ಕಾರವಾರ

ಕಾಲುವೆ ಕಾಮಗಾರಿ ಮಾಡಲು ಒಂದು ವಾರ ಗಡುವು

ಕಾಲುವೆ ಕಾಮಗಾರಿ ಮಾಡಲು ಒಂದು ವಾರ ಗಡುವು


ದಾಂಡೇಲಿ 12: ಲೆನಿನ್ ರಸ್ತೆಯಲ್ಲಿ ಕಾಲುವೆ ಮಾಡುವ ನೆಪದಲ್ಲಿ ಮನೆ ಮುಂದೆ ಮಣ್ಣು ಅಗೆದು ವಾರಗಟ್ಟಲೆ ಕಾಮಗಾರಿ ಮಾಡದೆ ಬಿಟ್ಟಿದ್ದ ಗುತ್ತಿಗೆದಾರನ ವಿರುದ್ಧ ಜನರು ನಗರಸಭೆಯ ಕಾಮಗಾರಿ ಪಡೆದ ಗುತ್ತಿಗೆದಾರ  ಹಾಗೂ ಎಂಜಿನಿಯರ್ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದರು.  

ಕಾಮಗಾರಿ ಮಾಡಲು ಮನೆಯ ಮುಂದೆ ಅಗೆದು ಹತ್ತು ದಿನವಾದರೂ ಕಾಮಗಾರಿ ಮುಂದುವರಿಸದೆ, ಕೆಲಸ ಸ್ಥಗಿತವಾದ ಬಗ್ಗೆ ಗುತ್ತಿಗೆದಾರರ ವಿರುದ್ಧ ಪೌರಾಯುಕ್ತರ ಬಳಿ  ದೂರು ಹೇಳಿದರು.ಲೆನಿನ್ ರಸ್ತೆಯಲ್ಲಿ ಕಾಲುವೆ ಕಾಮಗಾರಿಗಾಗಿ ಮನೆಯ ಎದುರು ಅಗೆದು ಹಾಕಿದ್ದು,  ವಯಸ್ಸಾದವರು ಮನೆ ದಾಟಿ ರಸ್ತೆಗೆ ಬರಲು  ಕಷ್ಟ ಪಡುತ್ತಿದ್ದಾರೆ . ಹಾಗೂ ವಾಹನಗಳನ್ನು  ಮನೆಯಿಂದ ರಸ್ತೆಗೆ ಇಳಿಸುವುದು ಕಷ್ಟವಾಗುತ್ತಿದೆ ಎಂದು ದೂರಿದರು. ಮಳೆಗಾಲ ಸಮೀಪಿಸಿದೆ. ತಕ್ಷಣ ಕಾಮಗಾರಿ ಆರಂಭಿಸಿ .ಇಲ್ಲವೆ ಅಗೆದದ್ದನ್ನು ಮುಚ್ಚಿ ಎಂದು ನೋವು ತೋಡಿಕೊಂಡರು. 

ಜನರ ಆಕ್ರೋಶಕ್ಕೆ ಮಣಿದ ನಗರಸಭೆ, ಗುತ್ತಿಗೆದಾರದಿಂದ ಒಂದು ವಾರದಲ್ಲಿ ಕೆಲಸ ಮಾಡಿಸುವ ಭರವಸೆ ನೀಡಿತು.   ಗುತ್ತಿಗೆದಾರ ಹಾಗೂ ನಗರಸಭೆಯ ಎಂಜಿನಿಯರಿಂಗ್ ವಿಭಾಗವನ್ನು  ಸೋಶಿಯಲ್ ಮೀಡಿಯಾದಲ್ಲಿ ಹಲವು ಹಿರಿಯರು  ತರಾಟೆಗೆ ತೆಗೆದುಕೊಂಡಿದ್ದರು.  ಜನರ ಟೀಕೆಗೆ ಬೆಚ್ಚಿಬಿದ್ದ ನಗರಸಭೆ ಅಧಿಕಾರಿಗಳು,  ವಾರದೊಳಗೆ ಕೆಲಸ ಮುಗಿಸುವ ಭರವಸೆ ನೀಡಿದ್ದು, ಜನ ನಿಟ್ಟುಸಿರು ಬಿಟ್ಟಿದ್ದಾರೆ. 


ಸುದ್ದಿ ಓದಿ