ಬ್ಯಾಡ್ಗಿ

ಗುರುವಿನಿಂದ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ

ಗುರುವಿನಿಂದ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ

ಬ್ಯಾಡಗಿ 03 : ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವಂತೆ ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಗುರುವಿನಿಂದ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ.  ಎಂದು ನಿವೃತ್ತ ಶಿಕ್ಷಕ ಎಸ್‌.ಎಂ.ಪಾಟೀಲ ಹೇಳಿದರು.

ತಾಲೂಕಿನ ಮೋಟೆಬೆನ್ನೂರಿನ ಮಹಾದೇವ ಮೈಲಾರ ಫ್ರೌಢ ಶಾಲೆಯಲ್ಲಿ 2006-2007 ರ ಎಸ್ಸೆಸ್ಸೆಲ್ಸಿ ಹಳೆಯ ವಿದ್ಯಾರ್ಥಿಗಳ ಗುರುವಂದನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾನವ ಜೀವನ ಸಾರ್ಥಕವಾಗಬೇಕಾದರೆ ಗುರುವಿನ ಸಾಕ್ಷಾತ್ಕಾರವಾಗಬೇಕಾಗುತ್ತದೆ. ಇಂತಹ ಗುರುಗಳನ್ನು ನೆನೆಯುವಂತಹ ಕಾರ್ಯ ನಡೆಯಬೇಕೆಂದರು.ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಮುಖ್ಯೋಪಾಧ್ಯಯಲಂಕ್ಯೆಪ್ಪ ಮಾತನಾಡಿ ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರಗೆ ಹಾಕಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವೂ ಇದನ್ನೇ ಹೇಳುತ್ತದೆ. ಅಂಧಕಾರವನ್ನು ದೂರವಾಗಿಸುವವನು. ಪ್ರತಿಯೊಬ್ಬರ ಜೀವನದ ಏಳು-ಬೀಳಿಗೆ ಗುರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣನಾಗುತ್ತಾನೆಂದರು.

ಸಭೆಯಲ್ಲಿ ಶಿಕ್ಷಕರಾದ ಕೆ ಸಿ ತಿಪ್ಪೇಸ್ವಾಮಿ,ಡಿ ಜಿ ವೀರೇಶ,ಡಿಸಿಚ್ ಗೊಂಚಿಗಾರ,ವಿ ಸಿ ಹಾವೇರಿಮಠ, ಶಿಕ್ಷಕಿ ಎಮ್ ಎಸ್ ಹಿರೇಮಠ, ಐ ಜಿ ಬ್ಯಾಡಗಿ,  ವಿದ್ಯಾರ್ಥಿಗಳಾದ ಚಂದ್ರಶೇಖರ ಆನ್ವೇರಿಪವನ ನಾಯಕ,  ಶಶಿಕಲಾ ಗೊಲ್ಲರ,   ಶೀಲಾ ಗುರುಲಿಂಗಪ್ಪಗೌಡ್ರ, ದೀಲಿಪ್ ಗುತ್ತಲ, ಸಾವಿತ್ರಾ ಬೇವಿನಮರದ, ಬಸವರಾಜ ಕೋಳೂರ,ಶ್ರೀಧರ ಜಿಂಗಾಡೆ, ಮಂಜುನಾಥ ಆನ್ವೇರಿ, ಸಾಕಮ್ಮ ಕುರಿಯವರ, ದೀಪಾ ಪೀಠದ, ಚೋಳಪ್ಪ ಗೊರವರ, ಮಾಲತೇಶ ಪಾಟೀಲ, ಗೌರತ್ರಿ ಪವಾರ, ಹೈದರಾಲಿ ಮಕರಿ, ಸೌಮ್ಯ ನಾಗನೂರ, ನಾಗರಾಜ ರೊಡ್ಡನವರ,  ಗೀತಾ ಮೇಗಳಮನಿ,ರೇಖಾ ಮತ್ತೂರ, ಮಾಲತೇಶ ಶಿಡೇನೂರ, ಡಾ ನಾಗರಾಜ ನಾಯ್ಕ, ಪ್ರಕಾಶ್ ಮೋಟೆಬೆನ್ನೂರು, ಶ್ರುತಿ ಶಿಂಧೆ, ಮಂಜುಳಾ ಹೊನ್ನಕೇರಿ,  ಸಾವಿತ್ರಾ ಗುಂಡೇನಹಳ್ಳಿ, ಪ್ರಕಾಶ್ ಹಾವನೂರು, ರೇವಣಸಿದ್ದಪ್ಪ ಕಬ್ಬೂರ, ಶಿಲ್ಪಾ ವಿಜಯೇಂತಕರ್, ಸವಿತಾ ಶೀಲವಂತರ,ಇದ್ದರು. 


ಸುದ್ದಿ ಓದಿ