ಶಿಕ್ಷಣದಿಂದ ಮಾತ್ರ ಭವಿಷ್ಯದ ಬದುಕನ್ನು ಭದ್ರಪಡಿಸಲು ಸಾಧ್ಯ: ಬ್ಯಾಳಿ
ಲೋಕದರ್ಶನ ವರದಿ
ಯರಗಟ್ಟಿ 31: ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಸಾಧನೆ ಮಾಡಬೇಕಾದ ಅನಿರ್ವಾಯತೆ ಇದೆ. ಶಿಕ್ಷಣದಿಂದ ಮಾತ್ರ ನಮ್ಮ ಭವಿಷ್ಯದ ಬದುಕು ಭದ್ರಪಡಿಸಲು ಸಾಧ್ಯ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಅಭ್ಯಾಸ ಮಾಡುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆ ಸವಾಲಾಗಿ ಪರಿಣಮಿಸಿದ್ದು, ಇಂತಹ ಸವಾಲನ್ನು ಸುಲಭವಾಗಿ ಎದುರಿಸಲುಸ್ಮಾರ್ಟ್ ಕ್ಲಾಸ್ ಸಹಕಾರಿ ಎಂದು ಸವದತ್ತಿ ಕ್ಷೇತ್ರ ಸಮನ್ವಧಿಕಾರಿ ಬಿ. ಎನ್. ಬ್ಯಾಳಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಾಸ್ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ನಿರ್ಮಿಸಿರುವ ಸ್ಮಾರ್ಟ್ ಕ್ಲಾಸ್ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯವಿದ್ದು ಯಾವುದೇ ಕೊರತೆ ಅವರ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗದು. ಅದೇ ರೀತಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸಹ ಉತ್ತಮ ಅಂಕ ಪಡೆದು ಸಾಧನೆಯತ್ತ ದೃಢ ಹೆಜ್ಜೆ ಇಡಲು ಬಾಸ್ ಇಂಡಿಯಾ ಲಿಮಿಟೆಡ್ ನಿಮಗೆ ಈ ಸೌಲಭ್ಯ ಕಲ್ಪಿಸಿದೆ. ಪೂರ್ಣಪ್ರಮಾಣದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಶಿಕ್ಷಕರಾದ ಎ. ಕೆ. ಜಮಾದಾರ ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷೆಗಳ ಬಗ್ಗೆ ಆತಂಕ ಉಂಟಾಗುವುದು ಸಹಜ. ಆದರೆ ಶಿಕ್ಷಣ ಇಲಾಖೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಇಲಾಖೆ ಕೈ???ಂಡಿದೆ ಇದರ ಜೊತೆಗೆ ಬಾಸ್ಟಿಂಡಿಯಾ ಲಿಮಿಟೆಡ್ ನಿಮಗೆ ಸ್ಮಾಟ್ ಕ್ಲಾಸ್ ಹಾಗೂ ಕಂಪ್ಯೂಟರ್ ಕ್ಲಾಸ್ ನೀಡಿ ಮಕ್ಕಳ ಶಿಕ್ಷಣ ವತ್ತುನೀಡಿದೆ ಎಂದರು.
ಗಣಪತಿ ಮಹಾರಾಜರು, ರಾಕೇಶ ಕುಮಾರ ತ್ರಿಪಾಠಿ, ಪ್ರಕಾಶಗೌಡ ಪಾಟೀಲ, ಎಚ್. ಆರ್. ಪೆಟ್ಲೂರ, ಮನೋಹರ್ ಚೀಲದ, ಸಿ. ಜಿ. ಹಿರೇಮಠ, ಆಶಾ ಪರಿಟ, ವಸಂತ ಬಡಿಗೇರ, ಎ. ಎ. ಮಕ್ತುಮನವರ ಸೇರಿದಂತೆ ಶಾಲಾ ಶಿಕ್ಷಕ ಸಿಬ್ಬಂದಿಯವರು ಮತ್ತು ಮಕ್ಕಳು ಉಪಸ್ಥಿತರಿದ್ದರು.