಕತೆಯಿಂದ ಬಾಳಬೇಕು  ಸತ್ಯದ ಮಾರ್ಗದಲ್ಲಿ ನಡೆಯಬೇಕೆನ್ನುವ ನಂಬಿಕೆಯನ್ನು ಸಹ ಹೇಳುತ್ತದೆ ಎಂದರು. ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಹಿರಿ ಶಾಂತವೀರ ಮಹಾಸ್ವಾಮಿಗಳು..ಬಸಾಪುರದ  ಮಂಜುನಾಥ ಹಾಲಸ್ವಾಮಿಗಳು. ಮಾತನಾಡಿದರು.  

ನಾಗತಿಬಸಾಪುರದ ದೊಡ್ಡ ಹಾಲಸ್ವಾಮಿಗಳು, ಚೌಕಿ  ಮಠದ ಗಾಡಿತಾತನವರು, ಡಾ.ರಾಕೇಶಯ್ಯ ರಾಮಾ ಸ್ವಾಮಿಗಳು. ಸಜ್ಯೋ ಹಜರತ್, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ,  ಸರ್ಕಾರಿ ಶಾಲೆ ನೌಕರರ ಸಂಘದ ಅಧ್ಯಕ್ಷ ಅಯ್ಯನಗೌಡ್ರ ಕೊಟ್ರುಗೌಡ. ಹಿರಿಯ ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ಮಾಜಿ ಪುರಸಭೆ ಅಧ್ಯಕ್ಷ ವಾರದ್ ಗೌಸ್ ಮೋಹಿದ್ದೀನ್, ಸರ್ವಧರ್ಮ ರಕ್ಷಣಾ ವೇದಿಕೆ ಅಧ್ಯಕ್ಷ ಬಿಚ್ಚುಗತ್ತಿ ಖಾಜಾ ಹುಸೇನ್, ಚಂದ್ರಶೇಖರ ದೊಡ್ಡಮನಿ, ಎಂ.ಪಿ.ಎಂ.ಅಶೋಕ, ಡಾ.ಫಣಿರಾಜ್, ಕಾಗದ ಗೌಸ್ ಮೋಹಿದ್ದೀನ್, ಉಳಿಗದ ಹನುಮಂತಪ್ಪ, ಕರ್ಜಗಿ ಹೊನ್ನಪ್ಪ, ಚಾಂದ್ ಸಾಬ್, ಕಡ್ಲಿ ಗೌಸ್ ಸಾಬ್, ಬಾಣದ ಇರ್ಫಾನ್, ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಇತರರು ಇದ್ದರು. 


ಸುದ್ದಿ ಓದಿ