ಶಿಗ್ಗಾವ್

ಅಮೃತ ಚಹಾ ಅಂಗಡಿಯನ್ನು ಪ್ರಾರಂಭ

ಅಮೃತ ಚಹಾ ಅಂಗಡಿಯನ್ನು ಪ್ರಾರಂಭ


ಲೋಕದರ್ಶನ ವರದಿ 

ಶಿಗ್ಗಾವಿ 01: ಪಟ್ಟಣದ ಸಿದ್ದಲಿಂಗೇಶ ಎಂ ಪಾಟೀಲ ಮಳಿಗೆಯಲ್ಲಿ ನೂತನವಾದ ನಿಸರ್ಗ ಅಮೃತ ಚಹಾ ಅಂಗಡಿಯನ್ನು ಪ್ರಾರಂಭಿಸಲಾಯಿತು. ರೈತಸೇನಾ ಜಿಲ್ಲಾಧ್ಯಕ್ಷ ವರುಣಗೌಡ್ರ ಎಂ ಪಾಟೀಲ ಮಾತನಾಡಿ ಆರೋಗ್ಯ ದೃಷ್ಟಿಯಿಂದ ಎಲ್ಲರೂ ದಿನಕ್ಕೆ ಎರಡು ಬಾರಿ ನಿಸರ್ಗ ಅಮೃತ ಚಹಾ ಸೇವಿಸಿದರೆ ಒಳ್ಳೆಯದು ಎಂದು ಅಬಿಪ್ರಾಯ ವ್ಯಕ್ತಪಡಿಸಿದರು.  

ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶೀಧರ ಯಲಿಗಾರ ಮಾತನಾಡಿ ಇಂದಿನ ದಿನಮಾನಗಳಲ್ಲಿ ರಾಸಾಯನಿಕ ಮುಕ್ತ ಸಕ್ಕರೆ, ಚಹಾಪುಡಿ ಇರುವ ಚಹಾ ಪಾನೀಯವನ್ನು ಸೇವಿಸದರೆ ಆರೋಗ್ಯಕ್ಕೆ ಒಳ್ಳೆಯದು ಎಂದರು.  

ಕೆ.ಎಂ.ಎಫ್ ನಿರ್ದೇಶಕ ಬಸವರಾಜ ಮೇಗಿಲಮನಿ ಮಾತನಾಡಿ ನಮ್ಮ ಕೆ.ಎಂ.ಎಫ್ ಹಾಲನ್ನು ಸ್ವೀಕರಿಸಿ ಚಹಾ ಮಾಡಿದರೇ ನಿಸರ್ಗ ಅಮೃತ ಚಹಾ ಯಶಸ್ವಿದಡದಲ್ಲಿ ಸಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ರೈತದ್ವನಿ ಸಂಪಾದಕ ಬಸವರಾಜ ಕುರಗೋಡಿ, ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದು ಇಂದು ಉಚಿತವಾಗಿ ಎಲ್ಲರೂ ಚಹಾ ಸವಿದರು. 


ಸುದ್ದಿ ಓದಿ