ಬೈಲಹೊಂಗಲ

ಗ್ರಾಹಕರ ವಿಶ್ವಾಸಾರ್ಹ ಉಳಿಸಿ ಸಂಸ್ಥೆಗಳು ಉನ್ನತೀಕರಣವಾಗಬೇಕು : ಕೌಜಲಗಿ

ಗ್ರಾಹಕರ ವಿಶ್ವಾಸಾರ್ಹ ಉಳಿಸಿ ಸಂಸ್ಥೆಗಳು ಉನ್ನತೀಕರಣವಾಗಬೇಕು : ಕೌಜಲಗಿ

ಸಂಪಗಾಂವ ಅರ್ಬನ್ ಬ್ಯಾಂಕಿನ ಬೆಳ್ಳಿ ಮಹೋತ್ಸವದಲ್ಲಿ ಹೇಳಿಕೆ 

ಬೈಲಹೊಂಗಲ 21: ಗ್ರಾಹಕರ ವಿಶ್ವಾಸಾರ್ಹ ಉಳಿಸಿಕೊಂಡು ಸಹಕಾರ ಸಂಸ್ಥೆಗಳು ಉನ್ನತೀಕರಣಗೊಳ್ಳಬೇಕಾಗಿರುವದು ಅತ್ಯವಶ್ಯವಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.  

ಅವರು ತಾಲೂಕಿನ ಸಂಪಗಾಂವ ಗ್ರಾಮದ ದಿ. ಸಂಪಗಾಂವ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಶನಿವಾರ ನಡೆದ 25 ನೇ ಬೆಳ್ಳಿ ಮಹೋತ್ಸವ ಆಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ಬಲ ನೀಡುವ ಉದ್ದೇಶದಿಂದ ಚಿಕ್ಕ ಹಿಡುವಳಿಯಿಂದ ಪ್ರಾರಂಭವಾದ ಸಂಪಗಾಂವ ಕೋ ಆಪ್ ಸೊಸೈಟಿಯು ಪ್ರಸ್ತುತ ಬೆಳ್ಳಿ ಮಹೋತ್ಸವ ಕಾಲಘಟಕ್ಕೆ ತಲುಪಿ ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಿರುವ ಕಾರ್ಯ ಹೆಮ್ಮೆಯಾಗಿದ್ದು ಶತಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಲಿ ಎಂದರು.  

ಮುಖ್ಯ ಅಥಿತಿಗಳಾದ ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಗ್ರಾಹಕರ ಹಿತ ಕಾಪಾಡಿಕೊಂಡು ಸಹಕಾರ ಸಂಸ್ಥೆಗಳು ಅದರ ತತ್ವದಡಿಯಲ್ಲಿ ಬೆಳೆಯಬೇಕಾದ ಅವಶ್ಯಕತೆ ಇದ್ದು ಗ್ರಾಮಾಭಿವೃದ್ದಿಯ ಭಾಗವಾಗಿ ಕಾರ್ಯನಿರ್ವಹಿಸಿದರೆ ಜನರು ನೆಮ್ಮದಿಯಿಂದ ಬದುಕಬಹುದಾಗಿದೆ ಎಂದರು.  

ಕಠಾಪೂರಿಮಠದ ಚನ್ನವೀರ ಸ್ವಾಮೀಜಿ, ಬೈಲಹೊಂಗಲದ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಆಡಳಿತ ಮಂಡಳಿಯ ನಡುವೆ ಸಮನ್ವಯತೆ ಸಾಧಿಸಿದಾಗ ಮಾತ್ರ ಇಂತಹ ಸಂಭ್ರಮಗಳು ಸಮಾಜದಲ್ಲಿ ಸಾಕ್ಷಿಯಾಗಲಿದ್ದು ಭವಿಷ್ಯದಲ್ಲಿ ಸಂಸ್ಥೆಯು ಹೆಮ್ಮರವಾಗಿ ಬೆಳೆದು ಮಾದರಿಯಾಗಲಿ ಎಂದು ಹಾರೈಸಿದರು. 

ಆರ್‌ಇಎಸ್ ಹೈಸ್ಕೂಲ್ ಅಧ್ಯಕ್ಷ ಶಂಕರೆಪ್ಪ ಶಿದ್ನಾಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಅವಧೂತ ಪಾದುಕಾ ವೇದ ಶ್ರೀ ಸತ್ಸಂಗ ಕೇಂದ್ರದ ಅಜೀತ ಜಿ, ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಬೆಳಗಾವಿಯ ಸರ್ವೋಕಂಟ್ರೋಲ್ಸ್‌ ಏರೋಸ್ಫೇಸ್ ಇಂಡಿಯಾ ಪ್ರೈ.ಲಿ. ಎಂಡಿ ದೀಪಕ ದಡೋತಿ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಶ್ಯಾಯಿನ ಅಖ್ತರ, ಬೆಳಗಾವಿಯ ಮಹಾಂತ ಇಂಡಸ್ಟ್ರೀಜ್‌ನ ಎಂಡಿ ಅಜಿತ ಪಾಟೀಲ, ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ಹಲ್ಕಿ, ಎಲುಬು ಕೀಲು ತಜ್ಞ ಡಾ.ಬಿ.ಬಿ.ಪುಟ್ಟಿ, ಹುಬ್ಬಳ್ಳಿಯ ಚೇತನ ಕಾಲೇಜು ಅಧ್ಯಕ್ಷ ಗುರುಶಾಂತ ವಳಸಂಗ, ಬೆಂಗಳೂರಿನ ಬಿಎಸ್‌ಎನ್‌ಎಲ್ ನಿವೃತ ಡಿವಿಜನಲ್ ಇಂಜನೀಯರ ದುಂಡಪ್ಪ ವಕ್ಕುಂದ, ನಿವೃತ ವೈಧ್ಯಾಧಿಕಾರಿ ಡಾ. ಬಿ.ಬಿ.ನಾಯ್ಕ, ಬೆಳಗಾವಿಯ ಕಾರ್ಯನಿರ್ವಾಹಕಾಧಿಕಾರಿ ಶಿವಶಂಕರ ಮಮದಾಪೂರ ಬೆಳಗಾವಿಯ ಎಸ್‌ಎಸ್ ಪುಡ್ ಪ್ರೈ.ಲಿ.ನ ಎಂಡಿ ಶಶಿಕಾಂತ ಶಿದ್ನಾಳ, ಬೆಳಗಾವಿಯ ಚಾರ್ಟೆಡ್ ಅಕೌಂಟೆಂಟ ಸಂಜಯ ಮುದ್ನೂರ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ಆಡಳಿತ ಮಂಡಳಿಯ ಸರ್ವ ಸದಸ್ಯರು, ಗಣ್ಯರು, ಸಂಸ್ಥೆಯ ಸಿಬ್ಬಂದಿ ವರ್ಗ, ಶೇರುದಾರರು, ಗ್ರಾಹಕರು ಉಪಸ್ಥಿತರಿದ್ದರು.  

ಮಕ್ಕಳಿಂದ ಪ್ರಾರ್ಥನೆ ಜರುಗಿತು. ಸಂಸ್ಥೆಯ ಅಧ್ಯಕ್ಷ ಆರ್‌.ಎಸ್‌. ಮಮದಾಪೂರ ಸ್ವಾಗತಿಸಿ ವರದಿ ವಾಚನ ಮಂಡಿಸಿದರು. ಶೋಭಾ ಛಬ್ಬಿ ನಿರೂಪಿಸಿದರು. ರಾಜಣ್ಣ ಮಮದಾಪೂರ ವಂದಿಸಿದರು. ಸಂಸ್ಥೆಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಬೆಳ್ಳಿ ಸಂಭ್ರಮದ ಅಂಗವಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಯಿತು. 


ಸುದ್ದಿ ಓದಿ