ಯರಗಟ್ಟಿ

ಮಾನವ ಜೀವಿಗೆ ಮಾತ್ರ ಭಗವಂತನನ್ನು ನೆನೆಯಲು ಸಾಧ್ಯ: ಹಿರೇಮಠ

ಮಾನವ ಜೀವಿಗೆ ಮಾತ್ರ ಭಗವಂತನನ್ನು ನೆನೆಯಲು ಸಾಧ್ಯ: ಹಿರೇಮಠ

ಲೋಕದರ್ಶನ ವರದಿ 

ಯರಗಟ್ಟಿ 02: ಮನುಷ್ಯ ಜೀವನದಲ್ಲಿ ಭಗವಂತನನ್ನು ನೆನೆಯುವದರಿಂದ ಉತ್ತಮ ಬದುಕು ಕೊಂಡುಕೊಳ್ಳಲು ಸಾಧ್ಯ ಎಂದು ಬಸಲಿಂಗಯ್ಯ ಹಿರೇಮಠ ಹೇಳಿದರು. 

ಆಲದಕಟ್ಟಿ ಕೆ.ಎಮ್ ಗ್ರಾಮದಲ್ಲಿ ಶನಿವಾರ ಸಿದ್ರಾಮೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ನಡೆದ ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು. ಭಗವಂತನನ್ನು ನೆನೆಯುವದಕ್ಕಾಗಿಯೇ ಮನುಷ್ಯ ಜೀವನ ಬಂದಿದೆ. 84 ಲಕ್ಷ ಜೀವರಾಶಿಗಳಲ್ಲಿ ಮಾನವ ಜೀವಿಗೆ ಮಾತ್ರ ಭಗವಂತನನ್ನು ನೆನೆಯಲು ಸಾದ್ಯವಾಗಿದೆ ಎಂದರು. 

ಗ್ರಾಪಂ ಉಪಾಧ್ಯಕ್ಷ ಫಕೀರ​‍್ಪ ಸಣ್ಣಗೌಡ್ರ ಮಾತನಾಡಿ, ಪ್ರತಿಯೊಬ್ಬರು ಭಕ್ತಿಯಿಂದ ದೇವರ ಧ್ಯಾನ ಮಾಡುವದರಿಂದ ಮನುಷ್ಯನಿಗೆ ಬರುವ ಕಷ್ಟಗಳು ದೂರವಾಗಿ ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಹೇಳಿದರು. 

ಇದಕ್ಕೂ ಮುಂಚೆ ಮುಂಜಾನೆ ಸಿದ್ರಾಮೇಶ್ವರ ಗದ್ದುಗೆ ರುದ್ರಾಭಿಷೇಕ, ಕಳಸಾರೋಹಣ ಡೊಳ್ಳಿನ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರ ಆರತಿ ಯೊಂದಿಗೆ ಪಲ್ಲಕ್ಕಿ ಮಹೋತ್ಸವ ಜರುಗಿತು.   

ಗ್ರಾಪಂ ಅಧ್ಯಕ್ಷ ಜಾನವ್ವ ಆಡಿನ, ಅಶೋಕ ಚಿಕ್ಕೊಪ್ಪ, ಸುರೇಶ ಮುಗಳಿ, ಪ್ರೇಮಾ ಡಮ್ಮಣಗಿ, ಪ್ರಭಾವತಿ ಗುರನಗೌಡ್ರ, ಶೋಭಾ ಮಾದರ, ರಾಯಪ್ಪ ರಾಯನ್ನವರ, ಗುರುನಾಥ ಬೀರಾಜನವರ, ಸೋಮನಿಂಗಪ್ಪ ಪವಾಡೆಪ್ಪನವರ, ಶಿದ್ರಾಮ ಪಡೆಪ್ಪನವರ, ಪುಂಡಲೀಕ ಬೀರಾಜನವರ, ಸುರೇಶ ರಾಯನ್ನವರ, ಲಕ್ಷ್ಮಣ ಪಡೆಪ್ಪನವರ ಮತ್ತಿತರರು ಇದ್ದರು. 


ಸುದ್ದಿ ಓದಿ