ಮಿಣಜಗಿ ಗ್ರಾಮದಲ್ಲಿ ಗೋದಾಮು ಉದ್ಘಾಟನೆ
ತಾಳಿಕೋಟೆ18: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಆರಂಭದಲ್ಲಿ ತಮ್ಮ ಬ್ಯಾಂಕ್ ಕಟ್ಟಡ ನಿರ್ಮಾಣ ಮಾಡುವುದು ಸ್ವಾಭಾವಿಕವಾಗಿದೆ. ಆದರೆ 24.38 ಲಕ್ಷ ಅನುದಾನದಲ್ಲಿ ರೈತರಿಗೆ ಅನುಕೂಲವಾಗುವ ಗೋದಾಮು ನಿರ್ಮಾಣ ಮಾಡಿರುವುದು ಇದೇ ಮೊದಲು. ಇಂತಹ ಉತ್ಸಾಹಿಗಳಿಗೆ ಸ್ವಂತ ಕಟ್ದಟಡ ನಿರ್ಮಾಣಕ್ಕೆ ವೈಯಕ್ತಿಕವಾಗಿ ಎರಡು ಲಕ್ಷ ನೀಡುವುದಲ್ಲದೇ ಅಪೆಕ್ಸ ಬ್ಯಾಂಕಿನಿಂದ ದೊರೆವ ಸಕಲ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಬಸವನ ಬಾಗೇವಾಡಿ ಮತಕ್ಷೇತ್ರದ ಶಾಸಕ ಮತ್ತು ವಿಜಯಪುರ ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.
ಅವರು ತಾಲ್ಲೂಕಿನ ಮಿಣಜಗಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ನೂತನ ಗೋದಾಮು(ಗೊಡಾವನ) ಉದ್ಘಾಟನೆ ನೆರವೇರಿಸಿ ಮಾತನಾಡಿದರು.
17-18 ಮತ್ತು 18-19ನೆ ಸಾಲಿನಲ್ಲಿನ ಒಟ್ಟು ಎರಡು 80 ಲಕ್ಷ ಸಾಲಮನ್ನಾ ಮಾಡಲಾಗಿದೆ. ಬೆಳೆಸಾಲ ಒಂದು ಕೋಟಿ ಹಣ, ಪಂಪಸೆಟ್ ಸಾಲ 33 ಲಕ್ಷ, ಹಾಗೂ ಬಿನ್ ಶೇತ್ಕಿ ಸಾಲವಾಗಿ 1.80ಕೋಟಿ ಹಣ ನೀಡಿರುವುದು ಮಿಣಜಗಿ ಕೃಷಿಪತ್ತಿನ ಉತ್ತಮ ಆಡಳಿತದ ಸಂಕೇತವಾಗಿದೆ. ಇದಕ್ಕೆ ಕಾರಣವಾದ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.
ಸಾನ್ನಿಧ್ಯವನ್ನು ಇಂಗಳೇಶ್ವರ ವಚನಶಿಲಾ ಮಮಟಪದ ಚನ್ನಬಸವಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಮಿಣಜಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಸಿ.ಎಸ್.ಬಿರಾದಾರ ವಹಿಸಿದ್ದರು. ವೇದಿಕೆಯಲ್ಲಿ ನಾಲತವಾಡ ಶರಣ ವೀರೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎಸ್.ಪಾಟೀಲ, ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಬಿರಾದಾರ, ಪ್ರಮುಖರಾದ ಜಿ.ಎಸ್.ಕಶೆಟ್ಟಿ, ಎಚ್.ಬಿ.ಬಾಗೇವಾಡಿ, ನಿಂಗನಗೌಡ .ಪಾಟೀಲ ಬಳಗಾನೂರ, ವಿಡಿಸಿಸಿ ಬ್ಯಾಂಕ್ ಡಿಜಿಎಂ ಆರ್.ಎಂ.ಪಾಟೀಲ. ಆರ್.ಎಂ.ಬಣಗಾರ, ಶಶಿಧರ ಬೆಣ್ಣೂರ, ವೈ.ಬಿ.ಪಾಟೀಲ, ಪಿ.ಬಿ.ಪಾಟೀಲ, ಡಿ.ಬಿ.ಯಾಳವಾರ, ಎಸ್.ಬಿ.ಬಿರಾದಾರ, ಬಿ.ಎಸ್.ಯರನಾಳ, ಬಿ.ಎಸ್.ಪಾಟೀಲ, ಡಿ.ಕೆ.ಪಾಟೀಲ ಇದ್ದರು. ಪಿಕೆಪಿಎಸ್ ವ್ಯವಸ್ಥಾಪಕ ಜಿ.ಬಿ.ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹೇಬಗೌಡ ಬಿರಾದಾರ ನಿರ್ವಹಿಸಿದರು.