ವಿಮ್ಸ್ನಲ್ಲೊಂದು ಅಪರೂದ ಶಸ್ತ್ರಚಿಕಿತ್ಸೆ

ವಿಮ್ಸ್ನಲ್ಲೊಂದು ಅಪರೂದ ಶಸ್ತ್ರಚಿಕಿತ್ಸೆ

ಬಳ್ಳಾರಿ 28:ವಿಮ್ಸ್ ಆಸ್ಪತ್ರೆಯಲ್ಲಿ ಹಲವಾರು ಭಗೆಯ ಉಪಕರಣಗಳ ಔಷದಿಯ ಕೊರತೆಯ ಮದ್ಯೆ ಉತ್ತರ ಕನರ್ಾಟಕದಲ್ಲೆ ಅಪರೂಪ ಎನ್ನುವಂತೆ ಮೊಣಕೈಗೆ ಕೀಲು ಜೋಡಣೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದಕ್ಕೆ ಸಹಕಾರಿಯಾಗಿದ್ದು ಪ್ರಧಾನಿ ನರೇಂದ್ರಮೋದಿ ಅವರ ಆಯುಷ್ ಮಾನ್ ಭಾರತ ಆರೋಗ್ಯ ಕನರ್ಾಟಕ ಯೋಜನೆ ವಿಮ್ಸ್ ಆಸ್ಪತ್ರೆಯಲ್ಲಿ ತಿಂಗಳಲ್ಲಿ ಎರಡರಿಂದ ಮೂರು ಶಸé್ರಚಿಕಿತ್ಸೆ ನಡೆಯುತ್ತಿವೆ. ಆಗಿಂದಾಗಲೇ ವೈದ್ಯರು, ಆಸ್ಪತ್ರೆಯಲ್ಲಿರುವ ಸೌಲಭ್ಯಗಳಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. 

ಈ ಆಸ್ಪತ್ರೆಯ ಎಲಬು, ಕೀಲು, ಮೂಳೆ ವಿಭಾಗದ ಡಾ|| ಶ್ರೀನಿವಾಸ ಮತ್ತಿತರರ ತಂಡ ಮೊಳಕಾಲ್ಮೂರಿನ ಮಮ್ತಾಜ ಎಂಬ 53 ವರ್ಷದ ಮಹಿಳೆ ಟ್ಯಾಕ್ಟರ್ ಅಪಘಾತದಲ್ಲಿ ಎರಡು ಕೈಗಳನ್ನು ಮುರಿದುಕೊಂಡಿದ್ದರೂ ಎಡಗೈನ ಮೂಳೆ ಜೋಡಿಸಿದ ವೈದ್ಯರು ಬಲಗೈ ಮೂಳೆ ಜೋಡಿಸಲು ಬರದಸ್ಥಿತಿಯಲ್ಲಿದ್ದರಿಂದ ಕೀಲು, ಮರುಜೋಡಣೆಗೆ ಮುಂದಾದರು. ಖಾಸಗಿ ಆಸ್ಪತ್ರೆಯಲ್ಲಾದರೇ ಈ ಚಿಕಿತ್ಸೆಗೆ ಕನಿಷ್ಠ 2ರಿಂದ 5 ಲಕ್ಷ ರೂ ಬೇಕು. ಕೃತಕಕೀಲು ಭಾಗವೇ 48 ಸಾವಿರ ರೂ ಮೊತ್ತದ್ದಾಗಿದೆ. ಇದನ್ನು ಆಯುಷ್ ಮಾನ್ ಭಾರತ ಆರೋಗ್ಯ ಕನರ್ಾಟಕ ಯೋಜನೆ ಅಡಿ ತರಿಸಿ ಅವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿದ್ದಾರೆ. ಮೂರು ತಾಷಿನ ಈ  ಶಸ್ತ್ರಚಿಕಿತ್ಸೆ ಕಾರ್ಯದಲ್ಲಿ ಡಾ|| ಎನ್ ಶ್ರೀನಿವಾಸ ಮುಖ್ಯ ಶಸ್ತ್ರಚಿಕಿತ್ಸೆ ಚಿಕಿತ್ಸಾಧಿಕಾರಿಯಾಗಿ ಇವರಿಗೆ ಸಹಾಯಕರಾಗಿ ಡಾ|| ಗುರುದತ್ತ, ಡಾ|| ದೇವೆಂದ್ರಪ್ಪ ಹೆಚ್. ಡಾ|| ಸೈಯದ್ ಸಾದಿಕ್ ಹುಸೇನ್, ಡಾ|| ಷಡರಾಕ್, ಹಾಗೂ ಸ್ನಾತಕೊತ್ತರ ವಿದ್ಯಾಥರ್ಿಗಳು ಅರವಳಿಕೆ ವಿಭಾಗದ ಡಾ|| ಶ್ರೀನಿವಾಸುಲು, ಡಾ|| ಕಿರಣ್, ಡಾ|| ಬಾಲಸುಬ್ರವ್ಮಣ್ಯಂ ನೆರವಾಗಿದ್ದರು. ಈ ಕುರಿತು ಆಸ್ಪತ್ರೆಯ ಅಧೀಕ್ಷಕ ಡಾ|| ಅರುಣಕುಮಾರ ಸೋಮುವಾರ ಸುದ್ದಿಗೋಷ್ಟಿ ನಡೆಸಿ ವಿವರಣೆ ನೀಡಿದರು. ಸಕರ್ಾರದ ಯೋಜನೆ ಮೂಲಕ ನಮ್ಮ ವೈದ್ಯರು ಮಾಡಿದ ಈ ಶಸ್ತ್ರಚಿಕಿತ್ಸೆ ಶ್ಲಾಘನೀಯ ಎಂದರು. ಇದೇ ರೀತಿ 6 ತಿಂಗಳ ಹಿಂದೆ ಕೊಟ್ಟೂರಿನ ಸಿದ್ದಲಿಂಗಪ್ಪ ಎಂಬುವವರಿಗೆ ಬುಜದ ಕೀಲು ಶಸé್ರಚಿಕಿತ್ಸೆಯನ್ನು ಮಾಡಿದ್ದೇವೆ ಎಂದು ತಿಳಿಸಿದರು. ಶಸ್ತ್ರಚಿಕಿತ್ಸೆ ಪಡೆದ ಮಮ್ತಾಜ್ ತನಗೆ ಈ ರೀತಿ ಶಸ್ತ್ರಚಿಕಿತ್ಸೆ ಉಚಿತವಾಗಿ ಈ ವಿಮ್ಸ್ ಆಸ್ಪತ್ರೆಯಲ್ಲಿ ದೊರೆತಿರುವುದಕ್ಕೆ ಸಂತಸವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಡಾ|| ಕೃಷ್ಣಾ, ವಿಮ್ಸ್ ಸಹಾಯಕ ಆಡಳಿತಾಧಿಕಾರಿ ಚಿನ್ನ ಮಾರಣ್ಣ ಸೇರಿದಂತೆ ಇನ್ನೂ ಹಲವಾರು ವೈದ್ಯರು ಉಪಸ್ಥಿತರಿದ್ದರು. 


 

ಸುದ್ದಿ ಓದಿ