ಬ್ಯಾಡ್ಗಿ

ಕಲಾಭವನ ಖಾಸಗಿಯವರಿಗೆ ಬಾಡಿಗೆ ನೀಡುವುದಕ್ಕೆ ವಿರೋಧ

ಕಲಾಭವನ ಖಾಸಗಿಯವರಿಗೆ ಬಾಡಿಗೆ ನೀಡುವುದಕ್ಕೆ ವಿರೋಧ

ಬ್ಯಾಡಗಿ 12: ಸಾಂಸ್ಕೃತಿಕ ಹಾಗೂ ಕಲೆಗೆ ಸಂಬಂಧಿಸಿದ ಚಟುವಟಿಕೆಗೆ ಮಾತ್ರ ಬಳಕೆಗೆ ನಿರ್ಮಿಸಲಾಗಿದ್ದ ಕಲಾಭವನವನ್ನು ಖಾಸಗಿಯವರಿಗೆ ಬಾಡಿಗೆ ನೀಡಿದ್ದನ್ನು ಭ್ರಷ್ಟಾಚಾರ ವಿರೋಧಿ ಜನಾಂದೋಲನ ನ್ಯಾಸ ಘಟಕ ತೀವ್ರವಾಗಿ ಖಂಡಿಸಿದೆ. 

ಈ ಕುರಿತು ಪುರಸಭಾ ಮುಖ್ಯಾಧಿಕಾರಿ ವಿ. ಎಮ್. ಪೂಜಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಘಟಕದ ರಾಜ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ, ಪಟ್ಟಣದ ಗಾಂಧಿ ನಗರದಲ್ಲಿ ನಿರ್ಮಿಸಿರುವ ಕಲಾಭವನವನ್ನು ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸದೇ ಪುರಸಭೆಯ ವತಿಯಿಂದ ಅದನ್ನು ಖಾಸಗಿಯವರಿಗೆ ಬಾಡಿಗೆ ನೀಡಲಾಗಿದೆ. ಇದರಿಂದ ಕಲಾವಿದರಿಗೆ ತಮ್ಮ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ಇಲ್ಲದೆ ದುಬಾರಿ ಬಾಡಿಗೆ ನೀಡಿ ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ಕಲಾವಿದರಿಗೆ ಅವರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಕೆಯಾಗುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. 

ಘಟಕದ ಜಿಲ್ಲಾ ಸಂಚಾಲಕಿ ಫರೀದಾ ನದ್ದಿಮುಲ್ಲಾ, ಮಾದೇವಕ್ಕ ಕಾರಿ, ಸಂಗೀತ ಕಲಾವಿದೆ ಸುಶೀಲಮ್ಮ ಗೂರಮ್ಮನವರ, ದರ್ಶನ ಹಾವನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಓದಿ