ಶಿಕ್ಷಣ ಇಲಾಖೆಯ ಹೊಸ ನಿಯಮ ಜಾರಿ ವಿರೋಧ: ಪ್ರತಿಭಟನೆಯ ಎಚ್ಚರಿಕೆ
ಘಟಪ್ರಭಾ 22: ಶಿಕ್ಷಣ ಇಲಾಖೆಯ ಹೊಸ ನಿಯಮ ಜಾರಿ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಗೋಕಾಕ ತಾಲೂಕಾ ಘಟಕದ ವತಿಯಿಂದ ಸೋಮವಾರದಂದು ಸಂಘಟನೆಯ ಕಾರ್ಯಾಲಯದಲ್ಲಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು ಮಾತನಾಡಿ ಶಾಲಾ ಮಕ್ಕಳಿಗೆ ಆಧಾರ ಕಾರ್ಡ ತಿದ್ದುಪಡಿ ಮಾಡಿಸುವಂತೆ ಶಿಕ್ಷಕರು ಸೂಚಿಸಿದ ಪರಿಣಾಮ ಶಾಲೆಗೆ ಹೋಗಬೇಕಾದ ಮಕ್ಕಳು ಆಧಾರ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಯಾ ಶಾಲೆಗಳಲ್ಲಿ ಆಧಾರ ಲಿಂಕ್ ತೆಗೆದುಕೊಳ್ಳುವ ವ್ಯವಸ್ಥೆ ಮಾಡಬೇಕೆಂದು 2 ದಿನಗಳ ಗಡುವು ನೀಡಲಾಯಿತು. ಒಂದು ವೇಳೆ 2ದಿನದಲ್ಲಿ ಬೇಡಿಕೆ ಈಡೇರಿಸದಿದ್ದರೆ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಯ ಒಕ್ಕೂಟದ ಅಧ್ಯಕ್ಷರಾದ ಕೆಂಪಣ್ಣ ಚೌಕಶಿ, ಕೊಟ್ರೇಶ ಪಟ್ಟಣಶೆಟ್ಟಿ, ಕೆಂಪಯ್ಯ ಪುರಾಣಿಕ, ಅಪ್ಪಾಸಾಬ ಮುಲ್ಲಾ, ರಹಮಾನ್ ಮೊಕಾಶಿ, ಶೆಟ್ಟೆಪ್ಪ ಗಾಡಿವಡ್ಡರ, ಪ್ರಶಾಂತ ಅರಳಿಕಟ್ಟಿ, ಮಲ್ಲಿಕಜಾನ ತಲವಾರ, ಬಸವರಾಜ ಪಂಜಾನಟ್ಟಿ, ಮಾರುತಿ ಚೌಕಶಿ, ಶಶಿ ಚೌಕಶಿ, ಪವನ ಮಹಾಲಿಂಗಪೂರ, ಅಜೀಜ ಮೊಕಾಶಿ ಹಾಗೂ ಇನ್ನೂ ಅನೇಕ ಪದಾಧಿಕಾರಿಗಳು ಇದ್ದರು.