ಶಿಗ್ಗಾವ್

ನಮ್ಮ ಕಾಂಗ್ರೇಸ ಅಭ್ಯರ್ಥಿಗಳು ಯೋಗ್ಯರು: ಯಾಸೀರ ಅಹ್ಮದಖಾನ ಪಠಾಣ

ನಮ್ಮ ಕಾಂಗ್ರೇಸ ಅಭ್ಯರ್ಥಿಗಳು ಯೋಗ್ಯರು: ಯಾಸೀರ ಅಹ್ಮದಖಾನ ಪಠಾಣ

ಶಿಗ್ಗಾವಿ 27 : ಕ್ಷೇತ್ರದ 18 ಜನ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳು ಯೋಗ್ಯರು ಆದರೆ ಯೋಗಾ ಯೋಗ ನನಗೆ ಕೂಡಿ ಬಂದಿದೆ. ಎಲ್ಲರೂ ನನಗೆ ಬೆಂಬಲ ವ್ಯಕ್ತಪಡಿಸುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯಾಸೀರ ಅಹ್ಮದಖಾನ ಪಠಾಣ ಹೇಳಿದರ. ತಾಲೂಕಿನ ಬಸನಾಳ, ಪಾಣಿಗಟ್ಟಿ, ಬೆಳವಲಕೊಪ್ಪ, ಸುರಪಗಟ್ಟಿ, ಕೆಂಗಾಪೂರ, ಬನ್ನಿಕೊಪ್ಪ, ಗಂಜೀಗಟ್ಟಿ, ಮುಗಳಿ, ಚಿಕ್ಕಮಣಕಟ್ಟಿ, ಬೆಳಗಲಿ ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಮಾಡಿದ್ದಾರೆ ಎನ್ನುತ್ತಾರೆ ಸಾರ್ವಜನಿಕರೆಲ್ಲರೂ ಎಲ್ಲ ಗ್ರಾಮಗಳಿಗೆ ಬೇಟಿ ನೀಡಿರಿ ಅವಾಗ ನಿಮಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗೊತ್ತಾಗುತ್ತದೆ. ಕ್ಷೇತ್ರದ ಅಭಿವೃದ್ಧಿ ಬರಿ ಕಾಗದ ಪತ್ರದಲ್ಲಿ ಆಗಿದೆ ಸಾವಿರಾರು ಕೋಟಿ ಹಣ ವ್ಯಯವಾಗಿದೆ ಆದರೆ ಈ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ ಎಂದರು.    

5 ಗ್ಯಾರಂಟಿಗಳು ಏನು ಕೆಲಸ ಮಾಡಲ್ಲ ಎಂದು ಭಾಜಪ ಅಭ್ಯರ್ಥಿ ಭರತ ಬೊಮ್ಮಾಯಿ ಹೇಳುತ್ತಿದ್ದಾರೆ ಆದರೆ ಅವರು ಕುಟುಂಬ ರಾಜಕಾರಣ ಅಂದರೆ ಅಜ್ಜ, ತಂದೆ, ಮಗ ಇದು ಕ್ಷೇತ್ರದ ಗ್ಯಾರಂಟಿನಾ ಅಥವಾ ಕ್ಷೇತ್ರದ ಭಾಜಪ ಕಾರ್ಯಕರ್ತರಿಗೆ ಮೋಸ ಮಾಡಿದರಲ್ಲ ಅದು ಗ್ಯಾರಂಟಿನಾ ಎಂದು ಮಾರ್ಮಿಕವಾಗಿ ಹೇಳಿದರು.   

ಈ ಸಂದರ್ಭದಲ್ಲಿ ಮುಖಂಡರಾದ ವಿನೋದ ಅಸೂಟಿ, ಗುಡ್ಡಪ್ಪ ಜಲದಿ, ಎಸ್‌.ಎಫ್‌.ಮಣಕಟ್ಟಿ, ಶ್ರೀಕಾಂತ ಪೂಜಾರ, ಮಹಾಂತೇಶ ಸಾಲಿ, ಬಸವರಾಜ ಜೇಕಿನಕಟ್ಟಿ, ಯಲ್ಲಪ್ಪ ಹಾದಿಮನಿ, ಸುಲೇಮಾನ ಖಾಜೇಖಾನವರ, ಸಾಧಿಕ ಮಲ್ಲೂರ, ಬಸವರಾಜ ಕಟ್ಟಿಮನಿ, ಸೇರಿದಂತೆ ಗ್ರಾಮಸ್ಥರು ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ