ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
Operation by Sadalga Police: Interstate bike thieves arrested, 5 two-wheelers seized.
ಬೆಳಗಾವಿ : ಜಿಲ್ಲೆಯ ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಅಂತರರಾಜ್ಯ ಬೈಕ್ ಕಳ್ಳರನ್ನು ಬಂಧಿಸಿ, ಅವರಿಂದ 2 ಲಕ್ಷ ಮೌಲ್ಯದ ಒಟ್ಟು ಐದು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 22ರಂದು ಸಿಎಚ್‌ಸಿ-1189 ಯು.ಎಂ. ಕಾಂಬಳೆ ನೀಡಿದ ದೂರಿನ ಮೇರೆಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 184/2026ರಡಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 303(2) ಹಾಗೂ 317(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ತನಿಖೆಯ ವೇಳೆ ಆರೋಪಿಗಳಾದ ಶುಭಂ ರಾಜು ಮನ್ನೋಳೆ (ಶಮನೇವಾಡಿ, ಚಿಕ್ಕೋಡಿ ತಾಲ್ಲೂಕು) ಹಾಗೂ ಆಕಾಶ ಪ್ರಕಾಶ ವಡೆರ (ಅಳತೆ, ಹಾತಕಣಂಗಲೆ ತಾಲ್ಲೂಕು, ಕೊಲ್ಲಾಪುರ ಜಿಲ್ಲೆ) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2 ಲಕ್ಷ ಮೌಲ್ಯದ ಐದು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆ ಡಿಎಸ್ ಪಿ ಗೋಪಾಲಕೃಷ್ಣ ಗೌಡರ ಹಾಗೂ ಸಿಪಿಐ ವಿಶ್ವನಾಥ ಚೌಗುಲೆ ಅವರ ಮಾರ್ಗದರ್ಶನದಲ್ಲಿ ಮಾರ್ಗದರ್ಶನದಲ್ಲಿ ಶಿವುಕುಮಾರ ಬಿರಾದಾರ, ಪಿಎಸ್ಐ, ಹಾಗೂ ಪ್ರೋ ಪಿಎಸ್ಐ ಐ.ಕೆ.ಗೌಡನವರ, ವಾಯ್.ಎಸ್.ಕುಳಲಿ ಸದಲಗಾ ಪೊಲೀಸ್ ಠಾಣಿಯ ಸಿಬ್ಬಂದಿ ಜನರಾದ ಎಸ್.ಎನ್.ಬಡೋದೆ ಸಿಎಚ್‌ಸಿ- 2777, ಯು.ಎಮ್.ಕಾಬಳೆ ಸಿಎಚ್- 1189, ವಿ.ಕೆ.ಕುಂಬಾರ ಸಿಎಚ್‌ಸಿ- 2318, ವಿ.ಜಿ.ಹಳಬರ ಸಿಪಿಸಿ- 3298, ಸಿ.ಎಲ್.ಪೂಜೇರಿ ಸಿಪಿಸಿ- 3570, ಐ.ವಿ.ಘಂಟಿ ಸಿಪಿಸಿ-3661, ಬಿ.ಕೆ.ಗೊಲಬಾವಿ ಸಿಪಿಸಿ- 3289, ಎಸ್.ಎಚ್.ಕುಂಬಾರ ಸಿಪಿಸಿ- 3223 ತನಿಖಾ ಸಹಾಯಕರಾದ ಎಸ್.ಎಲ್.ಬಾಡಕರ ಎಎಸ್‌ಐ, ಆರ್.ಎಮ್.ಮುಜಾವರ ಸಿಎಚ್‌ಸಿ- 2551, ಕೆ.ವಿ.ಚೆಳ್ಳಕೇರಿ ಸಿಪಿಸಿ- 1364, ಕೆ.ಎಸ್.ಮಧೂರ ಸಿಪಿಸಿ- 3674 ಹಾಗೂ ಬೆಳಗಾವಿ ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ ಇವರು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.
ಈ ಪ್ರಕರಣವನ್ನು ಶೀಘ್ರ ಭೇದಿಸಿ ಆರೋಪಿಗಳನ್ನು ಬಂಧಿಸಿ ಕಳುವಾದ ವಾಹನಗಳನ್ನು ವಶಪಡಿಸಿಕೊಂಡ ಪೊಲೀಸ್ ತಂಡದ ಕಾರ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಐಪಿಎಸ್ ಅವರು ಶ್ಲಾಘಿಸಿದ್ದಾರೆ.
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ 